ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ ಫ್ಲ್ಯಾಷ್‌ಬ್ಯಾಕ್‌: ಭಾರತ vs ಇಂಗ್ಲೆಂಡ್‌ ಪಂದ್ಯ ರೋಚಕ ಟೈ!

Indias previous world cup match vs England ended in tie

ಬೆಂಗಳೂರು, ಜೂನ್‌ 30: ಭಾರತ ಮತ್ತು ಇಂಗ್ಲೆಂಡ್‌ ತಂಡಗಳು ಮುಖಾಮುಖಿಯಾದ ಸಂದರ್ಭದಲ್ಲಿ ಕ್ರಿಕೆಟ್‌ ಅಭಿಮಾನಿಗಳಿಗೆ ಒಂದು ಗುಣಮಟ್ಟದ ಪಂದ್ಯ ವೀಕ್ಷಣೆ ಸಾಧ್ಯವಾಗುತ್ತದೆ ಎಂಬುದರಲ್ಲಿ ಬೇರೆ ಮಾತೇ ಇಲ್ಲ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲೂ ಭಾರತ ಮತ್ತು ಇಂಗ್ಲೆಂಡ್‌ ತಂಡಗಳು ಇದೇ ಭಾನುವಾರ ಮುಖಾಮುಖಿಯಾಗಿವೆ. ಭಾರತ ಈ ಪಂದ್ಯ ಗೆದ್ದರೆ ಇನ್ನು ಎರಡು ಪಂದ್ಯಗಳು ಬಾಕಿ ಇರುವಾಗಲೇ ಅಜೇಯವಾಗಿ ಸೆಮಿಫೈನಲ್ಸ್‌ಗೆ ಮುನ್ನಡೆಯಲಿದೆ. ಆದರೆ, ಇಂಗ್ಲೆಂಡ್‌ ತಂಡಕ್ಕೆ ಈ ಪಂದ್ಯ ಪ್ರಿ ಕ್ವಾರ್ಟರ್‌ ಫೈನಲ್‌ ಮಹತ್ವದ್ದಾಗಿದ್ದು ಇಲ್ಲಿ ಗೆದ್ದರಷ್ಟೇ ಉಳಿಗಾಲ. ಅಷ್ಟೇ ಅಲ್ಲದೆ ಭಾರತ ವಿರುದ್ಧ ಗೆದ್ದು ನಂತರದ ಲೀಗ್‌ ಪಂದ್ಯವನ್ನೂ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.

ಈ ಒತ್ತಡದವನ್ನುಅರಿತು ಜವಾಬ್ದಾರಿಯುತ ಆಟವಾಡುತ್ತಿರುವ ಇಂಗ್ಲೆಂಡ್‌, ಬರ್ಮಿಂಗ್‌ಹ್ಯಾಮ್‌ನ ಎಡ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ಭಾನುವಾರ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡುವ ಮೂಲಕ ಬೃಹತ್‌ ಮೊತ್ತದ ಕಡೆಗೆ ಹೆಜ್ಜೆ ಇಟ್ಟಿದೆ. ಮೊದಲ ವಿಕೆಟ್‌ಗೆ ಜೇಸನ್‌ ರಾಯ್‌ ಮತ್ತು ಜಾನಿ ಬೈರ್‌ಸ್ಟೋವ್‌ 133 ಎಸೆತಗಳಲ್ಲಿ 160 ರನ್‌ಗಳ ಜೊತೆಯಾಟದ ಮೂಲಕ ಸ್ಫೋಟಕ ಆರಂಭ ಒದಗಿಸಿದ್ದಾರೆ. ಇದರರ್ಥ ತಂಡ 300+ ರನ್‌ಗಳಿಸುವುದು ಖಾತ್ರಿಯಾಗಿದೆ.

ಆಸೀಸ್‌ ವಿರುದ್ಧದ ಸೋಲಿಗೆ ಕಾರಣ ಕೊಟ್ಟ ಕೇನ್‌ ವಿಲಿಯಮ್ಸನ್‌!ಆಸೀಸ್‌ ವಿರುದ್ಧದ ಸೋಲಿಗೆ ಕಾರಣ ಕೊಟ್ಟ ಕೇನ್‌ ವಿಲಿಯಮ್ಸನ್‌!

ಅಂದಹಾಗೆ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಇತಿಹಾಸದಲ್ಲಿ ಭಾರತ ಮತ್ತು ಇಂಗ್ಲೆಂಡ್‌ ತಂಡಗಳು ಈ ಹಿಂದೆ ಮುಖಾಮುಖಿಯಾಗಿದ್ದ ದಸಂದರ್ಭದಲ್ಲೂ 300+ ರನ್‌ಗಳ ರೋಚಕ ಹಣಾಹಣಿ ಮೂಡಿ ಬಂದಿತ್ತು. ಇತ್ತಂಡಗಳು 338 ರನ್‌ಗಳನ್ನು ದಾಖಲಿಸುವ ಮೂಲಕ ಟೈ ಫಲಿತಾಂಶ ಹೊರಬಿದ್ದಿತ್ತು.

ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆದ 2011ರ ವಿಶ್ವಕಪ್‌ ಟೂರ್ನಿಯ 'ಬಿ' ಗುಂಪಿನ ಲೀಗ್‌ ಪಂದ್ಯವದು. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯ ಕ್ರಿಕೆಟ್‌ ಅಭಿಮಾನಿಗಳನ್ನುತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು.

ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ಸಚಿನ್‌ ತೆಂಡೂಲ್ಕರ್‌ (120) ಅವರ ಶತಕ ಮತ್ತು ಗೌತಮ್‌ ಗಂಭೀರ್‌ (51) ಹಾಗೂ ಯುವರಾಜ್‌ ಸಿಂಗ್‌ (58) ಅವರ ಅರ್ಧಶತಕಗಳ ನೆರವಿನಿಂದ 49.5 ಓವರ್‌ಗಳಲ್ಲಿ 338/10 ರನ್‌ಗಳ ಬೃಹತ್‌ ಮೊತ್ತವನ್ನೇ ದಾಖಲಿಸಿತು. ಇಂಗ್ಲೆಂಡ್‌ ಪರ ಟಿಮ್‌ ಬ್ರೆಸ್ನನ್‌ 48ಕ್ಕೆ 5 ವಿಕೆಟ್‌ ಪಡೆದು ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಕಂಟಕವಾಗಿದ್ದರು.

ದ. ಆಫ್ರಿಕಾ vs ಲಂಕಾ ನಡುವಣ ಪಂದ್ಯಕ್ಕೆ ಅಡ್ಡಿ ಪಡಿಸಿದ್ದು ಮಳೆಯಲ್ಲ!ದ. ಆಫ್ರಿಕಾ vs ಲಂಕಾ ನಡುವಣ ಪಂದ್ಯಕ್ಕೆ ಅಡ್ಡಿ ಪಡಿಸಿದ್ದು ಮಳೆಯಲ್ಲ!

ಬಳಿಕ ಗುರಿ ಬೆನ್ನತ್ತಿದ ಇಂಗ್ಲೆಂಡ್‌ ತಂಡ ನಾಯಕ ಆಂಡ್ರೂ ಸ್ಟ್ರಾಸ್‌ (158) ಅವರ ಮನಮೋಹಕ ಶತಕದ ನೆರವಿನಿಂದ ಜಯದ ಹೊಸ್ತಿಲಿಗೆ ಬಂದು ನಿಂತಿತ್ತು, ಆದರೆ ಇನಿಂಗ್ಸ್‌ ಅಂತ್ಯದಲ್ಲಿ ಜಹೀರ್‌ ಖಾನ್‌ (64ಕ್ಕೆ 3), ಮುನಾಫ್‌ ಪಟೇಲ್‌ (70ಕ್ಕೆ 2) ಹಾಗೂ ಪಿಯೂಶ್‌ ಚಾವ್ಲಾ (71ಕ್ಕೆ 2) ಶಿಸ್ತಿನ ಬೌಲಿಂಗ್ ನೆರವಿನಿಂದ ಇಂಗ್ಲೆಂಡ್‌ ತಂಡವನ್ನು 50 ಓವರ್‌ಗಳಲ್ಲಿ 338/8ಕ್ಕೆ ನಿಯಂತ್ರಿಸಿ ಸೋಲು ತಪ್ಪಿಸಿಕೊಂಡಿತು.

ಸಂಕ್ಷಿಪ್ತ ಸ್ಕೋರ್‌

ಭಾರತ: 49.5 ಓವರ್‌ಗಳಲ್ಲಿ 338/10 (ಸಚಿನ್‌ ತೆಂಡೂಲ್ಕರ್‌ 120, ಗೌತಮ್‌ ಗಂಭೀರ್‌ 51, ಯುವರಾಜ್‌ ಸಿಂಗ್‌ 58; ಟಿಮ್‌ ಬ್ರೆಸ್ನನ್‌ 48ಕ್ಕೆ 5).

ಇಂಗ್ಲೆಂಡ್‌: 50 ಓವರ್‌ಗಳಲ್ಲಿ 338/8 (ಆಂಡ್ರೂ ಸ್ಟ್ರಾಸ್‌ 158, ಇಯಾನ್‌ ಬೆಲ್‌ 69; ಜಹೀರ್‌ ಖಾನ್‌ 64ಕ್ಕೆ 3, ಮುನಾಫ್‌ ಪಟೇಲ್‌ 70ಕ್ಕೆ 2).

Story first published: Sunday, June 30, 2019, 17:11 [IST]
Other articles published on Jun 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X