ಪತ್ನಿ ಧನಶ್ರೀ ವರ್ಮಾಗೆ 'ಕೂಲಿ' ಆದ ಯುಜ್ವೇಂದ್ರ ಚಹಾಲ್; ಶಿಖರ್ ಧವನ್ ರೀಲ್ ವೈರಲ್

ಭಾರತ ಕ್ರಿಕೆಟ್ ತಂಡದ ಪ್ರಮುಖ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಮತ್ತು ಅವರ ಪತ್ನಿ ನೃತ್ಯ ನಿರ್ದೇಶಕಿ ಧನಶ್ರೀ ವರ್ಮಾ ಒಂದಿಲ್ಲೊಂದು ವಿಷಯಕ್ಕೆ ಸದಾ ಸುದ್ದಿಯಲ್ಲಿರುವ ಜೋಡಿಯಾಗಿದ್ದಾರೆ.

ಭಾರತದ ವಿದೇಶಿ ಪ್ರವಾಸಗಳಲ್ಲಿ ಧನಶ್ರೀ ಆಗಾಗ ಯುಜ್ವೇಂದ್ರ ಚಹಾಲ್ ಜೊತೆಗೆ ಹೋಗುತ್ತಾರೆ. ಪ್ರಸ್ತುತ ಭಾರತ ಕ್ರಿಕೆಟ್ ತಂಡ ಸೀಮಿತ ಓವರ್‌ಗಳ ಸರಣಿಗಾಗಿ ನ್ಯೂಜಿಲೆಂಡ್ ಪ್ರವಾಸದಲ್ಲಿದೆ.

ವಿಜಯ್ ಹಜಾರೆ ಟ್ರೋಫಿ: ಪರಾಗ್ ಸ್ಫೋಟಕ ಬ್ಯಾಟಿಂಗ್; ಜಮ್ಮು-ಕಾಶ್ಮೀರ ವಿರುದ್ಧ ಗೆದ್ದು ಸೆಮಿಸ್ ತಲುಪಿದ ಅಸ್ಸಾಂವಿಜಯ್ ಹಜಾರೆ ಟ್ರೋಫಿ: ಪರಾಗ್ ಸ್ಫೋಟಕ ಬ್ಯಾಟಿಂಗ್; ಜಮ್ಮು-ಕಾಶ್ಮೀರ ವಿರುದ್ಧ ಗೆದ್ದು ಸೆಮಿಸ್ ತಲುಪಿದ ಅಸ್ಸಾಂ

ಹಾರ್ದಿಕ್ ಪಾಂಡ್ಯ ನಾಯಕತ್ವದ ಭಾರತ ತಂಡ ಟಿ20 ಸರಣಿಯನ್ನು ಗೆದ್ದ ನಂತರ, ಮೆನ್ ಇನ್ ಬ್ಲೂ ಒಂದು ಪಂದ್ಯ ಬಾಕಿ ಇರುವಂತೆಯೇ ಏಕದಿನ ಸರಣಿಯಲ್ಲಿ 1-0 ಅಂತರದ ಹಿನ್ನಡೆ ಅನುಭವಿಸುತ್ತಿದೆ. ಎರಡನೇ ಏಕದಿನ ಪಂದ್ಯ ಮಳೆಯಿಂದ ರದ್ದಾದ ನಂತರ ಭಾರತ ತಂಡ ಮೂರನೇ ಏಕದಿನ ಪಂದ್ಯಕ್ಕಾಗಿ ಹ್ಯಾಮಿಲ್ಟನ್‌ನಿಂದ ಕ್ರೈಸ್ಟ್‌ಚರ್ಚ್‌ಗೆ ತೆರಳಿದೆ.ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಏಕದಿನ ಮಾದರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಹಂಗಾಮಿ ನಾಯಕನಾಗಿ ಭಾರತ ತಂಡವನ್ನು ಶಿಖರ್ ಧವನ್ ಮುನ್ನಡೆಸುತ್ತಿದ್ದಾರೆ. ಇದೀಗ ಅವರು ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ದಂಪತಿಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಹ್ಯಾಮಿಲ್ಟನ್‌ನಿಂದ ಕ್ರೈಸ್ಟ್‌ಚರ್ಚ್‌ಗೆ ತೆರಳುವ ವೇಳೆ ಯುಜ್ವೇಂದ್ರ ಚಹಾಲ್ ಅವರು ಪತ್ನಿ ಧನಶ್ರೀ ವರ್ಮಾ ಅವರ ಬ್ಯಾಗ್‌ಗಳನ್ನು ಹೊತ್ತೊಯ್ಯುವುದನ್ನು ನೋಡಬಹುದು. ಇದೇ ವೇಳೆ ಶಿಖರ್ ಧವನ್ ಅವರು ಯಜ್ವೇಂದ್ರ ಚಹಾಲ್ ದಂಪತಿಯ ಕುರಿತು ತಮಾಷೆಯ ಮಾತುಗಳನ್ನಾಡುತ್ತಾ ಕಾಲೆಳೆದಿದ್ದಾರೆ.

ಇನ್ನು ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಯುಜ್ವೇಂದ್ರ ಚಾಹಲ್ ಬದಲಿಗೆ ಕುಲದೀಪ್ ಯಾದವ್ ಆಡುವ ಸಾಧ್ಯತೆಯಿದೆ. ಈ ಜೋಡಿ ಹಿಂದೆ ವಿಶ್ವ ಕ್ರಿಕೆಟ್‌ನಲ್ಲಿ ದೊಡ್ಡ ಶಕ್ತಿಯಾಗಿತ್ತು. ಸ್ಪಿನ್ ಜೋಡಿಯು ಚೆಂಡಿನಲ್ಲಿ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ತುಂಬಾ ಕಾಡುತ್ತಿದ್ದರು.

ಎಂಎಸ್ ಧೋನಿ ಮತ್ತು ನಂತರ ವಿರಾಟ್ ಕೊಹ್ಲಿ ಅವರು ನಾಯಕರಾಗಿದ್ದಾಗ, ಎದುರಾಳಿ ತಂಡದ ಜೊತೆಯಾಟವನ್ನು ಮುರಿಯಲು ಈ ಸ್ಪಿನ್ ಜೋಡಿಯನ್ನು ದಾಳಿಗೆ ಇಳಿಸುತ್ತಿದ್ದರು.

ಶ್ರೀಲಂಕಾ ವಿರುದ್ಧ 2ನೇ ಏಕದಿನ ಪಂದ್ಯ ರದ್ದು; 2023ರ ಏಕದಿನ ವಿಶ್ವಕಪ್ ಸ್ಥಾನ ಭದ್ರಪಡಿಸಿಕೊಂಡ ಅಫ್ಘಾನ್ಶ್ರೀಲಂಕಾ ವಿರುದ್ಧ 2ನೇ ಏಕದಿನ ಪಂದ್ಯ ರದ್ದು; 2023ರ ಏಕದಿನ ವಿಶ್ವಕಪ್ ಸ್ಥಾನ ಭದ್ರಪಡಿಸಿಕೊಂಡ ಅಫ್ಘಾನ್

ಆದರೆ, 2019ರಲ್ಲಿ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಹಂತದಿಂದ ನಿರ್ಗಮನದ ನಂತರ, ಅವರು ಒಟ್ಟಿಗೆ ಆಡುವುದು ಕಡಿಮೆ ಆಗಿದೆ. ಆಗಾಗ ಈ ಮಣಿಕಟ್ಟಿನ ಸ್ಪಿನ್ ಜೋಡಿ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಿರುವುದನ್ನು ನೋಡಬಹುದು.

ಮೂರನೇ ಏಕದಿನ ಪಂದ್ಯದ ಮುನ್ನಾದಿನದಂದು ಕುಲದೀಪ್ ಯಾದವ್ ಜೊತೆಗಿನ ಚಿತ್ರವನ್ನು ಯುಜ್ವೇಂದ್ರ ಚಾಹಲ್ ಪೋಸ್ಟ್ ಮಾಡಿದ್ದಾರೆ. ಇದು ಮೂರನೇ ಪಂದ್ಯದಲ್ಲಿ ಚಹಾಲ್ ಬದಲಿಗೆ ಕುಲದೀಪ್ ಯಾದವ್ ಅವಕಾಶ ಪಡೆಯಲಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ.

For Quick Alerts
ALLOW NOTIFICATIONS
For Daily Alerts
Story first published: Monday, November 28, 2022, 22:36 [IST]
Other articles published on Nov 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X