ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಂಡೀಸ್ ಸರಣಿ: ಈ ಆಟಗಾರರ ಮೇಲೆ ನೇತಾಡುತ್ತಿದೆ ತೂಗುಗತ್ತಿ: ರೋಹಿತ್ ನಾಯಕತ್ವ ಬಹುತೇಕ ಫಿಕ್ಸ್: ವರದಿ

India set to led by Rohit Sharma against West Indies series and veteran players under scanner- Reports

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಕಂಡ ಬಳಿಕ ತಂಡದ ಆಟಗಾರರ ಪ್ರದರ್ಶನದ ಬಗ್ಗೆ ಸಾಕಷ್ಟು ವಿಮರ್ಶೆಗಳು ನಡೆಯುತ್ತಿದೆ. ಈ ಹಂತದಲ್ಲಿ ಕೆಲವೇ ದಿನಗಳಲ್ಲಿ ಭಾರತ ಮತ್ತೊಂದು ಸರಣಿಗೆ ಸಜ್ಜಾಗಲಿದೆ. ವೆಸ್ಟ್ ಇಂಡೀಸ್ ವಿರುದ್ಧ ಭಾರತ ಸೀಮಿತ ಓವರ್‌ಗಳ ಸರಣಿಯಲ್ಲಿ ಆಡಲು ಸಜ್ಜಾಗುತ್ತಿದ್ದು ಈ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುವವರು ಯಾರು? ತಾವೆಲ್ಲಾ ಆಟಗಾರರಿಗೆ ಅವಕಾಶ ದೊರೆಯಲಿದೆ ಎಂಬುದು ಕೂಡ ಈಗ ಕುತೂಹಲಕ್ಕೆ ಕಾರಣವಾಗಿದೆ.

ಫಿಟ್‌ನೆಸ್ ಕಾರಣದಿಂದಾಗಿ ದಕ್ಷಿಣ ಆಫ್ರಿಕಾ ಪ್ರವಾಸದಿಂದ ತಪ್ಪಿಸಿಕೊಂಡಿದ್ದ ರೋಹಿತ್ ಶರ್ಮಾ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಭಾಗಿಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ. ಈ ಬಗ್ಗೆ ಅಧಿಕೃತವಾಗಿ ಇನ್ನಷ್ಟೇ ಮಾಹಿತಿ ದೊರೆಯಬೇಕಿದ್ದು ಶರ್ಮಾ ಆಡಲು ಸಂಪೂರ್ಣವಾಗಿ ಸಮರ್ಥವಾಗಿದ್ದಾರೆ ಎಂಬ ವರದಿಗಳು ಬರುತ್ತಿದೆ. ಹೀಗಾಗಿ ಮುಂಬರುವ ಸರಣಿಗೆ ರೋಹಿತ್ ತಂಡವನ್ನು ಮುನ್ನಡೆಸುವುದು ನಿಶ್ಚಿತ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಕೆಎಲ್ ರಾಹುಲ್ ಮುನ್ನಡೆಸಿದ್ದರು. ಆದರೆ ಸರಣಿಯ ಮೂರು ಪಂದ್ಯದಲ್ಲಿಯೂ ಭಾರತ ಸೋಲು ಅನುಭವಿಸಿದ ಕಾರಣ ರಾಹುಲ್ ನಾಯಕತ್ವದ ಬಗ್ಗೆ ಟೀಕೆಗಳು ಕೇಳಿ ಬಂದಿದೆ.

ಕೊಹ್ಲಿ ನಾಯಕತ್ವ ಬಿಡುವಂತೆ ತಂಡದೊಳಗೆ ರಚಿಸಿದ್ದ ಈ ಪ್ಲಾನ್ ಯಾರಿಗೂ ಗೊತ್ತಿಲ್ಲ ಬಿಡಿ: ಮಾಜಿ ಕ್ರಿಕೆಟಿಗ!ಕೊಹ್ಲಿ ನಾಯಕತ್ವ ಬಿಡುವಂತೆ ತಂಡದೊಳಗೆ ರಚಿಸಿದ್ದ ಈ ಪ್ಲಾನ್ ಯಾರಿಗೂ ಗೊತ್ತಿಲ್ಲ ಬಿಡಿ: ಮಾಜಿ ಕ್ರಿಕೆಟಿಗ!

ಮುನ್ನಡೆಸಲು ರೋಹಿತ್ ಸಜ್ಜು

ಮುನ್ನಡೆಸಲು ರೋಹಿತ್ ಸಜ್ಜು

ಈ ವಿಚಾರವಾಗಿ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ಪ್ರತಿಕ್ರಿಯೆ ನೀಡಿದ್ದಾರೆ. "ರೋಹಿತ್ ಶರ್ಮಾ ಸಮರ್ಥವಾಗಿದ್ದು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ತಂಡವನ್ನು ಮುನ್ನಡೆಸಲು ಸಿದ್ಧವಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಮುನ್ನ ರೋಹಿತ್ ಶರ್ಮಾ ಫಿಟ್‌ನೆಸ್ ಪಡೆಯುವ ಸಲುವಾಗಿ 7 ವಾರಗಳ ಕಾಲ ರಿಹ್ಯಾಬಿಲಿಟೇಷನ್‌ನಲ್ಲಿ ಶರ್ಮಾ ಭಾಗಿಯಾಗಿದ್ದಾರೆ. ಅವರು ಈಗಾಗಲೇ ಮುಂಬೈನಲ್ಲಿ ತರಬೇತಿ ಪಡೆಯುತ್ತಿದ್ದು ಶೀಘ್ರದಲ್ಲಿಯೇ ಬೆಂಗಳೂರಿಗೆ ಬಂದು ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಿಂದ ಔಪಚಾರಿಕ ಅನುಮತಿಯನ್ನು ಪಡೆದುಕೊಳ್ಳಲಿದ್ದಾರೆ" ಎಂದು ಹೆಸರು ಹೇಳಲು ಇಚ್ಚಿಸದ ಬಿಸಿಸಿಐ ಅಧಿಕಾರಿ ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಟೆಸ್ಟ್ ನಾಯಕನಾಗಿಯೂ ರೋಹಿತ್ ಹೆಸರು ಘೋಷಣೆ?

ಟೆಸ್ಟ್ ನಾಯಕನಾಗಿಯೂ ರೋಹಿತ್ ಹೆಸರು ಘೋಷಣೆ?

ಇನ್ನು 2022 ಹಾಗೂ 2023ರಲ್ಲಿ ನಡೆಯಲಿರುವ ವಿಶ್ವಕಪ್‌ಅನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತದ ಸೀಮಿತ ಓವರ್‌ಗಳ ತಮಡದ ನಾಯಕನನ್ನಾಗಿ ರೋಹಿತ್ ಶರ್ಮಾ ಅವರನ್ನು ಈಗಾಗಲೇ ಘೋಷಿಸಲಾಗಿದೆ. ಈಗ ರೋಹಿತ್ ಶರ್ಮಾ ಟೆಸ್ಟ್ ತಂಡಕ್ಕೂ ನಾಯಕನಾಗಿ ಹೆಸರಿಸಲ್ಪಡುವ ಸಾಧ್ಯತೆ ದಟ್ಟವಾಗಿದೆ. ಟೆಸ್ಟ್ ನಾಯಕತ್ವಕ್ಕೆ ಬಿಸಿಸಿಐ ಇತರ ಹೆಸರುಗಳನ್ನು ಕೂಡ ಮುಂದಿಟ್ಟುಕೊಂಡು ಪರಾಮರ್ಶಿಸುತ್ತಿದ್ದು ರೋಹಿತ್ ಶರ್ಮಾರನ್ನೇ ಟೆಸ್ಟ್ ನಾಯಕನನ್ನಾಗಿಯೂ ಘೋಷಿಸುವ ಸಾಧ್ಯತೆ ದಟ್ಟವಾಗಿದೆ.

ಅನುಭವಿ ಆಟಗಾರರ ಮೇಲೆ ತೂಗುಗತ್ತಿ!

ಅನುಭವಿ ಆಟಗಾರರ ಮೇಲೆ ತೂಗುಗತ್ತಿ!

ಇನ್ನು ಇತ್ತೀಚೆಗೆ ಮುಕ್ತಾಯವಾದ ಏಕದಿನ ಪಂದ್ಯದಲ್ಲಿ ಅನುಭವಿ ಬೌಲರ್‌ಗಳಾದ ಭುವನೇಶ್ವರ್ ಕುಮಾರ್ ಹಾಗೂ ಆರ್ ಅಶ್ವಿನ್ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ದಕ್ಷಿಣ ಆಫ್ರಿಕಾ ಸರಣಿಯ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಆಡಿದ್ದ ಬಳಿಕ ಅಂತಿಮ ಪಂದ್ಯದಿಂದ ಈ ಇಬ್ಬರು ಆಟಗಾರರು ಕೂಡ ಹೊರಬಿದ್ದಿದ್ದರು. ಇದೀಗ ವಿಂಡೀಸ್ ವಿರುದ್ಧದ ಸರಣಿಯಿಂದ ಈ ಆಟಗಾರರಿಗೆ ಕೋಕ್ ದೊರೆಯುವ ಸಾಧ್ಯತೆಯಿದೆ.

ಜಡ್ಡು, ಪಾಂಡ್ಯ ಕಮ್‌ಬ್ಯಾಕ್?

ಜಡ್ಡು, ಪಾಂಡ್ಯ ಕಮ್‌ಬ್ಯಾಕ್?

ಇನ್ನು ದಕ್ಷಿಣ ಆಪ್ರಿಕಾ ಪ್ರವಾಸದಲ್ಲಿ ಮೊದಲ ಬಾರಿಗೆ ಏಕದಿನ ತಂಡದಲ್ಲಿ ಅವಕಾಶ ಪಡೆದಿದ್ದ ಯುವ ಆಟಗಾರ ವೆಂಕಟೇಶ್ ಐಯ್ಯರ್ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ವಿಫಲವಾಗಿದ್ದು ಹಾರ್ದಿಕ್ ಪಾಂಡ್ಯ ಕಡೆ ಮತ್ತೊಮ್ಮೆ ಚಿತ್ತ ಹರಿಸುವಂತೆ ಮಾಡಿದೆ. ಆದರೆ ಹಾರ್ದಿಕ್ ಪಾಂಡ್ಯ ಫಿಟ್‌ನೆಸ್ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ. ಇನ್ನು ದಕ್ಷಿಣ ಆಫ್ರಿಕಾ ವಿರುದ್ಧಧ ಸರಣಿಯಿಂದ ಹೊರಗುಳಿದಿದ್ದ ಆಟಗಾರರ ಪೈಕಿ ಮತ್ತೊಂದು ಪ್ರಮುಖ ಹೆಸರು ರವೀಂದ್ರ ಜಡೇಜಾ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಜಡ್ಡು ಸ್ಥಾನ ಪಡೆಯುವ ಸಾಧ್ಯತೆಯಿದೆ.

Virat Kohli ಈಗಲೂ ಎಷ್ಟು ವರ್ಷ ಕ್ರಿಕೆಟ್ ಆಡಬಹುದು | Oneindia Kannada

Story first published: Tuesday, January 25, 2022, 23:50 [IST]
Other articles published on Jan 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X