ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಭಾರತ ಟಿ20 ನಾಯಕತ್ವ ರೋಹಿತ್‌ ಶರ್ಮಾಗೆ ನೀಡಬೇಕು'

India’s T20 captaincy should be given to Rohit Sharma, says Monty Panesar

ಲಂಡನ್‌: ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಉದ್ಘಾಟನಾ ಆವೃತ್ತಿಯ ಫೈನಲ್‌ನಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಕಂಡಿದೆ. ಈ ಪಂದ್ಯದ ಸೋಲಿನ ಬಳಿಕ ಮತ್ತೆ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಅಪಸ್ವರ ಕೇಳಿ ಬರತೊಡಗಿದೆ. ಇಂಗ್ಲೆಂಡ್‌ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್ ಕೂಡ ಇದೇ ಕೂಗಿದೆ ಧ್ವನಿ ಸೇರಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20ಐಗೆ ವೆಸ್ಟ್ ಇಂಡೀಸ್ ಬಲಿಷ್ಠ ತಂಡ ಪ್ರಕಟ!ದಕ್ಷಿಣ ಆಫ್ರಿಕಾ ವಿರುದ್ಧದ ಟಿ20ಐಗೆ ವೆಸ್ಟ್ ಇಂಡೀಸ್ ಬಲಿಷ್ಠ ತಂಡ ಪ್ರಕಟ!

ಮುಂದಿನ CM ಬಗ್ಗೆ ಇಬ್ರಾಹಿಂ ಅಭಿಪ್ರಾಯ ವ್ಯಕ್ತ ಪಡಿಸಿದ್ದು ಹೀಗೇ ! | Oneindia Kannada

ಟೀಮ್ ಇಂಡಿಯಾದ ಟಿ20ಐ ನಾಯಕತ್ವ ಹಿಟ್‌ಮ್ಯಾನ್‌ ಖ್ಯಾತಿಯ ರೋಹಿತ್ ಶರ್ಮಾಗೆ ನೀಡಬೇಕು. ಟೆಸ್ಟ್‌, ಏಕದಿನ ಕ್ರಿಕೆಟ್ ನಾಯಕತ್ವ ಬೇಕಾದರೆ ವಿರಾಟ್ ಕೊಹ್ಲಿ ಅವರಲ್ಲಿರಲಿ ಎಂದು ಪನೇಸರ್ ಅಭಿಪ್ರಾಯಿಸಿದ್ದಾರೆ. ಸದ್ಯ ಇಂಗ್ಲೆಂಡ್‌ನಲ್ಲಿರುವ ಭಾರತೀಯ ತಂಡದಲ್ಲಿ ಅಲ್ಲಿ ಆತಿಥೇಯರ ವಿರುದ್ಧ ಆಗಸ್ಟ್ 4ರಿಂದ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ.

ಇಂಗ್ಲೆಂಡ್, ಆಸ್ಟ್ರೇಲಿಯಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳಲ್ಲಿ ಒಂದೇ ರಾಷ್ಟ್ರೀಯ ತಂಡಕ್ಕೆ ಇಬ್ಬಿಬ್ಬರು ನಾಯಕರಿದ್ದಾರೆ. ಆದರೆ ಭಾರತ, ಪಾಕಿಸ್ತಾನ್ ಮತ್ತು ನ್ಯೂಜಿಲೆಂಡ್ ತಂಡಗಳಲ್ಲಿ ಮಾತ್ರ ಮೂರೂ ಮಾದರಿಯ ಕ್ರಿಕೆಟ್‌ಗೆ ಒಬ್ಬನೇ ನಾಯಕರಾಗಿದ್ದಾರೆ. ಇದೇ ಕಾರಣಕ್ಕೆ ಭಾರತಕ್ಕೆ ಇಬ್ಬರು ಬೇಕೆನ್ನುವ ಕೂಗಿ ಕೇಳಿಬರುತ್ತಿವೆ.

'ಗ್ರೇಟ್‌ವಾಲ್‌-2' ಪೂಜಾರಗೆ ಮುಂದೆ ಭಾರತ ತಂಡದಲ್ಲಿ ಜಾಗ ಇಲ್ವಾ?!'ಗ್ರೇಟ್‌ವಾಲ್‌-2' ಪೂಜಾರಗೆ ಮುಂದೆ ಭಾರತ ತಂಡದಲ್ಲಿ ಜಾಗ ಇಲ್ವಾ?!

"ಭಾರತದ ಟಿ20 ನಾಯಕತ್ವ ರೋಹಿತ್ ಶರ್ಮಾಗೆ ನೀಡಬೇಕೆಂದು ನನಗನ್ನಿಸುತ್ತಿದೆ. ಯಾಕೆಂದರೆ ಅವರು ಮುಂಬೈ ಇಂಡಿಯನ್ಸ್ ತಂಡವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ," ಎಂದು ಕ್ರಿಕ್‌ಬೌನ್ಸರ್ ಜೊತೆ ಮಾತನಾಡಿದ ಪನೇಸರ್ ಹೇಳಿದ್ದಾರೆ. ಕೊಹ್ಲಿ ಮುಂದಿನ ಐದು ಪಂದ್ಯಗಳ ಟೆಸ್ಟ್‌ ಸರಣಿಯೂ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದಾರೆ ಎಂದು ಪನೇಸರ್ ತಿಳಿಸಿದ್ದಾರೆ.

Story first published: Saturday, June 26, 2021, 13:54 [IST]
Other articles published on Jun 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X