ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಆ್ಯಷಸ್ ಸರಣಿಗಿಂತ ಭಾರತ-ಪಾಕಿಸ್ತಾನ ಸರಣಿಗೆ ಹೆಚ್ಚು ಅಭಿಮಾನಿಗಳಿದ್ದಾರೆ'

India-Pakistan series was followed much more than The Ashes, says Inzamam-Ul-Haq

ಕರಾಚಿ: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಬಹುತೇಕ ಎಲ್ಲಾ ಪಂದ್ಯಗಳಲ್ಲಿ ಭಾರತ-ಪಾಕಿಸ್ತಾನ ತಂಡಗಳು ಪಾಲ್ಗೊಳ್ಳುತ್ತಿದ್ದ ಕಾಲವೊಂದಿತ್ತು. ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾ ಸ್ಟೇಡಿಯಂ ಕೂಡ ಭಾರತ-ಪಾಕ್ ಅದೆಷ್ಟೋ ದ್ವಿಪಕ್ಷೀಯ ಸರಣಿಗಳಿಗೆ ಸಾಕ್ಷಿಯಾಗಿದೆ.

ಎಂಎಸ್ ಧೋನಿಯಿಂದ ಭಾರತದ ನಾಯಕತ್ವ ಸಿಗಲಿಲ್ಲ: ಯುವರಾಜ್ ಸಿಂಗ್ಎಂಎಸ್ ಧೋನಿಯಿಂದ ಭಾರತದ ನಾಯಕತ್ವ ಸಿಗಲಿಲ್ಲ: ಯುವರಾಜ್ ಸಿಂಗ್

ಗಡಿ ವಿವಾದದಲ್ಲಿ ರಾಜಕೀಯದ ಅಡ್ಡಗಾಲಿನಿಂದಾಗಿ ಇತ್ತಂಡಗಳ ಕುತೂಹಲಕಾರಿ ಸರಣಿ ಈಗ ನಿಲ್ಲಿಸಲ್ಪಟ್ಟಿದೆ. ಐಸಿಸಿ ಅತೀ ಪ್ರಮುಖ ಪಂದ್ಯಗಳಿದ್ದರೆ ಮಾತ್ರ ಭಾರತ-ಪಾಕಿಸ್ತಾನ ಮುಖಾಮುಖಿಯಾಗುತ್ತಿದೆ. ಕಡೇಯ ಸಾರಿ ಭಾರತ-ಪಾಕಿಸ್ತಾನ ಪಂದ್ಯ ನಡೆದಿದ್ದು 2019ರ ವಿಶ್ವಕಪ್‌ನಲ್ಲಿ. ಅಂದಿನ ಪಂದ್ಯದಲ್ಲಿ ಭಾರತ ಗೆದ್ದಿತ್ತು.

ಭಾರತ-ಪಾಕಿಸ್ತಾನ ಪಂದ್ಯಗಳಿದ್ದಾಗ ಪಾಕ್‌ ಪರ ಭರ್ಜರಿ ಬ್ಯಾಟಿಂಗ್ ಮೂಲಕ ಪಾಕ್‌ಗೆ ಬಲ ತುಂಬುತ್ತಿದ್ದ ಮಾಜಿ ನಾಯಕ ಇನ್ಝಮಾಮ್ ಉಲ್ ಹಕ್ ಕೂಡ ಭಾರತ-ಪಾಕಿಸ್ತಾನ ಪಂದ್ಯಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದಿದ್ದಾರೆ. ಎರಡೂ ತಂಡಗಳ ನಡುವಿನ ಸರಣಿ ಅತೀ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ ಎಂದು ಹಕ್ ಹೇಳಿದ್ದಾರೆ.

WTC Final ಪಂದ್ಯದಲ್ಲಿ ಆ ಸ್ಟಾರ್ ಬೌಲರ್ ಬದಲು ಸಿರಾಜ್‌ಗೆ ಅವಕಾಶ ನೀಡಲು ವಿರಾಟ್ ಕೊಹ್ಲಿ ಚಿಂತನೆ!WTC Final ಪಂದ್ಯದಲ್ಲಿ ಆ ಸ್ಟಾರ್ ಬೌಲರ್ ಬದಲು ಸಿರಾಜ್‌ಗೆ ಅವಕಾಶ ನೀಡಲು ವಿರಾಟ್ ಕೊಹ್ಲಿ ಚಿಂತನೆ!

'ಆ್ಯಷಸ್ ಸರಣಿಗಿಂತ ಅದೆಷ್ಟೋ ಹೆಚ್ಚು ಪಟ್ಟು ಜನ ಭಾರತ-ಪಾಕಿಸ್ತಾನ ಸರಣಿಯನ್ನು ಹಿಂಬಾಲಿಸುತ್ತಾರೆ, ಕುತೂಹಲದಿಂದ ವೀಕ್ಷಿಸುತ್ತಾರೆ. ಜನ ಇತ್ತಂಡಗಳ ಪಂದ್ಯದ ಪ್ರತೀ ಕ್ಷಣವನ್ನೂ ಎಂಜಾಯ್ ಮಾಡ್ತಾರೆ. ಭಾರತ-ಪಾಕಿಸ್ತಾನ ಮಧ್ಯೆ ಏಷ್ಯಾಕಪ್‌ ಮತ್ತು ದ್ವಿಪಕ್ಷೀಯ ಸರಣಿಗಳು ನಡೆಯೋದು ತುಂಬಾ ಮುಖ್ಯ,' ಎಂದು ಹಕ್ ಹೇಳಿದ್ದಾರೆ.

Story first published: Thursday, June 10, 2021, 18:24 [IST]
Other articles published on Jun 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X