ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸೀಸ್: 3ನೇ ಏಕದಿನ ಪಂದ್ಯಕ್ಕೆ ಭಾರತ ಸಂಭಾವ್ಯ XI ತಂಡ

India’s predicted XI for 3rd ODI – Couple of changes expected in Ranchi

ರಾಂಚಿ, ಮಾರ್ಚ್ 7: ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-0ಯ ಮುನ್ನಡೆಯಲ್ಲಿರುವ ಭಾರತ, ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಝಾರ್ಖಂಡ್‌ನ ರಾಂಚಿಯಲ್ಲಿ ಶುಕ್ರವಾರ (ಮಾರ್ಚ್ 8) ನಡೆಯುವ ಮೂರನೇ ಪಂದ್ಯಕ್ಕೆ ಮೈದಾನಕ್ಕಿಳಿಯಲು ಸಜ್ಜಾಗಿದೆ. ಪಂದ್ಯ 1.30ಕ್ಕೆ ಆರಂಭಗೊಳ್ಳಲಿದೆ.

ಏಕದಿನ ಪಂದ್ಯ: ಡಿ ಕಾಕ್ ಅಬ್ಬರ, ಶ್ರೀಲಂಕಾಕ್ಕೆ ಸೋಲುಣಿಸಿದ ದಕ್ಷಿಣ ಆಫ್ರಿಕಾಏಕದಿನ ಪಂದ್ಯ: ಡಿ ಕಾಕ್ ಅಬ್ಬರ, ಶ್ರೀಲಂಕಾಕ್ಕೆ ಸೋಲುಣಿಸಿದ ದಕ್ಷಿಣ ಆಫ್ರಿಕಾ

ನಾಗ್ಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ 8 ರನ್ ರೋಚಕ ಗೆಲುವನ್ನಾಚರಿಸಿತ್ತು. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಮತ್ತು ವಿಜಯ್ ಶಂಕರ್ ಅವರ ಆಲ್ ರೌಂಡರ್ ಆಟ ತಂಡದ ಗೆಲುವಿನ ನೆರವು ನೀಡಿತ್ತು. ಮೂರನೇ ಪಂದ್ಯದಲ್ಲೂ ಗೆದ್ದು ಸರಣಿ ವಶಪಡಿಸಿಕೊಳ್ಳುವ ಯೋಜನೆಯಲ್ಲಿ ಕೊಹ್ಲಿ ಬಳಗವಿದೆ.

ಸ್ಮಿತ್, ವಾರ್ನರ್‌ನಿಂದಾಗಿ ಆಸ್ಟ್ರೇಲಿಯಾ ವಿಶ್ವಕಪ್ ಗೆಲ್ಲಲಿದೆ: ಶೇನ್ ವಾರ್ನ್ಸ್ಮಿತ್, ವಾರ್ನರ್‌ನಿಂದಾಗಿ ಆಸ್ಟ್ರೇಲಿಯಾ ವಿಶ್ವಕಪ್ ಗೆಲ್ಲಲಿದೆ: ಶೇನ್ ವಾರ್ನ್

ಹಿಂದಿನ ಎರಡೂ ಪಂದ್ಯಗಳಿಗೆ ಹೋಲಿಸಿದರೆ ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಡುವ 11 ಆಟಗಾರರಲ್ಲಿ ಗಮನಾರ್ಹ ಬದಲಾವಣೆಯಾಗುವ ಸಾಧ್ಯತೆಯಿದೆ. ರಾಂಚಿ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ ಕೆಳಗಿನಂತಿದೆ.

ರೋಹಿತ್ ಶರ್ಮಾ

ರೋಹಿತ್ ಶರ್ಮಾ

ಭಾರತಕ್ಕೆ ಆಸ್ಟ್ರೇಲಿಯಾ ಪ್ರವಾಸ ಸರಣಿಯಲ್ಲಿ ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಉತ್ತಮ ಫಾರ್ಮ್ ನಲ್ಲಿ ಇರುವುದಕ್ಕೆ ಸಾಕ್ಷಿ ಒದಗಿಸಿಲ್ಲ. ಹಿಂದಿನ ಪಂದ್ಯದಲ್ಲಂತೂ ರೋಹಿತ್ ಸೊನ್ನೆಗೆ ವಿಕೆಟ್ ಒಪ್ಪಿಸಿದ್ದರಲ್ಲದೆ, ತವರಿನಲ್ಲಿ ನಡೆದ ಏಕದಿನದಲ್ಲಿ ಮೊದಲ ಬಾರಿಗೆ ಡಕ್ ಮೂಲಕ ನಿರ್ಗಮಿಸಿ ಅನಗತ್ಯ ದಾಖಲೆಗೂ ಕಾರಣವಾಗಿದ್ದರು. ಆದರೆ ಇತ್ತಂಡಗಳ ನಡುವಣ ಮೂರನೇ ಏಕದಿನ ಪಂದ್ಯದಲ್ಲಿ ರೋಹಿತ್ ಎಂದಿನಂತೆ ಆರಂಭಿಕರಾಗಿ ಮುಂದುವರಿಯಲಿದ್ದಾರೆ. ಈ ಪಂದ್ಯದಲ್ಲಿ ರೋಹಿತ್ ಚೇತರಿಕೆ ಕಾಣುವ ನಿರೀಕ್ಷೆಯಿದೆ.

ಕೆಎಲ್ ರಾಹುಲ್

ಕೆಎಲ್ ರಾಹುಲ್

ರೋಹಿತ್‌ಗೆ ಜೊತೆಗಾರರಾಗಿ ಮೈದಾನಕ್ಕಿಳಿಯುತ್ತಿದ್ದ ಮತ್ತೊಬ್ಬ ಆರಂಭಿಕ ಆಟಗಾರ ಶಿಖರ್ ಧವನ್ ಕೂಡ ಕಳಪೆ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಹಿಂದಿನ ಪಂದ್ಯದಲ್ಲಿ ಧವನ್ ಕೊಡುಗೆ ಕೇವಲ 21 ರನ್ ಮಾತ್ರ. ಹೀಗಾಗಿ ಈ ಪಂದ್ಯದಲ್ಲಿ ಧವನ್ ಬದಲಿಗೆ ಕನ್ನಡಿಗ ಕೆಎಲ್ ರಾಹುಲ್ ಗೆ ಸ್ಥಾನ ದೊರೆಯುವ ನಿರೀಕ್ಷೆಯಿದೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

ನಾಯಕ ವಿರಾಟ್ ಕೊಹ್ಲಿ ಹಿಂದಿನ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. 116 ರನ್ ಬಾರಿಸಿದ್ ಕೊಹ್ಲಿ 40ನೇ ಅಂತಾರಾಷ್ಟ್ರೀಯ ಏಕದಿನ ಶತಕವನ್ನೂ ಪೂರೈಸಿಕೊಂಡಿದ್ದರು. ಈ ಪಂದ್ಯದಲ್ಲೂ ಕೊಹ್ಲಿ 3ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿಯಲಿದ್ದಾರೆ.

ಅಂಬಾಟಿ ರಾಯುಡು

ಅಂಬಾಟಿ ರಾಯುಡು

ಹೈದರಾಬಾದ್ ಆಟಗಾರ ಅಂಬಾಟಿ ರಾಯುಡು ತನ್ನ ಛಾಪು ಮೂಡಿಸಲುವಲ್ಲಿ ಎಡವಿದ್ದಾರೆ. ಹಿಂದಿನ ಪಂದ್ಯದಲ್ಲಿ ರಾಯುಡು 18 ರನ್‌ನೊಂದಿಗೆ ನಿರ್ಗಮಿಸಿದ್ದರು. ವಿಶ್ವಕಪ್ ನಿಟ್ಟಿನಲ್ಲಿ ತಂಡ ರಚಿಸಲು ಬಿಸಿಸಿಐ ಆಟಗಾರರತ್ತ ಗಮನ ಹರಿಸುತ್ತಿರುವುದರಿಂದ ರಾಯುಡು ಮೂರನೇ ಪಂದ್ಯದಲ್ಲೂ ಆಡದಿದ್ದರೆ ವಿಶ್ವಕಪ್ ನಲ್ಲಿ ಸ್ಥಾನ ದೂರದ ಮಾತಾಗಲಿದೆ.

ಎಂಎಸ್ ಧೋನಿ

ಎಂಎಸ್ ಧೋನಿ

ಈಗಲೂ ಧೋನಿ ಮೈದಾನಕ್ಕಿಳಿಯುತ್ತಿದ್ದಾರೆಂದರೆ ಇಡೀ ಕ್ರೀಡಾಂಗಣದಲ್ಲಿ ಧೋನಿ ಧೋನಿ ಕೂಗು ಕೇಳಿಸುತ್ತೆ. ಆದರೆ ನಾಗ್ಪುರದ ಪಂದ್ಯದಲ್ಲಿ ಧೋನಿಯೂ ಡಕ್ ಔಟ್ ಆಗುವ ಮೂಲಕ ಅಭಿಮಾನಿಗಳನ್ನು ನಿರಾಶೆಗೊಳಸಿದ್ದರು. ರಾಂಚಿಯಲ್ಲಿ ಧೋನಿ ಮತ್ತೆ ಪ್ರದರ್ಶನದ ದಾರಿ ತುಳಿಯುತ್ತಾರೋ ಕಾದು ನೋಡಬೇಕು.

ಕೇದಾರ್ ಜಾಧವ್

ಕೇದಾರ್ ಜಾಧವ್

ಮಧ್ಯಮ ಕ್ರಮಾಂಕದಲ್ಲಿ ಕೇದಾರ್ ಜಾಧವ್ ಮೂರನೇ ಪಂದ್ಯದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಭಾರತ ಎಕನಾಮಿಕಲ್ ಬೌಲರ್‌ಗಳಲ್ಲಿ ಮುಂಚೂಣಿಯಲ್ಲಿರುವ ಆಲ್ ರೌಂಡರ್ ಜಾಧವ್ ಹಿಂದಿನ ಪಂದ್ಯದಲ್ಲಿ 11 ರನ್ ಮತ್ತು 1 ವಿಕೆಟ್ ಸಾಧನೆ ತೋರಿದ್ದರು.

ವಿಜಯ್ ಶಂಕರ್

ವಿಜಯ್ ಶಂಕರ್

ನಾಗ್ಪುರ ಪಂದ್ಯದಲ್ಲಿನ ವಿಜಯ್ ಶಂಕರ್ ಪ್ರದರ್ಶನ ಬಿಸಿಸಿಐ ಆಯ್ಕೆ ಸಮಿತಿಯ ಗಮನ ಸೆಳೆಯುವಂತೆ ಮಾಡಿದ್ದು ಸುಳ್ಳಲ್ಲ. ನಾಗ್ಪುರ ಪಂದ್ಯದಲ್ಲಿ ಶಂಕರ್ 46 ರನ್ ಬಾರಿಸಿದ್ದಲ್ಲದೆ, ಅಂತಿಮ ಓವರ್‌ನಲ್ಲಿ 2 ವಿಕೆಟ್ ಉರುಳಿಸಿ ಭಾರತಕ್ಕೆ 500ನೇ ಅಂತಾರಾಷ್ಟ್ರೀಯ ಏಕದಿನ ಗೆಲುವು ತಂದುಕೊಟ್ಟಿದ್ದರು. ಪಂದ್ಯದ ಹೀರೋ ಆಗಿ ಮಿಂಚಿದ್ದರು.

ರವೀಂದ್ರ ಜಡೇಜಾ

ರವೀಂದ್ರ ಜಡೇಜಾ

ರವೀಂದ್ರ ಜಡೇಜಾ ರಿಪೋರ್ಟ್ ಕಾರ್ಡ್ ಸಾಧಾರಣವಾಗಿದೆ. ಆಲ್ ರೌಂಡರ್ ಜಡೇಜಾ ನಾಗ್ಪುರ ಪಂದ್ಯದಲ್ಲಿ 21 ರನ್ ಮತ್ತು 1 ವಿಕೆಟ್ ಸಾಧನೆ ತೋರಿದ್ದರು. ಮೂರನೇ ಪಂದ್ಯದಲ್ಲಿ ರವೀಂದ್ರ 7ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿಯಲಿದ್ದಾರೆ.

ಕುಲದೀಪ್ ಯಾದವ್

ಕುಲದೀಪ್ ಯಾದವ್

ಬೌಲಿಂಗ್ ವಿಭಾಗದಲ್ಲಿ ಕುಲದೀಪ್ ಯಾದವ್ ತಂಡದಲ್ಲಿ ಪ್ರಮುಖ ಆಟಗಾರರು. ಹೀಗಾಗಿ ಯಾದವ್ ಎಂದಿನಂತೆ ಟೀಮ್ ಇಂಡಿಯಾದಲ್ಲಿ ಮುಂದುವರೆಯಲಿದ್ದಾರೆ. ಎರಡನೇ ಏಕದಿನ ಪಂದ್ಯದಲ್ಲಿ ಕುಲದೀಪ್ 54 ರನ್ನಿಗೆ 3 ವಿಕೆಟ್ ಸಾಧನೆ ತೋರಿದ್ದರು.

ಭುವನೇಶ್ವರ್ ಕುಮಾರ್

ಭುವನೇಶ್ವರ್ ಕುಮಾರ್

ವೇಗಿ ಮೊಹಮ್ಮದ್ ಶಮಿ ಬದಲಿಗೆ ಮತ್ತೊಬ್ಬ ವೇಗಿ ಭುವನೇಶ್ವರ್ ಕುಮಾರ್‌ಗೆ ಸ್ಥಾನ ಲಭಿಸುವ ಸಾಧ್ಯತೆಯಿದೆ. ಅಂತಿಮ ಮೂರು ಪಂದ್ಯಗಳಿಗಾಗಿ ಪ್ರಕಟಿತ ತಂಡದಲ್ಲಿ ಭುವಿ ಸ್ಥಾನ ಪಡೆದಿದ್ದರು. ಹೀಗಾಗಿ ರಾಂಚಿ ಪಂದ್ಯದಲ್ಲಿ ಭುವಿ ಎಸೆತ ನಿರೀಕ್ಷಿಸಬಹುದಾಗಿದೆ.

ಜಸ್‌ಪ್ರೀತ್ ಬೂಮ್ರಾ

ಜಸ್‌ಪ್ರೀತ್ ಬೂಮ್ರಾ

ಬೌಲಿಂಗ್ ವಿಭಾಗ ಶಕ್ತಿಯಾಗಿರುವ ವೇಗಿ ಜಸ್‌ಪ್ರೀತ್ ಬೂಮ್ರಾ 11ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿಯುವುದರಲ್ಲಿದ್ದಾರೆ. ಹಿಂದಿನ ಪಂದ್ಯದಲ್ಲಿ ಬೂಮ್ರಾ 29 ರನ್ನಿಗೆ 2 ವಿಕೆಟ್ ಉರುಳಿಸಿದ್ದರು. ಮೂರನೇ ಪಂದ್ಯದಲ್ಲೂ ಬೂಮ್ರಾ ಉತ್ತಮ ಪ್ರದರ್ಶನ ತೋರುವುದು ನಿರೀಕ್ಷಿತ.

Story first published: Thursday, March 7, 2019, 12:44 [IST]
Other articles published on Mar 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X