ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದಿಂದ ಮರಳಿದ ದಕ್ಷಿಣ ಆಫ್ರಿಕಾ ಕ್ರಿಕೆಟರ್ಸ್‌ಗೆ ಕೊರೊನಾ ಇಲ್ಲ

India-returned South Africa cricketers are COVID-19 negative

ಕೇಪ್‌ಟೌನ್, ಏಪ್ರಿಲ್ 3: ಭಾರತಕ್ಕೆ ಪ್ರವಾಸ ಬಂದು ಅರ್ಧದಿಂದಲೇ ತಾಯ್ನಾಡಿಗೆ ಮರಳಿರುವ ದಕ್ಷಿಣ ಆಫ್ರಿಕಾ ಕ್ರಿಕೆಟರ್ಸ್‌ಗೆ ಕೊರೊನಾವೈರಸ್ ಸೋಂಕು ಇಲ್ಲ. ಪ್ರೋಟಿಯಾಸ್‌ಗೆ ನಡೆಸಿದ ಕೊರೊನಾವೈರಸ್ ಪರೀಕ್ಷೆಯ ಫಲಿತಾಂಶ ನೆಗೆಟಿವ್ ಎಂದು ಬಂದಿದೆ. ಮೂರು ಪಂದ್ಯಗಳ ಏಕದಿನ ಸರಣಿಗಾಗಿ ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಪ್ರವಾಸ ಬಂದಿತ್ತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಗ್ಗೆ ಬಾಯ್ತೆರೆದ ವಿರಾಟ್ ಕೊಹ್ಲಿರಾಯಲ್ ಚಾಲೆಂಜರ್ಸ್ ಬೆಂಗಳೂರು ಬಗ್ಗೆ ಬಾಯ್ತೆರೆದ ವಿರಾಟ್ ಕೊಹ್ಲಿ

ಭಾರತದಿಂದ ಮರಳಿದ ಬಹುತೇಕ ಎಲ್ಲಾ ಆಟಗಾರರನ್ನೂ ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದೆ. ಅವರೆಲ್ಲರ ಫಲಿತಾಂಶಗಳೂ ನೆಗೆಟಿವ್ ಎಂದು ಬಂದಿದೆ. ಪರೀಕ್ಷೆಗೆ ಒಳಗಾಗದ ಕೆಲವರಲ್ಲಿ ಯಾವುದೇ ರೋಗಲಕ್ಷಣಗಳಿಲ್ಲ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಹೇಳಿದೆ.

2011ರ ವಿಶ್ವಕಪ್‌ನಲ್ಲಿ ಪೃಥ್ವಿ ಶಾ ಹೇಗಿದ್ರು ಗೊತ್ತಾ? ಶಾ, ಅರ್ಜುನ್ ತೆಂಡೂಲ್ಕರ್ ಫೋಟೋ ವೈರಲ್2011ರ ವಿಶ್ವಕಪ್‌ನಲ್ಲಿ ಪೃಥ್ವಿ ಶಾ ಹೇಗಿದ್ರು ಗೊತ್ತಾ? ಶಾ, ಅರ್ಜುನ್ ತೆಂಡೂಲ್ಕರ್ ಫೋಟೋ ವೈರಲ್

ಭಾರತಕ್ಕೆ ದಕ್ಷಿಣ ಆಫ್ರಿಕಾದ ಪ್ರವಾಸದ ಆರಂಭಿಕ ಏಕದಿನ ಪಂದ್ಯ ಮಳೆಯಿಂದಾಗಿ ಟಾಸ್ ಕೂಡ ನಡೆಯದೆ ರದ್ದಾಗಿತ್ತು. ಇನ್ನುಳಿದ ಎರಡು ಪಂದ್ಯಗಳು ಕೊರೊನಾವೈರಸ್‌ ಭೀತಿಯಿಂದಾಗಿ ರದ್ದಾಯಿತು. ಅಲ್ಲಿಗೆ ಪ್ರವಾಸದ ಒಂದೂ ಪಂದ್ಯ ಆಡದೆ ಆಫ್ರಿಕಾ ತಂಡ ತವರಿಗೆ ವಾಪಸ್ಸಾಗುವಂತಾಗಿತ್ತು.

ಸಚಿನ್, ಗಂಗೂಲಿ, ಕೊಹ್ಲಿ ಸೇರಿದಂತೆ ಕ್ರೀಡಾಪಟುಗಳೊಂದಿಗೆ ಪ್ರಧಾನಿ ಮಾತುಸಚಿನ್, ಗಂಗೂಲಿ, ಕೊಹ್ಲಿ ಸೇರಿದಂತೆ ಕ್ರೀಡಾಪಟುಗಳೊಂದಿಗೆ ಪ್ರಧಾನಿ ಮಾತು

ಭಾರತದಿಂದ ಮಾರ್ಚ್ 18ಕ್ಕೆ ದಕ್ಷಿಣ ಆಫ್ರಿಕಾಕ್ಕೆ ಬಂದಿದ್ದ ಕ್ರಿಕೆಟಿಗರು ಗುರುವಾರಕ್ಕೆ (ಏಪ್ರಿಲ್ 2) 14 ದಿನಗಳ ಸೆಲ್ಫ್ ಐಸೊಲೇಶನ್ ಮುಗಿಸಿದ್ದಾರೆ. ಆದರೆ ದಕ್ಷಿಣ ಆಫ್ರಿಕಾದಲ್ಲಿ ಲಾಕ್‌ಡೌನ್ ಇರುವುದರಿಂದ ಕ್ರಿಕೆಟಿಗರು ಇನ್ನೆರಡು ವಾರ ಲಾಕ್‌ಡೌನ್‌ಗೆ ಒಳಗಾಗಬೇಕಾಗಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್‌ನ ಮುಖ್ಯ ವೈದ್ಯಾಧಿಕಾರಿ ಡಾ. ಶುಯೈಬ್ ಮಂಜ್ರಾ ಮಾಹಿತಿ ನೀಡಿದ್ದಾರೆ.

Story first published: Friday, April 3, 2020, 15:08 [IST]
Other articles published on Apr 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X