ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಂಡೀಸ್‌ ಪ್ರವಾಸಕ್ಕೆ ಟೀಮ್‌ ಇಂಡಿಯಾ ಪ್ರಕಟ, 3 ಕನ್ನಡಿಗರಿಗೆ ಸ್ಥಾನ

ಟೀಂ ಇಂಡಿಯಾದ ಎಲ್ಲ ಗೊಂದಲಗಳಿಗೆ ತೆರೆ ಎಳೆದ BCCI..!
India squads for WI tour announced, Rohit Sharma back in Test Team

ಮುಂಬೈ, ಜುಲೈ 21: ಎಲ್ಲಾ ಗೊಂದಲಗಳ ಬಳಿಕ ಟಿ20, ಒಡಿಐ ಹಾಗೂ ಟೆಸ್ಟ್‌ ಸರಣಿ ಸಲುವಾಗಿ ವೆಸ್ಟ್‌ ಇಂಡೀಸ್‌ ಪ್ರವಾಸ ಕೈಗೊಳ್ಳಲಿರುವ ಟೀಮ್‌ ಇಂಡಿಯಾವನ್ನು ಎಂ.ಎಸ್‌.ಕೆ ಪ್ರಸಾದ್‌ ಸಾರಥ್ಯದ ಆಯ್ಕೆ ಸಮಿತಿಯು ಭಾನುವಾರ ಪ್ರಕಟ ಮಾಡಿದೆ.

ಮೂರೂ ಮಾದರಿಗಳ ಸರಣಿಯಲ್ಲಿ ವಿರಾಟ್‌ ಕೊಹ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದು, ಅನುಭವಿ ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಅವರಿಗೆ ಮಾತ್ರವೇ ಸೀಮಿತ ಓವರ್‌ಗಳ ಸರಣಿಗೆ ವಿಶ್ರಾಂತಿ ನಿಡಲಾಗಿದೆ. ಇನ್ನು ಏಕದಿನ ತಂಡದ ಉಪನಾಯಕ ರೋಹಿತ್‌ ಶರ್ಮಾಗೆ ಟೆಸ್ಟ್‌ ತಂಡದಲ್ಲಿ ಮರಳಿ ಸ್ಥಾನ ನೀಡಲಾಗಿದ್ದು, ಸರಣಿ ಆಗಸ್ಟ್‌ 3ರಿಂದ ಆರಂಭವಾಗಲಿದೆ.

2019-2020ರಲ್ಲಿ ಭಾರತ ತವರಿನಲ್ಲಿ ಆಡುವ ಕ್ರಿಕೆಟ್‌ ಸರಣಿಗಳ ವಿವರ ಇಲ್ಲಿದೆ2019-2020ರಲ್ಲಿ ಭಾರತ ತವರಿನಲ್ಲಿ ಆಡುವ ಕ್ರಿಕೆಟ್‌ ಸರಣಿಗಳ ವಿವರ ಇಲ್ಲಿದೆ

ಇನ್ನು ನಿವೃತ್ತಿ ಕುರಿತಾಗಿ ಅಂತಿಮ ತೀರ್ಮಾನ ಕೈಗೊಳ್ಳದೇ ಇರುವ ಅನುಭವಿ ವಿಕೆಟ್‌-ಕೀಪರ್‌ ಎಂ.ಎಸ್‌ ಧೋನಿ ಎರಡು ತಿಂಗಳ ವಿರಾಮ ಬಯಸಿರುವ ಹಿನ್ನೆಲೆಯಲ್ಲಿ, ಯುವ ವಿಕೆಟ್‌-ಕೀಪರ್‌ ರಿಷಭ್‌ ಪಂತ್‌ ಮೂರೂ ಮಾದರಿಗಳಲ್ಲಿ ಭಾರತ ತಂಡಕ್ಕೆ ಮೊದಲ ಆಯ್ಕೆ ವಿಕೆಟ್‌-ಕೀಪರ್‌ ಬ್ಯಾಟ್ಸ್‌ಮನ್‌ ಆಗಿ ಸ್ಥಾನ ಪಡೆದುಕೊಂಡಿದ್ದಾರೆ. ಇದೇ ವೇಳೆ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯಗೆ ಸಂಪೂರ್ಣ ವಿಶ್ರಾಂತಿ ನೀಡಲಾಗಿದೆ.

ಗಾಯದ ಸಮಸ್ಯೆ ಕಾರಣ ದೀರ್ಘಾವಧಿಯ ಕಾಲ ತಂಡದಿಂದ ಹೊರಗುಳಿದಿದ್ದ ಅನುಭವಿ ವಿಕೆಟ್‌-ಕೀಪರ್‌ ವೃದ್ಧಿಮಾನ್‌ ಸಹಾ ಕೂಡ ಟೆಸ್ಟ್‌ ತಂಡಕ್ಕೆ ಮರಳಿದ್ದಾರೆ. ಸಹಾ 2018ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ವೇಳೆ ಗಾಯಗೊಂಡಿದ್ದರು. ಆರಂಭದಲ್ಲಿ ವಿರಾಟ್‌ ಕೊಹ್ಲಿ ಸೀಮಿತ ಓವರ್‌ಗಳ ಸರಣಿಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ ಎಂದು ವರದಿಯಾಗಿತ್ತು, ಆದರೆ ಎಲ್ಲಾ ಮಾದರಿಯಲ್ಲಿ ಆಡಲು ಖುದ್ದಾಗಿ ಕೊಹ್ಲಿ ನಿರ್ಧರಿಸಿದ್ದಾರೆ.

ಲಾರ್ಡ್ಸ್‌ ಪ್ರೇಕ್ಷಕರಿಗೆ 360 ಡಿಗ್ರಿ ದರ್ಶನ ಮಾಡಿಸಿದ ಎಬಿ ಡಿ'ವಿಲಿಯರ್ಸ್‌ಲಾರ್ಡ್ಸ್‌ ಪ್ರೇಕ್ಷಕರಿಗೆ 360 ಡಿಗ್ರಿ ದರ್ಶನ ಮಾಡಿಸಿದ ಎಬಿ ಡಿ'ವಿಲಿಯರ್ಸ್‌

ಇದೇ ವೇಳೆ ವಿಕೆಟ್‌-ಕೀಪರ್‌ ಬ್ಯಾಟ್ಸ್‌ಮನ್‌ ದಿನೇಶ್‌ ಕಾರ್ತಿಕ್‌ ಅವರನ್ನು ತಂಡದಿಂದ ಕೈಬಿಡಲಾಗಿದ್ದು, ಅವರ ಸ್ಥಾನದಲ್ಲಿ ಯುವ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌ ಸೀಮಿತ ಓವರ್‌ಗಳ ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ. ಜೊತೆಗೆ ವಿಶ್ವಕಪ್‌ ಟೂರ್ನಿ ವೇಳೆ ಗಾಯದ ಸಮಸ್ಯೆ ಎದುರಿಸಿದ್ದ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಸಂಪೂರ್ಣ ಚೇತರಿಸಿದ್ದು, ತಂಡಕ್ಕೆ ಮರಳಿದ್ದಾರೆ.

ಆಗಸ್ಟ್‌ 3ರಂದು ಸರಣಿ ಆರಂಭವಾಗಲಿದ್ದು ಮೊದಲಿಗೆ ಮೂರು ಪಂದ್ಯಗಳ ಟಿ20 ಸರಣಿ, ಬಳಿಕ 3 ಪಂದ್ಯಗಳ ಏಕದಿನ ಸರಣಿ ಹಾಗೂ ಚೊಚ್ಚಲ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಅಂಗವಾಗಿ 2 ಟೆಸ್ಟ್‌ ಪಂದ್ಯಗಳು ನಡೆಯಲಿದ್ದು, ಆಗಸ್ಟ್‌ 30ರ ಒಳಗಾಗಿ ಈ ಎಲ್ಲಾ ಪಂದ್ಯಗಳು ಮುಕ್ತಾಯಗೊಳ್ಳಲಿವೆ.

ಬೌಲಿಂಗ್‌ ಶೈಲಿ ಬದಲಾಯಿಸಿ ಪ್ರೇಕ್ಷಕರ ಹುಬ್ಬೇರಿಸಿದ ಅಶ್ವಿನ್‌!: ವಿಡಿಯೊಬೌಲಿಂಗ್‌ ಶೈಲಿ ಬದಲಾಯಿಸಿ ಪ್ರೇಕ್ಷಕರ ಹುಬ್ಬೇರಿಸಿದ ಅಶ್ವಿನ್‌!: ವಿಡಿಯೊ

ಸದ್ಯ ಟೀಮ್‌ ಇಂಡಿಯಾದ ತರಬೇತಿ ವರ್ಗದ ಜೊತೆಗಿನ ಒಪ್ಪಂದವನ್ನು ಬಿಸಿಸಿಐ 45 ದಿನಗಳ ಕಾಲ ವಿಸ್ತರಣೆ ಮಾಡಿರುವ ಹಿನ್ನೆಲೆಯಲ್ಲಿ ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲೂ ಕೋಚ್ ರವಿ ಶಾಸ್ತ್ರಿ ಮತ್ತು ತರಬೇತಿ ಸಿಬ್ಬಂದಿ ಸೇವೆ ಸಲ್ಲಿಸಲಿದೆ.

ಮನೀಶ್‌ ಪಂಡೆಗೆ ಸ್ಥಾನ

ಮನೀಶ್‌ ಪಂಡೆಗೆ ಸ್ಥಾನ

ವೆಸ್ಟ್‌ ಇಂಡೀಸ್‌ ಪ್ರವಾಸಕ್ಕೆ ಪ್ರಕಟಿಸಲಾದ ಟೀಮ್‌ ಇಂಡಿಯಾದಲ್ಲಿ ಕರ್ನಾಟಕದ ಮೂವರು ಬ್ಯಾಟ್ಸ್‌ಮನ್‌ಗಳು ಸ್ಥಾನ ಪಡೆದಿದ್ದಾರೆ. ಟೀಮ್‌ ಇಂಡಿಯಾದ ಖಾಯಂ ಸದಸ್ಯ ಆಗಿರುವ ಆರಂಭಕಾರ ಕೆ.ಎಲ್‌ ರಾಹುಲ್‌ ಅವರಿಗೆ ಟೆಸ್ಟ್‌, ಏಕದಿನ ಮತ್ತು ಟಿ20 ಮೂರರಲ್ಲೂ ಸ್ಥಾನ ಲಭ್ಯವಾಗಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ ಪ್ರವಾಸದ ವೇಳೆ ಭಾರತ ಟೆಸ್ಟ್‌ ತಂಡಕ್ಕೆ ಪದಾರ್ಪಣೆ ಮಾಡಿದ ಆರಂಭಿಕ ಬ್ಯಾಟರ್‌ ಮಯಾಂಕ್‌ ಅಗರ್ವಾಲ್‌ ಅವರಿಗೂ ಟೆಸ್ಟ್‌ ತಂಡದಲ್ಲಿನ ಸ್ಥಾನ ಸದ್ಯಕ್ಕೆ ಭದ್ರವಾಗಿದೆ. ಇನ್ನು ಭಾರತ 'ಎ' ತಂಡದ ಪರ ರನ್‌ ಹೊಳೆಯನ್ನೇ ಹರಿಸುತ್ತಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಮನೀಶ್‌ ಪಾಂಡೆಗೂ ಟೀಮ್‌ ಇಂಡಿಯಾದ ಬುಲಾವ್‌ ಮರಳಿ ಸಿಕ್ಕಿದ್ದು, ಏಕದಿನ ಮತ್ತು ಟಿ20 ತಂಡಗಳಲ್ಲಿ ಸ್ಥಾನ ಸಿಕ್ಕಿದೆ.

ಭಾರತ ಟೆಸ್ಟ್‌ ತಂಡ (2 ಪಂದ್ಯ, ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌)

ಭಾರತ ಟೆಸ್ಟ್‌ ತಂಡ (2 ಪಂದ್ಯ, ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌)

ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ಮಯಾಂಕ್‌ ಅಗರ್ವಾಲ್‌, ಕೆ.ಎಲ್‌ ರಾಹುಲ್‌, ಚೇತೇಶ್ವರ್‌ ಪೂಜಾರ, ಹನುಮ ವಿಹಾರಿ, ರೋಹಿತ್‌ ಶರ್ಮಾ, ರಿಷಭ್‌ ಪಂತ್‌ (ವಿಕೆಟ್‌-ಕೀಪರ್‌), ವೃದ್ಧಿಮಾನ್‌ ಸಹಾ (ವಿಕೆಟ್‌ಕೀಪರ್‌), ಆರ್‌. ಅಶ್ವಿನ್‌, ರವೀಂದ್ರ ಜಡೇಜಾ, ಕುಲ್ದೀಪ್‌ ಯಾದವ್‌, ಇಶಾಂತ್‌ ಶರ್ಮಾ, ಮೊಹಮ್ಮದ್‌ ಶಮಿ, ಜಸ್‌ಪ್ರೀತ್‌ ಬುಮ್ರಾ, ಉಮೇಶ್‌ ಯಾದವ್‌.

ಏಕದಿನ ಸರಣಿಗೆ ಭಾರತ ತಂಡ (ಮೂರು ಪಂದ್ಯಗಳು)

ಏಕದಿನ ಸರಣಿಗೆ ಭಾರತ ತಂಡ (ಮೂರು ಪಂದ್ಯಗಳು)

ವಿರಾಟ್ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ (ಉಪನಾಯಕ), ಶಿಖರ್‌ ಧವನ್‌, ಕೆ.ಎಲ್‌ ರಾಹುಲ್‌, ಶ್ರೇಯಸ್‌ ಅಯ್ಯರ್‌, ಮನೀಶ್‌ ಪಾಂಡೆ, ರಿಷಭ್‌ ಪಂತ್‌ (ವಿಕೆಟ್‌ಕೀಪರ್‌), ರವೀಂದ್ರ ಜಡೇಜಾ, ಕುಲ್ದೀಪ್‌ ಯಾದವ್‌, ಯುಜ್ವೆಂದ್ರ ಚಹಲ್‌, ಕೇದಾರ್‌ ಜಾಧವ್‌, ಮೊಹಮ್ಮದ್‌ ಶಮಿ, ಭುವನೇಶ್ವರ್‌ ಕುಮಾರ್‌, ಖಲೀಲ್‌ ಅಹ್ಮದ್‌, ನವದೀಪ್‌ ಸೈನಿ.

ಟಿ20 ಸರಣಿಗೆ ಭಾರತ ತಂಡ (ಮೂರು ಪಂದ್ಯಗಳು)

ಟಿ20 ಸರಣಿಗೆ ಭಾರತ ತಂಡ (ಮೂರು ಪಂದ್ಯಗಳು)

ವಿರಾಟ್ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ (ಉಪನಾಯಕ), ಶಿಖರ್‌ ಧವನ್‌, ಕೆ.ಎಲ್‌ ರಾಹುಲ್‌, ಶ್ರೇಯಸ್‌ ಅಯ್ಯರ್‌, ಮನೀಶ್‌ ಪಾಂಡೆ, ರಿಷಭ್‌ ಪಂತ್‌ (ವಿಕೆಟ್‌ಕೀಪರ್‌), ರವೀಂದ್ರ ಜಡೇಜಾ, ಕೃಣಾಲ್‌ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್‌ ಸುಂದರ್‌, ರಾಹುಲ್‌ ಚಹರ್‌, ಭುವನೇಶ್ವರ್‌ ಕುಮಾರ್‌, ಖಲೀಲ್‌ ಅಹ್ಮದ್‌, ದೀಪಕ್‌ ಚಹರ್‌, ನವದೀಪ್‌ ಸೈನಿ.

Story first published: Sunday, July 21, 2019, 16:11 [IST]
Other articles published on Jul 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X