ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೆಸ್ಟ್ಇಂಡೀಸ್ ವಿರುದ್ಧ ಆಡುವ ಬಳಗದಲ್ಲಿ ಯಾರಿಗೆಲ್ಲಾ ಸ್ಥಾನ!

ವೆಸ್ಟ್ ಇಂಡೀಸ್‌ ವಿರುದ್ಧ ಟೀಮ್ ಇಂಡಿಯಾ ಮೊದಲ ಟಿ20 ಪಂದ್ಯ ನಾಳೆ ನಡೆಯಲಿದೆ. ಎರಡೂ ತಂಡಗಳು ಈಗಾಗಲೆ ಹೈದರಾಬಾದ್‌ಗೆ ತಲುಪಿದ್ದು ತಾಲೀಮಿನಲ್ಲಿ ತೊಡಗಿದೆ. ವೆಸ್ಟ್‌ಇಂಡೀಸ್ಅನ್ನು ಕಿರಾನ್ ಪೊಲಾರ್ಡ್ ಮುನ್ನಡೆಸಲಿದ್ದಾರೆ. ಭಾರತದ ತಂಡದ ನಾಯಕ ವಿರಾಟ್‌ ಕೊಹ್ಲಿ ನೇತೃತ್ವದಲ್ಲಿ ಈಗಾಗಲೆ ಹೈದರಾಬಾದ್‌ಗೆ ಆಗಮಿಸಿದೆ.

ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಈ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಎರಡೂ ತಂಡಗಳಿಗೂ ತಮ್ಮ ಸಾಮರ್ಥ್ಯವನ್ನು ವ್ಯಕ್ತಪಡಿಸಲು ಈ ಸರಣಿ ಮಹತ್ವದ್ದಾಗಿದೆ. ಹೀಗಾಗಿ ಈ ಸರಣಿ ಎರಡೂ ತಂಡಗಳಿಗೆ ಸಾಕಷ್ಟು ಮಹತ್ವದ್ದಾಗಿದೆ.

ವಿಶ್ವ ಟಿ20ಗೆ ಭಾರತದ ತಯಾರಿ ಹೇಗಿದೆ?: ಕುತೂಹಲಕಾರಿ ಅಂಕಿ-ಅಂಶಗಳು!ವಿಶ್ವ ಟಿ20ಗೆ ಭಾರತದ ತಯಾರಿ ಹೇಗಿದೆ?: ಕುತೂಹಲಕಾರಿ ಅಂಕಿ-ಅಂಶಗಳು!

ವೆಸ್ಟ್‌ಇಂಡೀಸ್ ಹಾಲಿ ಟಿ20 ಚಾಂಪಿಯನ್ ಆಗಿದೆ. ಆದರೆ ಸದ್ಯ ಭಾರತ ತಂಡವನ್ನು ಹೋಲಿಸಿದರೆ ವಿಂಡೀಸ್ ಕಳೆಗುಂದಿದಂತೆ ಕಂಡುಬರುತ್ತಿದೆ. ಆದರೆ ವೆಸ್ಟ್‌ ಇಂಡೀಸ್‌ನಲ್ಲಿರುವ ಘಟಾನುಘಟಿ ಸ್ಪೋಟಕ ಆಟಗಾರರು ಆಲ್‌ರೌಂಡರ್‌ಗಳು ಎದುರಾಳಿಯ ಲೆಕ್ಕಾಚಾರವನ್ನು ಬುಡಮೇಲು ಮಾಡುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಇಂತಾ ತಂಡವನ್ನು ಎದುರಿಸಲು ಭಾರತವೂ ಸಮರ್ಥವಾಗಿದೆ. ನಾಳಿನ ಆಡುವ 11ರ ಬಳಗ ಹೇಗಿರಲಿದೆ ಎಂಬುದನ್ನು ಬನ್ನಿ ನೋಡೋಣ.

ಆರಂಭಿಕ ಆಟಗಾರರು:

ಆರಂಭಿಕ ಆಟಗಾರರು:

ರೋಹಿತ್-ಕೆಎಲ್ ರಾಹುಲ್

ಆರಂಬಿಕ ಆಟಗಾರ ಶಿಖರ್ ಧವನ್ ಗಾಯಗೊಂಡು ಟೂರ್ನಿಯನ್ನು ತಪ್ಪಿಸಿಕೊಂಡಿದ್ದಾರೆ. ಶಿಖರ್ ಧವನ್ ಸ್ಥಾನಕ್ಕೆ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ ರೋಹಿತ್ ಶರ್ಮಾ ಜೊತೆಗೆ ಆರಂಭಿಕರಾಗಿ ಸಂಜು ಸ್ಯಾಮ್ಸನ್ ಸ್ಥಾನ ಪಡೆಯುವ ಸಾಧ್ಯತೆಯಿಲ್ಲ. ಇಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ರೋಹಿತ್ ಶರ್ಮಾಗೆ ಸಾಥ್ ನೀಡುವುದು ಪಕ್ಕಾ.

ಮಧ್ಯಮ ಕ್ರಮಾಂಕದಲ್ಲಿ ಯಾರಿಗೆ ಅವಕಾಶ:

ಮಧ್ಯಮ ಕ್ರಮಾಂಕದಲ್ಲಿ ಯಾರಿಗೆ ಅವಕಾಶ:

ಕೊಹ್ಲಿ-ಶ್ರೇಯಸ್-ಪಾಂಡೆ

ವಿರಾಟ್ ಕೊಹ್ಲಿ ತಮ್ಮ ಎಂದಿನ ಸ್ಲಾಟ್‌ ವನ್‌ಡೌನ್‌ನಲ್ಲೇ ಕ್ರೀಸ್‌ಗೆ ಆಗಮಿಸಲಿದ್ದಾರೆ. ಕಳೆದ ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿದ್ದ ವಿರಾಟ್ ಮತ್ತೆ ತಂಡವನ್ನು ಮುನ್ನಡೆಸಲಿದ್ದಾರೆ. ವಿರಾಟ್‌ ಬಳಿಕ ಶ್ರೇಯಸ್‌ ಅಯ್ಯರ್‌ ಕ್ರೀಸ್‌ಗೆ ಆಗಮಿಸುವುದು ಪಕ್ಕಾ. ಬಾಂಗ್ಲಾದೇಶ ವ ಇರುದ್ಧದ ಸರಣಿಯಲ್ಲಿ ಶ್ರೇಯಸ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಸೈ ಎನಿಸಿಕೊಂಡಿದ್ದರು. ಐದನೇ ಕ್ರಮಾಂಕದಲ್ಲಿ ಕನ್ನಡಿಗ ಮನೀಶ್ ಪಾಂಡೆ ಕ್ರೀಸ್‌ಗೆ ಇಳಿಯಲಿದ್ದಾರೆ. ಇತ್ತೀಚೆಗೆ ಸೈಯ್ಯದ್ ಮುಷ್ತಾಕ್ ಅಲಿ ದೇಸಿ ಟೂರ್ನಿಯಲ್ಲಿ ಮಿಂಚಿದ್ದ ಪಾಂಡೆ ಟೀಮ್ ಇಂಡಿಯಾದಲ್ಲೂ ಮಿಂಚಿ ವಿಶ್ವಕಪ್ ತಂಡದಲ್ಲೂ ಆಯ್ಕೆಯಾಗುವ ಹುಮ್ಮಸ್ಸಿನಲ್ಲಿದ್ದಾರೆ.

ಬೂಮ್ರಾ ಬೇಬಿ ಬೌಲರ್ ಎಂದ ಪಾಕ್ ಮಾಜಿ ಆಲ್ರೌಂಡರ್ ರಜಾಕ್ ಪಾಡು ಯಾರಿಗೂ ಬೇಡ!!

ವಿಕೆಟ್ ಕೀಪಿಂಗ್:

ವಿಕೆಟ್ ಕೀಪಿಂಗ್:

ರಿಷಬ್ ಪಂತ್

ಮಹೇಂದ್ರ ಸಿಂಗ್ ಧೋನಿ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪಿಂಗ್ ಟೀಮ್ ಇಂಡಿಯಾಗೆ ಸವಾಲಾಗಿದೆ. ಕಳೆದ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನವನ್ನು ರಿಷಬ್ ಪಂತ್ ನೀಡುವಲ್ಲಿ ವಿಫಲರಾಗಿದ್ದರು. ಹಾಗಿದ್ದರೂ ನಾಳಿನ ಪಂದ್ಯದಲ್ಲಿ ರಿಷಬ್ ಪಂತ್ ಗ್ಲೌಸ್‌ ತೊಡುವುದು ಬಹುತೇಕ ಖಚಿತ. ನಾಳಿನ ಪಂದ್ಯ ರಿಷಬ್‌ಗೆ ಬಹುಮುಖ್ಯವಾಗಿದೆ.

ಆಲ್‌ರೌಂಡರ್ಸ್:

ಆಲ್‌ರೌಂಡರ್ಸ್:

ಶಿವಮ್ ದುಬೆ-ಜಡೇಜಾ

ಗಾಯದಿಂದ ತಂಡದಿಂದ ಹೊರಗುಳಿದಿರುವ ಹಾರ್ದಿಕ್ ಪಾಂಡ್ಯಾ ಸ್ಥಾನಕ್ಕೆ ಯುವ ಆಟಗಾರ ಶಿವಮ್ ದುಬೆ ಸ್ಥಾನವನ್ನು ಪಡೆದಿದ್ದಾರೆ. ಕಳೆದ ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ಪ್ಲೇಯಿಂಗ್ 11ನಲ್ಲಿ ಅವಕಾಶ ಪಡೆದ ಶಿವಮ್ ದುಬೆಗೆ ಬ್ಯಾಟಿಂಗ್ ನಲ್ಲಿ ಮಿಂಚಲು ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ. ಆದರೆ ಬೌಲಿಂಗ್ ನಲ್ಲಿ 3 ವಿಕೆಟ್‌ ಪಡೆದು ಗಮನ ಸೆಳೆದಿದ್ದರು. ನಾಳಿನ ಪಂದ್ಯದಲ್ಲೂ ಶಿವಮ್ ದುಬೆ ಸ್ಥಾನವನ್ನು ಪಡೆಯುವುದು ಖಚಿತ. ಮತ್ತೋರ್ವ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಸ್ಪಿನ್‌ ವಿಭಾಗದ ಜೊತೆಗೆ ಬ್ಯಾಟಿಂಗ್‌ನಲ್ಲೂ ಮಿಂಚಲು ರೆಡಿಯಾಗಿದ್ದಾರೆ.

ಬೌಲಿಂಗ್ ವಿಭಾಗ:

ಬೌಲಿಂಗ್ ವಿಭಾಗ:

ಚಾಹಲ್- ಭುವಿ-ಚಾಹರ್

ಯಜುವೇಂದ್ರ ಚಾಹಲ್ ಬಾಂಗ್ಲಾದೇಶದ ವಿರುದ್ಧ ಉತ್ತಮ ಪ್ರದರ್ಶನ ನೀಡಿ ಬಾಂಗ್ಲಾ ಬ್ಯಾಟ್ಸ್‌ಮನ್‌ಗಳಿಗೆ ಮಂಕುಬೂದಿ ಎರಚಿದಂತೆ ವಿಂಡೀಸ್ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸಲು ಸಿದ್ಧರಾಗಿದ್ದಾರೆ. ಮತ್ತೊಂದೆಡೆ ವೇಗದ ಬೌಲಿಂಗ್ ವಿಭಾಗದಲ್ಲಿ ಹಲವು ಸಮಯಗಳ ಬಳಿಕ ತಂಡಕ್ಕೆ ಭುವನೇಶ್ವರ್ ಕುಮಾರ್ ವಾಪಾಸ್ಸಾಗಿದ್ದು ಟಿಟ್ವೆಂಟಿಗೆ ಉತ್ತಮ ಆಯ್ಕೆಯಾಗಿದ್ದಾರೆ. ಇನ್ನು ದೀಪಕ್ ಚಾಹರ್ ಕಳೆದ ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ಹ್ಯಾಟ್ರಿಕ್ ವಿಕೆಟ್‌ ಕಿತ್ತು ಸಾಮರ್ಥ್ಯ ಸಾಬೀತುಪಡಿಸಿರುವುದರಿಂದ ಸಹಜವಾಗಿಯೇ ತಂಡದಲ್ಲಿ ಅವಕಾಶವನ್ನು ಗಿಟ್ಟಿಸಿಕೊಳ್ಳಲಿದ್ದಾರೆ.

Story first published: Thursday, December 5, 2019, 18:23 [IST]
Other articles published on Dec 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X