ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ವಿಶೇಷ ಅಭಿನಂದನೆ ತಿಳಿಸಿದ ಹಿರಿಯರ ಕ್ರಿಕೆಟ್‌ ತಂಡ

India Senior Team Players Congratulate India Under -19 Womens Team For Win T20 World Cup

19 ವರ್ಷದೊಳಗಿನ ಮಹಿಳಾ ಟಿ20 ವಿಶ್ವಕಪ್‌ನ ಚೊಚ್ಚಲ ಆವೃತ್ತಿಯಲ್ಲಿ ಶಫಾಲಿ ವರ್ಮಾ ನೇತೃತ್ವದ ಭಾರತ ತಂಡ ಚಾಂಪಿಯನ್ ಆಗಿದೆ. ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 7 ವಿಕೆಟ್‌ಗಳ ಅಂತರದಲ್ಲಿ ಸೋಲಿಸುವ ಮೂಲಕ ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ಸಾಧನೆ ಮಾಡಿದೆ.

ಭಾರತದ ವನಿತೆಯರ ಸಾಧನೆಗೆ ಇಡೀ ದೇಶವೆ ಅಭಿನಂದನೆ ಸಲ್ಲಿಸಿದೆ. ಮಾಜಿ ಕ್ರಿಕೆಟಿಗರು, ಕ್ರಿಕೆಟಿಗರು ಸೇರಿದಂತೆ ಹಲವು ದಿಗ್ಗಜರಿಂದ ಶೆಫಾಲಿ ವರ್ಮಾ ಪಡೆಗೆ ಅಭಿನಂದನೆಯ ಮಹಾಪೂರವೇ ಹರಿದು ಬಂದಿದೆ.

ಭಾರತದ ಪುರುಷರ ತಂಡ ಕೂಡ ಭಾರತದ ಅಂಡರ್ 19 ಮಹಿಳಾ ತಂಡಕ್ಕೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಕೋಚ್ ರಾಹುಲ್ ದ್ರಾವಿಡ್ ಮತ್ತು ಆರಂಭಿಕ ಆಟಗಾರ ಪೃಥ್ವಿ ಶಾ ವಿಶೇಷ ಅಭಿನಂದನೆ ಸಲ್ಲಿಸಿದರು. ಪೃಥ್ವಿ ಶಾ ನಾಯಕತ್ವದಲ್ಲಿ ಭಾರತದ ಅಂಡರ್ 19 ಪುರುಷರ ತಂಡ 2018ರಲ್ಲಿ ವಿಶ್ವಕಪ್‌ ಗೆದ್ದು ಇತಿಹಾಸ ನಿರ್ಮಿಸಿತ್ತು.

India Senior Team Players Congratulate India Under -19 Womens Team For Win T20 World Cup

ಭಾರತೀಯ ಪುರುಷರ ತಂಡ ಯುವತಿಯರ ತಂಡವನ್ನು ಅಭಿನಂದಿಸುತ್ತಿರುವ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಭಾರತದ ಅಂಡರ್ 19 ವಿಶ್ವಕಪ್ ವಿಜೇತ ತಂಡದ ನಾಯಕರಾಗಿದ್ದ ಪೃಥ್ವಿ ಶಾರನ್ನು ವಿಶೇಷ ಸಂದೇಶ ಕಳಿಸುವಂತೆ ಕೋಚ್ ರಾಹುಲ್ ದ್ರಾವಿಡ್ ಕೇಳಿಕೊಂಡರು.

ಅಭಿನಂದನೆ ಸಲ್ಲಿಸಿದ ದ್ರಾವಿಡ್, ಪೃಥ್ವಿ ಶಾ

"ಭಾರತ ಮಹಿಳಾ ಅಂಡರ್ 19 ತಂಡಕ್ಕೆ ಇದೊಂದು ಹೆಗ್ಗುರುತಾಗಿದೆ. ಈ ದಿನ ನಮಗೆ ಅದ್ಭುತವಾಗಿದೆ. ವಿಶ್ವಕಪ್ ಗೆದ್ದಿರುವ ಯುವತಿಯರಿಗೆ ಸಂದೇಶವನ್ನು ನೀಡುವಂತೆ ನಾನು ಅಂಡರ್ 16 ಪುರುಷ ತಂಡದ ವಿಶ್ವಕಪ್ ವಿಜೇತ ನಾಯಕ ಪೃಥ್ವಿ ಶಾಗೆ ಕೇಳಿಕೊಳ್ಳುತ್ತೇನೆ" ಎಂದು ದ್ರಾವಿಡ್ ಹೇಳಿದರು.

ನಂತರ ಮಾತನಾಡಿದ ಪೃಥ್ವಿ ಶಾ "ಇದು ಒಂದು ದೊಡ್ಡ ಸಾಧನೆ ಎಂದು ಭಾವಿಸುತ್ತೇನೆ. ತಂಡದ ಎಲ್ಲಾ ಸದಸ್ಯರು ವಿಶ್ವಕಪ್ ವಿಜೇತ ಮಹಿಳಾ ತಂಡವನ್ನು ಅಭಿನಂದಿಸಲು ಬಯಸುತ್ತಾರೆ. ವಿಶ್ವಕಪ್ ಗೆದ್ದ ತಂಡದ ಎಲ್ಲಾ ಸದಸ್ಯರಿಗೂ ಅಭಿನಂದನೆಗಳು" ಎಂದು ಹೇಳಿದರು.

ಚೊಚ್ಚಲ ಕಪ್ ಗೆದ್ದು ಇತಿಹಾಸ ನಿರ್ಮಾಣ

ಅಂಡರ್ 19 ಮಹಿಳಾ ವಿಶ್ವಕಪ್‌ನ ಇಡೀ ಟೂರ್ನಿಯಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿತ್ತು. ಸೂಪರ್ ಸಿಕ್ಸ್ ಹಂತದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿದ್ದು ಬಿಟ್ಟರೆ ಉಳಿದ ಎಲ್ಲಾ ಪಂದ್ಯಗಳಲ್ಲಿ ಶಫಾಲಿ ವರ್ಮಾ ಪಡೆ ಗೆಲುವು ಸಾಧಿಸಿತ್ತು.

ಇಡೀ ಟೂರ್ನಿಯಲ್ಲಿ ಅಜೇಯರಾಗಿದ್ದ ಇಂಗ್ಲೆಂಡ್‌ ತಂಡ ಫೈನಲ್‌ ಪಂದ್ಯದಲ್ಲಿ ಭಾರತದ ವಿರುದ್ಧ ಮಂಡಿಯೂರಿತು. ಗಮನಾರ್ಹ ವಿಚಾರವೆಂದರೆ, ಟೂರ್ನಿಯಲ್ಲಿ ಇಂಗ್ಲೆಂಡ್ ಆಡಿದ ಎಲ್ಲಾ ಪಂದ್ಯಗಳಲ್ಲಿ ಟಾಸ್ ಗೆದ್ದಿತ್ತು, ಆದರೆ ಫೈನಲ್‌ ಪಂದ್ಯದಲ್ಲಿ ಮಾತ್ರ ಟಾಸ್ ಸೋತಿತ್ತು, ನಂತರ ಪಂದ್ಯವನ್ನು ಕೂಡ.

Story first published: Monday, January 30, 2023, 17:17 [IST]
Other articles published on Jan 30, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X