ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC Emerging Women's Cricketer: 2022ರ ಉದಯೋನ್ಮುಖ ಮಹಿಳಾ ಕ್ರಿಕೆಟರ್ ಗೌರವ ಪಡೆದ ರೇಣುಕಾ ಸಿಂಗ್

Indias Renuka Singh Honored as ICC Emerging Womens Cricketer Of The Year 2022

ಭಾರತ ಮಹಿಳಾ ಕ್ರಿಕೆಟ್ ತಂಡದ ಮಾರಕ ವೇಗಿ ರೇಣುಕಾ ಸಿಂಗ್ ಅವರು ತಮ್ಮ ವೇಗ ಮತ್ತು ಸ್ವಿಂಗ್ ಬೌಲಿಂಗ್‌ನಿಂದಾಗಿ ಪ್ರಸಿದ್ಧಿಯಾಗಿದ್ದಾರೆ. ಇದೀಗ ರೇಣುಕಾ ಸಿಂಗ್ ಅವರು ತಮ್ಮ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ನಂತರ 2022ರ ಐಸಿಸಿ ವರ್ಷದ ಉದಯೋನ್ಮುಖ ಮಹಿಳಾ ಕ್ರಿಕೆಟರ್ ಗೌರವಕ್ಕೆ ಭಾಜನರಾಗಿದ್ದಾರೆ.

ರೇಣುಕಾ ಸಿಂಗ್ ಅವರು ಆಸ್ಟ್ರೇಲಿಯಾ ಮಹಿಳಾ ತಂಡದ ಡಾರ್ಸಿ ಬ್ರೌನ್, ಇಂಗ್ಲೆಂಡ್‌ನ ಆಲಿಸ್ ಕ್ಯಾಪ್ಸೆ ಮತ್ತು ಭಾರತದವರೇ ಆದ ಯಾಸ್ತಿಕಾ ಭಾಟಿಯಾ ಅವರನ್ನು ಹಿಂದಿಕ್ಕಿ ಉದಯೋನ್ಮುಖ ಮಹಿಳಾ ಕ್ರಿಕೆಟರ್ ಗೌರವಕ್ಕೆ ಪಾತ್ರರಾದರು.

ICC T20 Player Of The 2022: ಈ ಐಸಿಸಿ ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ಸೂರ್ಯಕುಮಾರ್ICC T20 Player Of The 2022: ಈ ಐಸಿಸಿ ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ಸೂರ್ಯಕುಮಾರ್

26 ವರ್ಷದ ರೇಣುಕಾ ಸಿಂಗ್ ಕೇವಲ 29 ವೈಟ್-ಬಾಲ್ ಕ್ರಿಕೆಟ್‌ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅದರಲ್ಲಿ 14.88ರ ಸರಾಸರಿ ಮತ್ತು 4.62ರ ಎಕಾನಮಿ ದರದಲ್ಲಿ 18 ಏಕದಿನ ವಿಕೆಟ್‌ಗಳನ್ನು ಪಡೆದಿದ್ದರೆ, 23.95ರ ಸರಾಸರಿ ಮತ್ತು 6.50ರ ಎಕಾನಮಿ ದರದಲ್ಲಿ 22 ಟಿ20 ವಿಕೆಟ್‌ಗಳನ್ನು ಪಡೆದಿದ್ದಾರೆ.

ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ಲೈನ್‌ಅಪ್‌ಗೆ ಕಂಟಕ

ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ಲೈನ್‌ಅಪ್‌ಗೆ ಕಂಟಕ

ಭಾರತ ಮಹಿಳಾ ತಂಡಕ್ಕಾಗಿ ಬಿಡುವಿಲ್ಲದ 12 ತಿಂಗಳುಗಳ ವೃತ್ತಿಜೀವನದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿರುವ ರೇಣುಕಾ ಸಿಂಗ್, ಟಿ20 ಪಂದ್ಯಗಳಲ್ಲಿ ಏಳು ಬಾರಿ ಬಲಿಷ್ಠ ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ಲೈನ್‌ಅಪ್‌ಗೆ ಕಂಟಕವಾಗಿ ಪರಿಣಮಿಸಿದರು.

2022ರ ಕಾಮನ್‌ವೆಲ್ತ್ ಗೇಮ್ಸ್ ಮತ್ತು ಏಷ್ಯಾ ಕಪ್‌ನಲ್ಲಿ ರೇಣುಕಾ ಸಿಂಗ್ ಅವರ ಬಿಗಿ ಬೌಲಿಂಗ್ ದಾಳಿ ನೋಡಿದರೆ, ಭಾರತ ತಂಡವು ಅನುಭವಿ ಜೂಲನ್ ಗೋಸ್ವಾಮಿ ಅವರಿಗೆ ಸರಿಯಾದ ಉತ್ತರಾಧಿಕಾರಿ ಹುಡುಕಿಕೊಂಡಿದೆ ಎಂದು ಖಚಿತಪಡಿಸಿದೆ.

ರೇಣುಕಾ ಸಿಂಗ್ ಆಸೀಸ್ ವಿರುದ್ಧ 18 ರನ್ ನೀಡಿ 4 ವಿಕೆಟ್

ರೇಣುಕಾ ಸಿಂಗ್ ಆಸೀಸ್ ವಿರುದ್ಧ 18 ರನ್ ನೀಡಿ 4 ವಿಕೆಟ್

ಕಳೆದ ವರ್ಷ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಾಲ್ಕು ವಿಕೆಟ್‌ಗಳನ್ನು ಪಡೆಯುವ ಮೂಲಕ ಭಾರತದ ಸೂಪರ್ ಎಕ್ಸ್‌ಪ್ರೆಸ್ ಎಂದು ಖ್ಯಾತಿ ಗಳಿಸಿದರು. ರೇಣುಕಾ ಸಿಂಗ್ ತಮ್ಮ ವೇಗದ ದಾಳಿಯಲ್ಲಿ ಆಸೀಸ್‌ನ ಅಲಿಸ್ಸಾ ಹೀಲಿ, ಮೆಗ್ ಲ್ಯಾನಿಂಗ್, ಬೆತ್ ಮೂನಿ ಮತ್ತು ತಹ್ಲಿಯಾ ಮೆಕ್‌ಗ್ರಾತ್ ಅವರ ವಿಕೆಟ್‌ಗಳನ್ನು ಹಾರಿಸುವ ಮೂಲಕ ಅಗ್ರ ಕ್ರಮಾಂಕವನ್ನು ಛಿದ್ರ ಮಾಡಿದ್ದರು.

ರೇಣುಕಾ ಸಿಂಗ್ 16 ಚುಕ್ಕಿ ಬಾಲ್‌ಗಳೊಂದಿಗೆ 18 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು. ಈ ವೇಳೆ ಆಸ್ಟ್ರೇಲಿಯಾ 34 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅಂತಿಮವಾಗಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡ ಚಿನ್ನದ ಪದಕ ವಿಜೇತ ತಂಡವಾಯಿತು.

ಐಸಿಸಿ ಮಹಿಳಾ ವರ್ಷದ ಟಿ20 ಕ್ರಿಕೆಟರ್ ಪ್ರಶಸ್ತಿ ಗೆದ್ದ ತಹ್ಲಿಯಾ ಮೆಕ್‌ಗ್ರಾತ್

ಐಸಿಸಿ ಮಹಿಳಾ ವರ್ಷದ ಟಿ20 ಕ್ರಿಕೆಟರ್ ಪ್ರಶಸ್ತಿ ಗೆದ್ದ ತಹ್ಲಿಯಾ ಮೆಕ್‌ಗ್ರಾತ್

ಇನ್ನು ಮುಂಬರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ 2023ಗಾಗಿ ಭಾರತ ತಂಡದಲ್ಲಿ ವೇಗಿ ರೇಣುಕಾ ಸಿಂಗ್ ಸ್ಥಾನ ಪಡೆದಿದ್ದಾರೆ. ಸದ್ಯ ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಭಾರತ ತಂಡಗಳ ನಡುವೆ ನಡೆಯುತ್ತಿರುವ ತ್ರಿಕೋನ ಸರಣಿಯಲ್ಲಿ ಆಡುತ್ತಿದ್ದಾರೆ.

ಇದೇ ವೇಳೆ ಆಸ್ಟ್ರೇಲಿಯಾದ ಆಲ್‌ರೌಂಡರ್ ತಹ್ಲಿಯಾ ಮೆಕ್‌ಗ್ರಾತ್ ಅವರು 2022ರ ಐಸಿಸಿ ಮಹಿಳಾ ವರ್ಷದ ಟಿ20 ಕ್ರಿಕೆಟರ್ ಪ್ರಶಸ್ತಿ ಗೆದ್ದಿದ್ದಾರೆ. ತಹ್ಲಿಯಾ ಮೆಕ್‌ಗ್ರಾತ್ 2022ರಲ್ಲಿ ಆಡಿದ 16 ಪಂದ್ಯಗಳಲ್ಲಿ 62.14 ಸರಾಸರಿಯಲ್ಲಿ 435 ರನ್ ಗಳಿಸಿ 13 ವಿಕೆಟ್ ಪಡೆದು ಮಿಂಚಿದರು.

ತಹ್ಲಿಯಾ ಮೆಕ್‌ಗ್ರಾತ್ ಅವರು ತಮ್ಮ ಪ್ರತಿಸ್ಪರ್ಧಿಗಳಾದ ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ, ಪಾಕಿಸ್ತಾನದ ಆಲ್‌ರೌಂಡರ್ ನಿದಾ ದಾರ್ ಮತ್ತು ನ್ಯೂಜಿಲೆಂಡ್ ನಾಯಕಿ ಸೋಫಿ ಡಿವೈನ್ ಅವರನ್ನು ಹಿಂದಿಕ್ಕಿ ಐಸಿಸಿ ಗೌರವಕ್ಕೆ ಭಾಜನರಾದರು.

Story first published: Thursday, January 26, 2023, 12:34 [IST]
Other articles published on Jan 26, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X