ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪ್ರಥಮ ದರ್ಜೆ ಕ್ರಿಕೆಟರ್ ವಸಂತ್ ರಾಯ್ಜಿ ಸೆಂಚುರಿಗೆ ಸಚಿನ್ ಸಾಕ್ಷಿ!

Indias oldest living first-class cricketer Vasant Raiji turns 100

ಮುಂಬೈ, ಜನವರಿ 26: ಕ್ರಿಕೆಟ್‌ನಲ್ಲಿ ಬಹಳಷ್ಟು ಮಂದಿ ಶತಕ ಬಾರಿಸಬಹುದು. ಆದರೆ ನೈಜ ಬದುಕಿನಲ್ಲಿ ಎಲ್ಲರಿಗೂ ಸೆಂಚುರಿ ಬಾರಿಸಲು ಸಾಧ್ಯವಿಲ್ಲ. ಇಲ್ಲೊಬ್ಬ ಮಾಜಿ ಕ್ರಿಕೆಟರ್ ನಿಜ ಜೀವನದಲ್ಲಿ ಶತಕ ಬಾರಿಸಿದ್ದಾರೆ. ಭಾರತದ ಅತೀ ಹಿರಿಯ ಪ್ರಥಮದರ್ಜೆ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ವಸಂತ್‌ ರಾಯ್ಜಿ ಪಾತ್ರರಾಗಿದ್ದಾರೆ. ಜನವರಿ 26ಕ್ಕೆ ವಸಂತ್ 100ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ಫಸ್ಟ್ ಕ್ಲಾಸ್‌ ಕ್ರಿಕೆಟ್‌ನಲ್ಲಿ ರಾಯ್ಜಿ, ಬಾಂಬೆ (ಈಗಿನ ಮುಂಬೈ) ಮತ್ತು ಬರೋಡಾ ಪರ ಆಡಿದ್ದರು.

ಎಬಿಡಿ, ಫಿಂಚ್‌, ಫಿಲಿಪ್ ಅಬ್ಬರದಾಟ-ಬಿಬಿಎಲ್‌ನಲ್ಲಿ 'ಆರ್‌ಸಿಬಿ' ಡೇ: ವೀಡಿಯೋಎಬಿಡಿ, ಫಿಂಚ್‌, ಫಿಲಿಪ್ ಅಬ್ಬರದಾಟ-ಬಿಬಿಎಲ್‌ನಲ್ಲಿ 'ಆರ್‌ಸಿಬಿ' ಡೇ: ವೀಡಿಯೋ

1940ರ ಅವಧಿಯಲ್ಲಿ ಬಲಗೈ ಬ್ಯಾಟ್ಸ್‌ಮನ್ ಆಗಿದ್ದ ವಸಂತ್‌ ರಾಯ್ಜಿ, 68 ಅತ್ಯಧಿಕ ರನ್‌ನೊಂದಿಗೆ ಒಟ್ಟಿಗೆ 277 ರನ್ ಬಾರಿಸಿದ್ದರು. 13ರ ಹರೆಯದವರಾಗಿದ್ದ ರಾಯ್ಜಿ, ದಕ್ಷಿಣ ಬಾಂಬೆಯಲ್ಲಿರುವ ಬಾಂಬೆ ಜಿಮ್ಖಾನ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಮೊದಲ ಪಂದ್ಯವನ್ನಾಡಿದ್ದರು. ಅಲ್ಲಿಂದ ಇಲ್ಲೀವರೆಗೂ ಭಾರತ ಕ್ರಿಕೆಟ್‌ ಬೆಳೆದು ನಿಂತ ಪರಿಯನ್ನು ಕಂಡ ಏಕೈಕ ಜೀವ ವಸಂತ್ ರಾಯ್ಜಿ.

ಭಾರತ vs ನ್ಯೂಜಿಲೆಂಡ್‌, 2ನೇ ಟಿ20: ಎರಡನೇ ಪಂದ್ಯದಲ್ಲೂ ಟೀಮ್ ಇಂಡಿಯಾ ಭರ್ಜರಿ ಗೆಲುವುಭಾರತ vs ನ್ಯೂಜಿಲೆಂಡ್‌, 2ನೇ ಟಿ20: ಎರಡನೇ ಪಂದ್ಯದಲ್ಲೂ ಟೀಮ್ ಇಂಡಿಯಾ ಭರ್ಜರಿ ಗೆಲುವು

ಭಾರತದ ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ ರಾಯ್ಜಿಯನ್ನು ಭೇಟಿ ಮಾಡಿ ಹಿರಿಯ ಕ್ರಿಕೆಟಿಗನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ರಾಯ್ಜಿ ಜೊತೆಗಿರುವ ಫೋಟೋವನ್ನು ಸಚಿನ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

'ಶ್ರೀ ವಸಂತ್ ರಾಯ್ಜಿ ಅವರೆ, ನಿಮಗೆ ನಾವು 100ನೇ ಹುಟ್ಟುಹಬ್ಬದ ವಿಶೇಷ ಶುಭಾಶಯಗಳನ್ನು ಕೋರುತ್ತಿದ್ದೇವೆ. ಗತ ಕಾಲದ ಕ್ರಿಕೆಟ್‌ನ ಅದ್ಭುತ ಕತೆಗಳನ್ನು ಕೇಳುತ್ತ ನಾನು ಮತ್ತು ಸ್ಟೀವ್ ಇಲ್ಲಿ ಅಪರೂಪದ ಕ್ಷಣಗಳನ್ನು ಕಳೆದಿದ್ದೇವೆ. ನೆಚ್ಚಿನ ಕ್ರೀಡೆ ಕ್ರಿಕೆಟ್‌ನ ಬಗ್ಗೆ ನೆನಪುಗಳ ನಿಧಿಯನ್ನು ನಮಗೆ ರವಾನಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು,' ಎಂದು ಟ್ವಿಟರ್‌ನಲ್ಲಿ ಸಚಿನ್ ಬರೆದುಕೊಂಡಿದ್ದಾರೆ.

Story first published: Sunday, January 26, 2020, 17:09 [IST]
Other articles published on Jan 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X