ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭರ್ಜರಿ ಜಯದೊಂದಿಗೆ ಟೀಮ್ ಇಂಡಿಯದ ಅಂಡರ್-19 ವಿಶ್ವಕಪ್ ಅಭಿಯಾನ ಆರಂಭ

ಶ್ರೀಲಂಕಾವನ್ನು ಬಗ್ಗು ಬಡಿದ ಟೀಮ್ ಇಂಡಿಯಾ ಬೌಲರ್ಸ್ | U-19 World cup | India | Srilanka | Oneindia kannada
India Start Off U19 World Cup Campaign With Easy Win Against Sri Lanka

ಹಾಲಿ ಚಾಂಪಿಯನ್ ಟೀಮ್ ಇಂಡಿಯಾ ಅಂಡರ್-19 ವಿಶ್ವಕಪ್ ಟೂರ್ನಿಯನ್ನು ಜಯದೊಂದಿಗೆ ಆರಂಭಿಸಿದೆ. ನಿನ್ನೆ ಅಂಡರ್-19 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಶ್ರೀಲಂಕಾ ತಂಡದ ವಿರುದ್ಧ ಆಡಿತ್ತು ಈ ಪಂದ್ಯವನ್ನು ಅಧಿಕಾರಯುತವಾಗಿ ಗೆದ್ದುಕೊಂಡು ನಿರೀಕ್ಷಿತವಾಗಿ ಶುಭಾರಂಭ ಮಾಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಅದ್ಭುತ ಆಟವನ್ನು ಪ್ರದರ್ಶಿಸಿತು. ನಾಲ್ಕು ವಿಕೆಟ್‌ ಕಳೆದುಕೊಂಡು ಟೀಮ್ ಇಂಡಿಯಾ ಕಿರಿಯರು ಭರ್ಜರಿ 297ರನ್ ಕಲೆ ಹಾಕಿದರು. ಟೀಮ್ ಇಂಡಿಯಾ ಕಿರಿಯರ ಪರವಾಗಿ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್(59ರನ್ 74ಎಸೆತ) ಮತ್ತು ನಾಯಕ ಪ್ರಿಯಮ್ ಗಾರ್ಗ್ (56ರನ್ 72ಎಸೆತ) ಉತ್ತಮ ಆಟವನ್ನು ಪ್ರದರ್ಶಿಸಿದರು.

ಭಾರತ vs ಆಸ್ಟ್ರೇಲಿಯಾ: ನಿರ್ಣಾಯಕ ಪಂದ್ಯದಲ್ಲಿ ರೋಹಿತ್ ಶರ್ಮಾ ದಾಖಲೆಭಾರತ vs ಆಸ್ಟ್ರೇಲಿಯಾ: ನಿರ್ಣಾಯಕ ಪಂದ್ಯದಲ್ಲಿ ರೋಹಿತ್ ಶರ್ಮಾ ದಾಖಲೆ

ಈ ಇಬ್ಬರ ಬಳಿಕ ಉಪ ನಾಯಕ ದ್ರುವ್ ಜ್ಯುರೆಲ್(52ರನ್ 48ಎಸೆತ) ಮತ್ತು ಆಲ್‌ರೌಂಡರ್ ಸಿದ್ದೇಶ್ ವೀರ್ (44ರನ್ 27ಎಸೆತ) ಸ್ಪೋಟಕ ಆಟವಾಡಿ ಮುನ್ನೂರರ ಗಡಿ ಸಮೀಪಕ್ಕೆ ತಂಡದ ಮೊತ್ತವನ್ನು ತಂದು ನಿಲ್ಲಿಸುವಲ್ಲಿ ಯಶಸ್ವಿಯಾದರು.

ಬಳಿಕ ಟೀಮ್ ಇಂಡಿಯಾದ ಬೌಲರ್‌ಗಳು ಶ್ರೀಲಂಕಾವನ್ನು 45.2 ಓವರ್‌ಗಳಿಗೆ ಕೇವಲ 207 ರನ್‌ಗಳಿಗೆ ಆಲೌಟ್‌ ಮಾಡುವಲ್ಲಿ ಯಶಸ್ವಿಯಾದರು. ಈ ಮೂಲಕ ವಿಶ್ವಕೊ್ ಅಭಿಯಾನದಲ್ಲಿ ಟೀಮ್ ಇಂಡಿಯಾ ಕಿರಿಯರು ಸುಲಭವಾಗಿ ಗೆದ್ದುಕೊಂಡರು.

ಭಾರತ vs ಆಸ್ಟ್ರೇಲಿಯಾ: ಆಸ್ಟ್ರೇಲಿಯಾವನ್ನು ಮಣಿಸಿ ಸರಣಿ ಗೆದ್ದ ಟೀಮ್ ಇಂಡಿಯಾಭಾರತ vs ಆಸ್ಟ್ರೇಲಿಯಾ: ಆಸ್ಟ್ರೇಲಿಯಾವನ್ನು ಮಣಿಸಿ ಸರಣಿ ಗೆದ್ದ ಟೀಮ್ ಇಂಡಿಯಾ

ವೇಗಿ ಕಾರ್ತಿಕ್ ತ್ಯಾಗಿ ಅದ್ಭುತ ಬೌಲಿಂಗ್ ನಿನ್ನೆಯ ಪಂದ್ಯದಲ್ಲಿ ಅಭಿಮಾನಿಗಳ ಮನಸೂರೆಗೊಂಡಿತು. ಈಗಾಗಲೆ ಐಪಿಎಕ್ ಹರಾಜಿನಲ್ಲಿ ಕೋಟಿಗೆ ಸೇಲ್ ಆಗಿ ಗಮನ ಸೆಳೆದಿರುವ ಕಾರ್ತಿಕ್ ತ್ಯಾಗಿ 7.2 ಓವರ್‌ಗಳಲ್ಲಿ 27 ರನ್‌ಗೆ 1 ವಿಕೆಟ್ ಪಡೆದು ಮಿಂಚಿದರು. 140 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಕಗ್ಗಂಟಾದರು. ಲೆಗ್ ಸ್ಪಿನ್ನರ್ ರವಿ ಬಿಶ್ನೋಯ್ ಮತ್ತು ವೇಗಿ ಆಕಾಶ್ ಸಿಂಗ್ ತಲಾ ಎರಡು ವಿಕೆಟ್ ಕಿತ್ತು ಮಿಂಚಿದರು.

Story first published: Monday, January 20, 2020, 10:43 [IST]
Other articles published on Jan 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X