ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯಿಂದ ಬೂಮ್ರಾ ಹೊರಕ್ಕೆ

India rest Jasprit Bumrah for ODI series against Australia, New Zealand

ನವದೆಹಲಿ, ಜನವರಿ 8: ಮುಂಬರಲಿರುವ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯಿಂದ ಭಾರತದ ಮಧ್ಯಮ ವೇಗಿ ಜಸ್‌ಪ್ರೀತ್‌ ಬೂಮ್ರಾ ಹೊರಗುಳಿದಿದ್ದಾರೆ. ಬೂಮ್ರಾಗೆ ವಿಶ್ರಾಂತಿ ನೀಡಿರುವ ಬಿಸಿಸಿಐ, ಅವರ ಸ್ಥಾನಕ್ಕೆ ಬದಲಿ ಆಯ್ಕೆ ನಡೆಸಿದೆ. ಆಸೀಸ್ ವಿರುದ್ಧದ ಏಕದಿನ ಸರಣಿ ಜನವರಿ 12ರಿಂದ ಆರಂಭಗೊಳ್ಳಲಿದೆ.

ಟೆಸ್ಟ್: ಭಾರತಕ್ಕೆ ತಲೆ ಬಾಗಿದ್ದೇವೆ ಎಂದ ಪೈನೆ, ಟ್ವಿಟರ್ ಪ್ರತಿಕ್ರಿಯೆಗಳುಟೆಸ್ಟ್: ಭಾರತಕ್ಕೆ ತಲೆ ಬಾಗಿದ್ದೇವೆ ಎಂದ ಪೈನೆ, ಟ್ವಿಟರ್ ಪ್ರತಿಕ್ರಿಯೆಗಳು

'ಕೆಲಸದ ಹೊರೆಯ ಕಾರಣ ಬೌಲರ್‌ ಬೂಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಮುಂಬರಲಿರುವ ಆಸ್ಟ್ರೇಲಿಯಾ ಮತ್ತು ಏಕದಿನ ಸರಣಿಗೆ ಭಾರತ ತಂಡದಲ್ಲಿ ಬೂಮ್ರಾ ಸ್ಥಾನವನ್ನು ಮೊಹಮ್ಮದ್ ಸಿರಾಜ್‌ ತುಂಬಲಿದ್ದಾರೆ' ಎಂದು ಬಿಸಿಸಿಐ ಮಂಗಳವಾರ (ಜನವರಿ 8) ನೀಡಿರುವ ಹೇಳಿಕೆಯಲ್ಲಿ ತಿಳಿಸಿದೆ.

'ನ್ಯೂಜಿಲ್ಯಾಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಗೆ ಸಿದ್ಧಾರ್ಥ್ ಕೌಲ್ ಅವರನ್ನೂ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ' ಎಂದು ಬಿಸಿಸಿಐ ಹೇಳಿಕೊಂಡಿದೆ. 12 ತಿಂಗಳ ಹಿಂದಷ್ಟೇ ಟೆಸ್ಟ್‌ಗೆ ಪಾದಾರ್ಪಣೆ ಮಾಡಿರುವ ಬೂಮ್ರಾ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಭಾರತ ತಂಡದ ಶಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.

ಭಾರತ Vs ಆಸ್ಟ್ರೇಲಿಯಾ ಸರಣಿ: ಕೊಹ್ಲಿ ಬಳಗದ ಸಾಧನೆಗಳ ಅಂಕಿ ಅಂಶಭಾರತ Vs ಆಸ್ಟ್ರೇಲಿಯಾ ಸರಣಿ: ಕೊಹ್ಲಿ ಬಳಗದ ಸಾಧನೆಗಳ ಅಂಕಿ ಅಂಶ

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಜಸ್‌ಪ್ರೀತ್ ಬೌಲಿಂಗ್‌ಗಾಗಿ ಮಿಂಚಿದ್ದರು. ಬೌಲಿಂಗ್ ಮತ್ತು ಬ್ಯಾಟಿಂಗ್‌ ಎರಡೂ ವಿಭಾಗದ ಪ್ರದರ್ಶನದಿಂದಾಗಿ ಭಾರತ ಆಸೀಸ್ ನೆಲದಲ್ಲಿ 71 ವರ್ಷಗಳ ಬಳಿಕ ಚೊಚ್ಚಲ ಟೆಸ್ಟ್ ಸರಣಿ ಗೆದ್ದ ಖುಷಿಯನ್ನು ಸಂಭ್ರಮಿಸುವಂತಾಗಿತ್ತು.

Story first published: Tuesday, January 8, 2019, 12:34 [IST]
Other articles published on Jan 8, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X