ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ವಿಶ್ವಕಪ್‌ ತಂಡದಲ್ಲಿ ಇದೊಂದು ಕೊರತೆ ಇದೆ: ಗೌತಮ್‌ ಗಂಭೀರ್‌

ICC World Cup 2019 : ವಿಶ್ವಕಪ್ ನಲ್ಲಿ ಟೀಂ ಇಂಡಿಯಾಗೆ ಎದುರಾಗಲಿದೆ ದೊಡ್ಡ ಸಮಸ್ಯೆ..? | Oneindia Kannada
Indias World Cup squad is one quality pacer short, says Gautam Gambhir

ಮುಂಬೈ, ಮೇ 15: ಬಹು ನಿರೀಕ್ಷಿತ ಐಸಿಸಿ ವಿಶ್ವಕಪ್‌ ಟೂರ್ನಿಗೆ ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲಿ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ವಿಶ್ವಕಪ್‌ಗೆ ಪ್ರಕಟಿಸಲಾಗಿರುವ ಟೀಮ್‌ ಇಂಡಿಯಾದಲ್ಲಿ ಇರುವ ಕೊರತೆ ಕುರಿತಾಗಿ ಮಾತನಾಡಿದ್ದಾರೆ.

ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಬಗ್ಗೆ ಸೆಹ್ವಾಗ್‌ ಏನಂತ್ತಾರೆ?!ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಬಗ್ಗೆ ಸೆಹ್ವಾಗ್‌ ಏನಂತ್ತಾರೆ?!

2011ರ ವಿಶ್ವಕಪ್‌ ಫೈನಲ್‌ನಲ್ಲಿ 97 ರನ್‌ಗಳನ್ನು ಗಳಿಸಿ ತಂಡಕ್ಕೆ ಚಾಂಪಿಯನ್ಸ್‌ ಪಟ್ಟ ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಎಡಗೈ ಬ್ಯಾಟ್ಸ್‌ಮನ್‌ ಗಂಭೀರ್‌, ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಹೆಚ್ಚುವರಿ ಪರಿಣತ ವೇಗದ ಬೌಲರ್‌ನ ಕೊರತೆ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಎರಡು ಬಾರಿಯ ವಿಶ್ವ ಚಾಂಪಿಯನ್ಸ್‌ ಟೀಮ್‌ ಇಂಡಿಯಾ ಜೂನ್‌ 5ರಂದು ಸೌತ್‌ಹ್ಯಾಂಪ್ಟನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ವಿಶ್ವಕಪ್‌ ಅಭಿಯಾನ ಆರಂಭಿಸಲಿದೆ.

ಧೋನಿ, ರೋಹಿತ್‌ ಜೊತೆಗೂಡಿ ವಿಶ್ವಕಪ್‌ಗೆ ರಣತಂತ್ರ ರಚಿಸಲಿರುವ ಕೊಹ್ಲಿಧೋನಿ, ರೋಹಿತ್‌ ಜೊತೆಗೂಡಿ ವಿಶ್ವಕಪ್‌ಗೆ ರಣತಂತ್ರ ರಚಿಸಲಿರುವ ಕೊಹ್ಲಿ

"ಭಾರತ ತಂಡದಲ್ಲಿ ಗುಣಮಟ್ಟದ ವೇಗದ ಬೌಲರ್‌ಗಳ ಕೊರತೆ ಇದೆ ಎಂಬುದು ನನ್ನ ಅಭಿಪ್ರಾಯವಾಗಿದೆ. ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಶಮಿ ಮತ್ತು ಭುವನೇಶ್ವರ್‌ ಕುಮಾರ್‌ಗೆ ಅಗತ್ಯದ ಬೆಂಬಲ ಬೇಕಿದೆ. ಇನ್ನು ಆಲ್‌ರೌಂಡರ್‌ಗಳಾದ ಹಾರ್ದಿಕ್‌ ಪಾಂಡ್ಯ ಮತ್ತು ವಿಜಯ್‌ ಶಂಕರ್‌ ತಂಡಕ್ಕೆ ಅಗತ್ಯವಿರುವ ವೇಗದ ಬೌಲಿಂಗ್‌ ದಾಳಿಯನ್ನು ಒದಗಿಸಬಲ್ಲರು ಎಂದು ನೀವು ವಾದಿಸಬಹುದು. ಆದರೆ ಇದಕ್ಕೆ ನನ್ನ ಸಹಮತಿ ಇಲ್ಲ,'' ಎಂದು ಇತ್ತೀಚೆಗಷ್ಟೇ ರಾಜಕೀಯ ಜೀವನದಲ್ಲಿ ಹೊಸ ಇನಿಂಗ್ಸ್‌ ಆರಂಭಿಸಲು ಬಿಜೆಪಿ ಪಕ್ಷ ಸೇರಿರುವ ಗಂಭೀರ್‌ ಹೇಳಿದ್ದಾರೆ.

ವಿಶ್ವಕಪ್ 2019: ಪಂತ್ ಬದಲು ಕಾರ್ತಿಕ್ ಆರಿಸಿದ್ದಕ್ಕೆ ಕಾರಣ ಹೇಳಿದ ಕೊಹ್ಲಿವಿಶ್ವಕಪ್ 2019: ಪಂತ್ ಬದಲು ಕಾರ್ತಿಕ್ ಆರಿಸಿದ್ದಕ್ಕೆ ಕಾರಣ ಹೇಳಿದ ಕೊಹ್ಲಿ

"ಎಲ್ಲಾ ತಂಡಗಳು ಲೀಗ್‌ ಹಂತದಲ್ಲಿ ಪರಸ್ಪರ ಮುಖಾಮುಖಿಯಾಗುವುದರಿಂದ ಈ ಬಾರಿಯ ವಿಶ್ವಕಪ್‌ ಹೆಚ್ಚು ಸ್ಪರ್ಧಾತ್ಮಕವಾಗಿರಲಿದೆ. ಈ ಮಾದರಿಯ ವಿಶ್ವಕಪ್‌ನಲ್ಲಿ ವಿಶ್ವದ ನಿಜವಾದ ಚಾಂಪಿಯನ್‌ ತಂಡ ಯಾವುದು ಎಂಬುದು ಬಹಿರಂಗವಾಗುತ್ತದೆ. ಐಸಿಸಿ ಇದೇ ಮಾದರಿಯನ್ನು ಭವಿಷ್ಯದ ಎಲ್ಲಾ ವಿಶ್ವಕಪ್‌ ಟೂರ್ನಿಗಳಳಿಗೂ ಕಾಯ್ದುಕೊಳ್ಳಬೇಕು,'' ಎಂದು ಐಸಿಸಿ ವಿಶ್ವಕಪ್‌ ಟೂರ್ನಿಯ ನೂತನ ಮಾದರಿ ಕುರಿತಾಗಿ ಗಂಭಿರ್‌ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

cricket: ಧೋನಿ ಕೂಡ ತಪ್ಪುಗಳನ್ನು ಮಾಡ್ತಾರೆಂದ ಕುಲ್ದೀಪ್‌ ಯಾದವ್‌!cricket: ಧೋನಿ ಕೂಡ ತಪ್ಪುಗಳನ್ನು ಮಾಡ್ತಾರೆಂದ ಕುಲ್ದೀಪ್‌ ಯಾದವ್‌!

ಇನ್ನು ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಕಠಿಣ ಎದುರಾಳಿಗಳು ಯಾರೆಂಬುದರ ಪ್ರಶಸ್ನೆಗೆ ಉತ್ತರಿಸಿದ ಗೌತಮ್‌, "ಭಾರತ ಹೊರತಾಗಿ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಟೂರ್ನಿಯಲ್ಲಿ ಅತ್ಯಂತ ಶ್ರೇಷ್ಠ ಬೌಲಿಂಗ್‌ ದಾಳಿಯನ್ನು ಆಸ್ಟ್ರೇಲಿಯಾ ತಂಡ ಹೊಂದಿದೆ. ಜೊತೆಗೆ ಇಂಗ್ಲೆಂಡ್‌ ಮತ್ತು ನ್ಯೂಜಿಲೆಂಡ್‌ ತಂಡಗಳು ಕೂಡ ಉತ್ತಮ ಅವಕಾಶ ಹೊಂದಿವೆ,'' ಎಂದಿದ್ದಾರೆ.

Story first published: Wednesday, May 15, 2019, 19:57 [IST]
Other articles published on May 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X