2019ರ ವಿಶ್ವಕಪ್‌ನಲ್ಲಿ ಭಾರತದ ಸೋಲಿಗೆ ಸ್ವಾರಸ್ಯಕರ ಕಾರಣ ಹೇಳಿದ ಚೋಪ್ರಾ

ಮುಂಬೈ: 2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಐಸಿಸಿ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಮುಂದಾಳತ್ವದ ಟೀಮ್ ಇಂಡಿಯಾ ಮೂರನೇ ಬಾರಿಗೆ ಕ್ರಿಕೆಟ್ ವಿಶ್ವಕಪ್ ಗೆಲುವಿನ ಆಸೆ ಮೂಡಿಸಿತ್ತು. ಪ್ರತಿಷ್ಠಿತ ಟೂರ್ನಿಯಲ್ಲಿ ಆರಂಭದ ಎಲ್ಲಾ ಪಂದ್ಯಗಳನ್ನು ಗೆಲ್ಲುತ್ತಾ ಸಾಗಿದ್ದ ಭಾರತ, 38ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ, ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲಿನ ಆಘಾತ ಅನುಭವಿಸಿತ್ತು. ಟೂರ್ನಿಯಿಂದಲೇ ಹೊರ ಬಿದ್ದಿತ್ತು.

ಐಸಿಸಿ ಟೆಸ್ಟ್ ಚಾಂಪಿಯನ್‌ಷಿಪ್‌: ಭಾರತ ನಂ.1 ತಂಡ, ಬ್ರಾಡ್ ನಂ.1 ಬೌಲರ್!

ಬ್ಲೂ ಬಾಯ್ಸ್ ಪಡೆಯ ಸೋಲಿಗೆ ಸಾಕಷ್ಟು ಕಾರಣಗಳಿರಬಹುದು. ಆದರೆ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಒಂದಿಷ್ಟು ಸ್ವಾರಸ್ಯಕರ ಕಾರಣಗಳನ್ನು ಕೊಟ್ಟಿದ್ದಾರೆ. ಚೋಪ್ರಾ ಹೇಳಿರುವ ಈ ಕಾರಣಗಳು ನಿಜವೂ ಅನ್ನಿಸುತ್ತದೆ.

ವಿಚಿತ್ರ ಸಮಸ್ಯೆ ಹಿಡ್ಕೊಂಡು ಸಚಿನ್ ಬಳಿಗೆ ಬಂದಿದ್ದರಂತೆ ವಿರಾಟ್ ಕೊಹ್ಲಿ!

2019ರ ವಿಶ್ವಕಪ್‌ನಲ್ಲಿ ಭಾರತದ ಸೋಲಿಗೆ ಆಕಾಶ್ ಚೋಪ್ರಾ ಕೊಟ್ಟಿರುವ ಪ್ರಮುಖ ಕಾರಣಗಳು ಇಂತಿವೆ.

ಗೆಲ್ಲುವ ತಂಡವೇ ಇರಲಿಲ್ಲ

ಗೆಲ್ಲುವ ತಂಡವೇ ಇರಲಿಲ್ಲ

ಕಳೆದ ಬಾರಿಯ ಇಂಗ್ಲೆಂಡ್ ವಿಶ್ವಕಪ್‌ನಲ್ಲಿ ಭಾರತದಲ್ಲಿ ಗೆಲ್ಲುವ ತಂಡವೇ ಇರಲಿಲ್ಲ. ಇದೇ ಕಾರಣದಿಂದಾಗಿ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿದ್ದ ಭಾರತ ನ್ಯೂಜಿಲೆಂಡ್‌ ವಿರುದ್ಧದ ಸೆಮಿಫೈನಲ್‌ನಲ್ಲಿ ಹೊರ ಬಿದ್ದಿತು. ತಂಡದ ಸಮತೋಲನವೂ ಸರಿಯಿರಲಿಲ್ಲ ಎಂದು ಚೋಪ್ರಾ ಸೋಮವಾರ ಹೇಳಿದ್ದಾರೆ.

ಎರಡು ತಂಡಗಳಿಗೆ ಹೋಲಿಕೆ

ಎರಡು ತಂಡಗಳಿಗೆ ಹೋಲಿಕೆ

ತನ್ನ ಯೂ ಟ್ಯೂಬ್ ಚಾನೆಲ್ 'ಆಕಾಶ್ ವಾಣಿ'ಯಲ್ಲಿ ಮಾತನಾಡಿದ ಆಕಾಶ್ ಚೋಪ್ರಾ, ಭಾರತದ ಎರಡು ತಂಡಗಳನ್ನು ಹೋಲಿಸಿದರು. 'ನಿಮ್ಮಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ರೋಹಿತ್ ಶರ್ಮಾ ಇವರಲ್ಲಿ ಒಬ್ಬರನ್ನು ಆರಿಸಿ ಎಂದಾಗ ನೀವು ಯಾರನ್ನು ಆರಿಸುತ್ತೀರಿ? ಕಳೆದ ವಿಶ್ವಕಪ್‌ನಲ್ಲಿ ರೋಹಿತ್ ಯಾರೂ ಮಾಡದ 5 ಶತಕಗಳನ್ನು ಬಾರಿಸಿದ್ದರಿಂದ ಸಚಿನ್-ರೋಹಿತ್‌ರಲ್ಲಿ ಒಬ್ಬರನ್ನು ಆರಿಸೋದು ತುಂಬಾ ಕಷ್ಟವೆನಿಸುತ್ತದೆ. ಅದೇ ಕೆಎಲ್ ರಾಹುಲ್/ಶಿಖರ್ ಧವನ್ ಮತ್ತು ವೀರೇಂದ್ರ ಸೆಹ್ವಾಗ್ ಇವರಲ್ಲಿ ಒಬ್ಬರನ್ನು ಆರಿಸು ಎಂದರೆ ನನ್ನ ಹೃದಯ ಸೆಹ್ವಾಗ್ ಅವರತ್ತ ಹೋಗುತ್ತದೆ,' ಎಂದು ಚೋಪ್ರಾ ವಿವರಿಸಿದರು.

ಯುವರಾಜ್ ರೇಸ್ ಗೆಲ್ಲುತ್ತಾರೆ

ಯುವರಾಜ್ ರೇಸ್ ಗೆಲ್ಲುತ್ತಾರೆ

ಮಾತು ಮುಂದುವರೆಸಿದ ಆಕಾಶ್, 'ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಇವರಲ್ಲಿ ಆರಿಸುವುದಾದರೆ 2011ರ ಗಂಭೀರ್‌ಗಿಂತ 2019ರ ಕೊಹ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಇನ್ನು ದಿನೇಶ್ ಕಾರ್ತಿಕ್/ಕೇದಾರ್ ಜಾಧವ್/ರಿಷಭ್ ಪಂತ್/ಹಾರ್ದಿಕ್ ಪಾಂಡ್ಯ ಇವರಲ್ಲಿ, ಬ್ಯಾಟಿಂಗ್, ಬೌಲಿಂಗ್ ಪಂದ್ಯ ಗೆಲ್ಲಿಸುವ ಎಲ್ಲಾ ರೀತಿಯಲ್ಲೂ ಯುವರಾಜ್ ಸಿಂಗ್ ರೇಸ್ ಗೆಲ್ಲುತ್ತಾರೆ,' ಎಂದರು.

ಹರ್ಭಜನ್, ಜಡೇಜಾ 50-50

ಹರ್ಭಜನ್, ಜಡೇಜಾ 50-50

'2011ರ ಎಂಎಸ್ ಧೋನಿ ಮತ್ತು 2019ರ ಧೋನಿಯಲ್ಲಿ 2011ರ ಧೋನಿಯೇ ಗೆಲ್ಲುತ್ತಾರೆ. ಹರ್ಭಜನ್ ಸಿಂಗ್ ಕೂಡ ಮ್ಯಾಚ್ ವಿನ್ನರ್. ಹೀಗಾಗಿ ರವೀಂದ್ರ ಜಡೇಜಾ 50-50ಕ್ಕೆ ಬರುತ್ತಾರೆ. ಜಡ್ಡು ಫೀಲ್ಡಿಂಗ್‌ನಲ್ಲಿ ಹೆಚ್ಚು ಅಂಕ ಗಳಿಸುತ್ತಾರೆ, ಭಜ್ಜಿ ಬೌಲಿಂಗ್‌ನಲ್ಲಿ. ಮತ್ತೆ ಝಹೀರ್ ಖಾನ್ ಮತ್ತು ಜಸ್‌ಪ್ರೀತ್ ಬೂಮ್ರಾರಲ್ಲಿ ನೋಡಿದರೆ ಬೌಲರ್ ಆಗಿ ಇಬ್ಬರೂ ಕೂಡ ಮ್ಯಾಚ್ ವಿನ್ನರ್‌ಗಳೇ. ಇನ್ನು ಮೊಹಮ್ಮದ್ ಶಮಿ ಮುನಾಫ್ ಪಟೇಲ್‌ಗಿಂತ ಕೊಂಚ ಎದುರು ಕಾಣಿಸುತ್ತಾರೆ.

ಎಂಎಸ್ ಧೋನಿ ತಂಡವೇ ಬಲಿಷ್ಠ

ಎಂಎಸ್ ಧೋನಿ ತಂಡವೇ ಬಲಿಷ್ಠ

2011 ಮತ್ತು 2019ರ ಟೀಮ್ ಇಂಡಿಯಾ ಆಟಗಾರರಿಗೆ ಹೋಲಿಸಿದ ಚೋಪ್ರಾ, 'ಎರಡೂ ತಂಡದ ಸಂಪೂರ್ಣ ಹೋಲಿಕೆ ಗಮನಿಸಿದರೆ ಇದರಲ್ಲಿ 2011ರ ಎಂಎಸ್ ಧೋನಿ ತಂಡವೇ ಗೆಲ್ಲುತ್ತದೆ. ಇದಕ್ಕಾಗಿಯೇ ಧೋನಿಯ ತಂಡ ಬಲಿಷ್ಠ ಮತ್ತು ಮ್ಯಾಚ್ ವಿನ್ನಿಂಗ್‌ ತಂಡ ಅನ್ನಿಸುತ್ತದೆ,' ಎಂದು ಅಭಿಪ್ರಾಯಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, July 27, 2020, 17:07 [IST]
Other articles published on Jul 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X