ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

4 ಅಥವಾ 5ರಲ್ಲಿ ಪೃಥ್ವಿ ಶಾ ಆಡಿಸಲು ಭಾರತ ಯತ್ನಿಸಲಿ: ಬ್ರಾಡ್ ಹಾಗ್

India should try Prithvi Shaw at number 4 or 5, says Brad Hogg

ಮೆಲ್ಬರ್ನ್: ಆರಂಭಿಕರಾಗಿ ಪರದಾಡುತ್ತಿರುವ ಟೀಮ್ ಇಂಡಿಯಾದ ಯುವ ಬ್ಯಾಟ್ಸ್‌ಮನ್‌ ಪೃಥ್ವಿ ಅವರಿಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಬ್ರಾಡ್‌ ಹಾಗ್ ಉತ್ತಮ ಸಲಹೆ ನೀಡಿದ್ದಾರೆ. ಶಾ ಅವರನ್ನು ಆರಂಭಿಕರಾಗಿ ಆಡಿಸಬೇಡಿ. ಬದಲಿಗೆ 4 ಅಥವಾ 5ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಆಡಿಸಲು ಯತ್ನಿಸಿ ಎಂದಿದ್ದಾರೆ.

ಐಸಿಸಿ ರ್‍ಯಾಂಕಿಂಗ್ಸ್‌: ವಿರಾಟ್ ಕೊಹ್ಲಿಗಿಂತ ಕೆಎಲ್ ರಾಹುಲ್ ಮುಂದುಐಸಿಸಿ ರ್‍ಯಾಂಕಿಂಗ್ಸ್‌: ವಿರಾಟ್ ಕೊಹ್ಲಿಗಿಂತ ಕೆಎಲ್ ರಾಹುಲ್ ಮುಂದು

ಮಾಜಿ ಸ್ಪಿನ್ನರ್ ಆಗಿರುವ ಬ್ರಾಡ್‌ ಹಾಗ್, ಪೃಥ್ವಿ ಶಾ ಅವರ ಕೌಶಲಗಳು 4 ಅಥವಾ 5ನೇ ಬ್ಯಾಟಿಂಗ್‌ ಕ್ರಮಾಂಕಕ್ಕೆ ಉತ್ತಮವಾಗಿ ಹೊಂದಿಕೆಯಾಗುತ್ತದೆ. ಹೀಗಾಗಿ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಿ ನೋಡಿ ಎಂದಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಆರಂಭಿಕರಾಗಿ ಆಡಿದ್ದ ಶಾ 0, 4 ರನ್ ಗಳಿಸಿದ್ದರು.

'ದೇಸಿ ಕ್ರಿಕೆಟ್‌ನಲ್ಲಿ ಪೃಥ್ವಿ ಶಾ ಸಾಕಷ್ಟು ರನ್ ಗಳಿಸಿದ್ದಾರೆ. ಆದ್ದರಿಂದ ಅವರು ಒಳ್ಳೆಯ ಪ್ರತಿಭಾನ್ವಿತ. ನನಗನ್ನಿಸುತ್ತದೆ, ಭಾರತ ಪೃಥ್ವಿಯನ್ನು ದೀರ್ಘ ಸಮಯದವರೆಗೆ 4 ಅಥವಾ 5ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಆಡಿಸಲು ಯತ್ನಿಸಬೇಕು. ಅಲ್ಲಿ ಅವರ ಕೌಶಲಗಳು ಹೆಚ್ಚು ಹೊಂದಾಣಿಕೆಯಾಗುತ್ತದೆ,' ಎಂದು ಹಾಗ್ ಟ್ವೀಟ್ ಮಾಡಿದ್ದಾರೆ.

ಮ್ಯಾನ್ಚೆಸ್ಟರ್ ಯು., ಲಿವರ್‌ಪೂಲ್, ಬಾರ್ಕಾ ಹಿಂದಿಕ್ಕಿದ ಮುಂಬೈ ಇಂಡಿಯನ್ಸ್!ಮ್ಯಾನ್ಚೆಸ್ಟರ್ ಯು., ಲಿವರ್‌ಪೂಲ್, ಬಾರ್ಕಾ ಹಿಂದಿಕ್ಕಿದ ಮುಂಬೈ ಇಂಡಿಯನ್ಸ್!

ಭಾರತ-ಆಸ್ಟ್ರೇಲಿಯಾ ಆರಂಭಿಕ ಟೆಸ್ಟ್‌ನಲ್ಲಿ ಭಾರತ ಹೀನಾಯವಾಗಿ ಸೋತಿತ್ತು. ದ್ವಿತೀಯ ಪಂದ್ಯ ಡಿಸೆಂಬರ್ 26ರಂದು ಮೆಲ್ಬರ್ನ್ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಆರಂಭವಾಗಲಿದೆ. ಭಾರತದ ನಾಯಕ ವಿರಾಟ್ ಕೊಹ್ಲಿ ಇನ್ನುಳಿದ ಪಂದ್ಯಗಳಲ್ಲಿ ಆಡುತ್ತಿಲ್ಲವಾದ್ದರಿಂದ ಭಾರತ ತಂಡದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.

Story first published: Thursday, December 24, 2020, 9:50 [IST]
Other articles published on Dec 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X