ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪುರುಷ-ಮಹಿಳೆಯರ ಸೇರಿಸಿದ ಭಾರತದ ಅತ್ಯುತ್ತಮ ಟಿ20 XI ಹೇಗಿದೆ ನೋಡಿ!

India’s Current Best Mixed-Gender T20 XI is here

ನವದೆಹಲಿ: ಪ್ರಸ್ತುತ ಕ್ರಿಕೆಟ್ ದಿನಗಳಲ್ಲಿ ಭಾರತೀಯ ಪುರುಷ ಮತ್ತು ಮಹಿಳಾ ಎರಡೂ ತಂಡಗಳೂ ಬಲಿಷ್ಠವಾಗಿವೆ. ಮಹಿಳಾ ತಂಡ ಸ್ಥರವಾಗಿಲ್ಲ ನಿಜ. ಆದರೆ ಮಹಿಳಾ ತಂಡದಲ್ಲಿ ಒಳ್ಳೊಳ್ಳೆ ಪ್ರತಿಭಾನ್ವಿತ ಆಟಗಾರ್ತಿಯರಿದ್ದಾರೆ. ಭಾರತೀಯ ಪುರುಷರ ತಂಡದಲ್ಲಿರುವ ಪ್ರತಿಭಾನ್ವಿತ ಆಟಗಾರರು ಮತ್ತು ಮಹಿಳಾ ತಂಡದ ಆಟಗಾರ್ತಿಯರನ್ನು ಹೆಕ್ಕಿ ತಂಡ ರಚಿಸಿ ಆಡಿಸಿದರೆ ಹೇಗಿರಬಹುದು?. ಅಂಥದ್ದೊಂದು ಮಿಕ್ಸ್ಡ್‌ ಜೆಂಡರ್ ಟೀಮ್ ಇಲ್ಲಿದೆ.

ನ್ಯೂಜಿಲೆಂಡ್‌ನ ಕ್ರಿಕೆಟ್ ಪೇಜ್‌ನಲ್ಲಿ ಭಾರತಕ್ಕೆ ಅವಮಾನ, ಪೋಸ್ಟ್‌ಗೆ ಕಿವೀಸ್ ಕ್ರಿಕೆಟಿಗರಿಂದ ಲೈಕ್ಸ್!ನ್ಯೂಜಿಲೆಂಡ್‌ನ ಕ್ರಿಕೆಟ್ ಪೇಜ್‌ನಲ್ಲಿ ಭಾರತಕ್ಕೆ ಅವಮಾನ, ಪೋಸ್ಟ್‌ಗೆ ಕಿವೀಸ್ ಕ್ರಿಕೆಟಿಗರಿಂದ ಲೈಕ್ಸ್!

ಈ ಮಿಕ್ಸ್ಡ್ ಜೆಂಡರ್ ಅಂದರೆ ಮಹಿಳೆ-ಪುರುಷರನ್ನು ಸೇರಿಸಿ ತಯಾರಿಸಿದ ಪ್ಲೇಯಿಂಗ್ XI ಟಿ20 ಕ್ರಿಕೆಟ್‌ಗೆ ಸಂಬಂಧಿಸಿದೆ. ಸದ್ಯ ಸಕ್ರಿಯವಾಗಿರುವ ಆಟಗಾರರನ್ನು, ಆಟಗಾರ್ತಿಯರನ್ನು ಸೇರಿಸಿ ಈ ತಂಡ ತಯಾರಿಸಲಾಗಿದೆ. ಈ ತಂಡದಲ್ಲಿ 6 ಮಂದಿ ಪುರುಷರು ಮತ್ತು 5 ಮಂದಿ ಮಹಿಳೆಯರಿದ್ದಾರೆ.

ಆರಂಭಿಕ ಆಟಗಾರರು

ಆರಂಭಿಕ ಆಟಗಾರರು

ಭಾರತೀಯ ಮಿಕ್ಸ್ಡ್ ಜೆಂಡರ್ ಟಿ20 ಪ್ಲೇಯಿಂಗ್ XI ತಯಾರಿಸಿದರೆ ಆರಂಭಿಕರಾಗಿ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಮತ್ತು ಸ್ಫೋಟಕ ಆಟಗಾರ್ತಿ ಶೆಫಾಲಿ ವರ್ಮಾಗೆ ಸ್ಥಾನ ನೀಡಬಹುದು. ಟಿ20ಐ ಕ್ರಿಕೆಟ್‌ನಲ್ಲಿ ಇಬ್ಬರೂ ಅಪಾಯಕಾರಿ ಬ್ಯಾಟ್ಸ್‌ಮನ್‌ಗಳು. ಶೆಫಾಲಿ ಸದ್ಯ ಟಿ20ಐ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿದ್ದಾರೆ. (ರೋಹಿತ್ ಶರ್ಮಾ, ಶೆಫಾಲಿ ವರ್ಮಾ, ಮೀಸಲು ಆಟಗಾರರು: ಕೆಎಲ್ ರಾಹುಲ್, ಶಿಖರ್ ಧವನ್).

ಮಧ್ಯಮ ಕ್ರಮಾಂಕ

ಮಧ್ಯಮ ಕ್ರಮಾಂಕ

ಮಿಕ್ಸ್ಡ್ ಜೆಂಡರ್ ಭಾರತೀಯ ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಸ್ಮೃತಿ ಮಂಧಾನ, ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್‌ಗೆ ಸ್ಥಾನ ಕೊಡಬಹುದು. ಇಲ್ಲಿ ಕೊಹ್ಲಿ ತಂಡದ ನಾಯಕತ್ವ ವಹಿಸಿಕೊಂಡಿದ್ದರೆ, ಯುವ ಆಟಗಾರ ರಿಷಭ್ ಪಂತ್‌ಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ನೀಡಬಹುದು (ಸ್ಮೃತಿ ಮಂಧಾನ, ವಿರಾಟ್ ಕೊಹ್ಲಿ (ನಾಯಕ), ರಿಷಭ್ ಪಂತ್‌ (ವಿಕೆಟ್ ಕೀಪರ್), ಮೀಸಲು ಆಟಗಾರರು: ಜೆಮಿಮಾ ರೋಡ್ರಿಗಸ್, ಶ್ರೇಯಸ್ ಅಯ್ಯರ್ ಮತ್ತು ಸೂರ್ಯಕುಮಾರ್ ಯಾದವ್).

ಆಲ್ ರೌಂಡರ್‌ಗಳು

ಆಲ್ ರೌಂಡರ್‌ಗಳು

ಭಾರತೀಯ ಮಿಕ್ಸ್ಡ್ ಜೆಂಡರ್ ಟಿ20 ತಂಡದಲ್ಲಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಕೈಬಿಟ್ಟಿದ್ದೇವೆ. ಕಾರಣ ಅವರೀಗ ಬೌಲಿಂಗ್ ಮಾಡುತ್ತಿಲ್ಲ. ಹೀಗಾಗಿ ತಂಡದಲ್ಲಿ ರವೀಂದ್ರ ಜಡೇಜಾ, ಹರ್ಮನ್‌ಪ್ರೀತ್‌ ಕೌರ್ ಮತ್ತು ದೀಪ್ತಿ ಶರ್ಮಾಗೆ ಸ್ಥಾನ ನೀಡಬಹುದು (ರವೀಂದ್ರ ಜಡೇಜಾ, ಹರ್ಮನ್‌ಪ್ರೀತ್‌ ಕೌರ್, ದೀಪ್ತಿ ಶರ್ಮಾ, ಮೀಸಲು ಆಟಗಾರರು: ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್).

ಬೌಲರ್‌ಗಳ ಬಣ

ಬೌಲರ್‌ಗಳ ಬಣ

ಪುರುಷ ಮತ್ತು ಮಹಿಳಾ ಆಟಗಾರರನ್ನು ಸೇರಿಸಿ ಟಿ20 ತಂಡ ರಚಿಸುವುದಾದರೆ ವೇಗಿ ಭುವನೇಶ್ವರ್ ಕುಮಾರ್, ಜಸ್‌ಪ್ರೀತ್‌ ಬೂಮ್ರಾ ಮತ್ತು ಶಿಖಾ ಪಾಂಡೆಗೆ ಸ್ಥಾನ ನೀಡಬಹುದು. ಈ ಮೂವರೂ ಕೂಡ ಒಂದು ವೇಳೆ ಮಿಕ್ಸ್ಡ್‌ ಟಿ20ಐ ಟೂರ್ನಿ ನಡೆದರೆ ತಂಡಕ್ಕೆ ಬಲ ತುಂಬಬಲ್ಲರು (ಭುವನೇಶ್ವರ್ ಕುಮಾರ್, ಜಸ್‌ಪ್ರೀತ್‌ ಬೂಮ್ರಾ, ಶಿಖಾ ಪಾಂಡೆ, ಮೀಸಲು ಆಟಗಾರರು: ಪೂನಂ ಯಾದವ್, ಟಿ ನಟರಾಜನ್, ರಾಜೇಶ್ವರಿ ಗಾಯಕ್ವಾಡ್, ರಾಧಾ ಯಾದವ್ ಮತ್ತು ಯುಜ್ವೇಂದ್ರ ಚಾಹಲ್)

Story first published: Tuesday, May 25, 2021, 8:18 [IST]
Other articles published on May 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X