ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾಕಪ್‌ ಮುಗಿದ ನಂತರ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟ ಸಾಧ್ಯತೆ

ವಿಶ್ವಕಪ್ ಪಂದ್ಯಾವಳಿ ಹತ್ತಿರವಾಗುತ್ತಿದ್ದು, ತಂಡದ ಪ್ರಕಟಿಸುವ ಗಡುವು ಸಮೀಪಿಸುತ್ತಿದೆ. ಈಗಾಗಲೇ ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿಶ್ವಕಪ್‌ಗೆ ತಂಡಗಳನ್ನು ಪ್ರಕಟಿಸಿವೆ. ಆದರೆ ಟೀಂ ಇಂಡಿಯಾ ಮಾತ್ರ ಇನ್ನೂ ತಂಡವನ್ನು ಪ್ರಕಟಿಸಲು ಸಮಯ ತೆಗೆದುಕೊಳ್ಳುತ್ತಿದೆ.

ಟೀಂ ಇಂಡಿಯಾ ತಂಡ ಪ್ರಕಟಿಸಲು ಆಟಗಾರರ ಗಾಯದ ಸಮಸ್ಯೆ ದೊಡ್ಡ ಅಡ್ಡಿಯಾಗಿದೆ. ಮೂಲಗಳ ಪ್ರಕಾರ ಬಿಸಿಸಿಐ ಪ್ರಮುಖ ಆಟಗಾರರ ಫಿಟ್ನೆಸ್‌ ವರದಿಗಾಗಿ ಕಾಯುತ್ತಿದೆ. ಮುಖ್ಯವಾಗಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಅವರ ಫಿಟ್ನೆಸ್‌ ವರದಿಗಾಗಿ ಬಿಸಿಸಿಐ ಕಾಯುತ್ತಿದೆ ಎನ್ನಲಾಗಿದೆ.

Ind vs SL: ರೋಹಿತ್ ಶರ್ಮಾ ಭರ್ಜರಿ ಸಿಕ್ಸರ್‌ : ಸೆಕ್ಯುರಿಟಿಗೆ ಬಡಿದ ಚೆಂಡು, ವೀಡಿಯೋ ವೈರಲ್Ind vs SL: ರೋಹಿತ್ ಶರ್ಮಾ ಭರ್ಜರಿ ಸಿಕ್ಸರ್‌ : ಸೆಕ್ಯುರಿಟಿಗೆ ಬಡಿದ ಚೆಂಡು, ವೀಡಿಯೋ ವೈರಲ್

ವೇಗಿ ಜಸ್ಪ್ರೀತ್ ಬುಮ್ರಾ ಬೆನ್ನುನೋವಿನಿಂದ ಬಳಲುತ್ತಿದ್ದಾರೆ, ಹರ್ಷಲ್ ಪಟೇಲ್ ಗಾಯದಿಂದ ಮರಳಲು ಸಜ್ಜಾಗಿದ್ದಾರೆ. ಪ್ರಮುಖ ಆಲ್‌ರೌಂಡರ್ ರವೀಂದ್ರ ಜಡೇಜಾ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಅವರು ವಿಶ್ವಕಪ್ ಟೂರ್ನಿಯಲ್ಲಿ ಆಡುವುದು ಬಹುತೇಕ ಅನುಮಾನವಾಗಿದೆ.

ಎಲ್ಲವೂ ಅಂದುಕೊಂಡಂತೆ ಆದರೆ ಏಷ್ಯಾಕಪ್ 2022ರ ಫೈನಲ್ ಪಂದ್ಯದ ನಂತರ ಮುಂಬರುವ ವಿಶ್ವಕಪ್ ಪಂದ್ಯಾವಳಿಗಾಗಿ ತಂಡವನ್ನು ಬಿಸಿಸಿಐ ಹೆಸರಿಸುವ ಸಾಧ್ಯತೆ ಇದೆ. ಗಾಯದ ಸಮಸ್ಯೆ ಆಯ್ಕೆದಾರರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.

 ಬುಮ್ರಾ ಫಿಟ್‌ನೆಸ್‌ ವರದಿಗೆ ಕಾಯುತ್ತಿರುವ ಬಿಸಿಸಿಐ

ಬುಮ್ರಾ ಫಿಟ್‌ನೆಸ್‌ ವರದಿಗೆ ಕಾಯುತ್ತಿರುವ ಬಿಸಿಸಿಐ

ವಿಶ್ವಕಪ್ ಪಂದ್ಯಾವಳಿಗೆ ತಂಡವನ್ನು ಪ್ರಕಟಿಸಲು ಇನ್ನೂ ಸಮಯವಿದೆ, ಪ್ರಸ್ತುತ ಏಷ್ಯಾಕಪ್ ಟೂರ್ನಿ ನಡೆಯುತ್ತಿದೆ. ಆದ್ದರಿಂದ ಆತುರ ಪಡಲು ಸಾಧ್ಯವಿಲ್ಲ. ಜಸ್ಪ್ರಿತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಫಿಟ್‌ನೆಸ್ ಅಪ್‌ಡೇಟ್‌ ನಮಗೆ ಅಗತ್ಯವಿದೆ. ಹಾಗಾಗಿ ಎಲ್ಲವೂ ಮುಗಿದ ತಂಡವನ್ನು ಪ್ರಕಟಿಸಲು ತೀರ್ಮಾನಿಸಲಾಗಿದೆ. ಗಾಯದ ಮೌಲ್ಯಮಾಪನಕ್ಕಾಗಿ ಜಸ್ಪ್ರೀತ್ ಈ ವಾರ ಎನ್‌ಸಿಎಗೆ ಹಾಜರಾಗುವ ನಿರೀಕ್ಷೆಯಿದೆ. ಅದನ್ನು ನೋಡಿಕೊಂಡು ತೀರ್ಮಾನ ಮಾಡಲಾಗುವುದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಹರ್ಷಲ್ ಪಟೇಲ್ ಆಯ್ಕೆ

ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಹರ್ಷಲ್ ಪಟೇಲ್ ಆಯ್ಕೆ

ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಅವರ ಫಿಟ್ನೆಸ್ ಬಗ್ಗೆ ಆಯ್ಕೆಗಾರರು ಹೆಚ್ಚು ಚಿಂತೆ ಮಾಡುತ್ತಿದ್ದಾರೆ. ಬುಮ್ರಾ ಫಿಟ್‌ನೆಸ್ ಬಗ್ಗೆ ಇನ್ನೂ ಅನುಮಾನಗಳಿದ್ದರೂ ಹರ್ಷಲ್ ಪಟೇಲ್ ಬಹುತೇಕ ಗುಣಮುಖರಾಗಿದ್ದಾರೆ.

ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಹರ್ಷಲ್ ಪಟೇಲ್ ಆಯ್ಕೆಯಾಗುವ ಸಾಧ್ಯತೆ ಇದೆ. ಪಕ್ಕೆಲುಬಿನ ನೋವಿನಿಂದ ಬಳಲುತ್ತಿದ್ದ ಹರ್ಷಲ್ ಪಟೇಲ್, ಏಷ್ಯಾಕಪ್‌ನಿಂದ ಹೊರಗುಳಿದಿದ್ದರು. ಹರ್ಷಲ್ ಪಟೇಲ್ ಇನ್ನೂ ಎನ್‌ಸಿಎಯಲ್ಲಿದ್ದಾರೆ, ಮುಂದಿನ ವಾರ ಫಿಟ್‌ನೆಸ್‌ ಪರೀಕ್ಷೆಯಲ್ಲಿ ಭಾಗವಹಿಸಲಿದ್ದಾರೆ.

 ಟೀಂ ಇಂಡಿಯಾ ಆಯ್ಕೆ ತಡವಾಗುತ್ತಿರುವುದು ಯಾಕೆ?

ಟೀಂ ಇಂಡಿಯಾ ಆಯ್ಕೆ ತಡವಾಗುತ್ತಿರುವುದು ಯಾಕೆ?

ಟೀಂ ಇಂಡಿಯಾಗೆ ಶೇಕಡಾ 80 ರಿಂದ 90 ರಷ್ಟು ತಂಡದ ಆಟಗಾರರ ಆಯ್ಕೆ ನಿರ್ಧಾರವಾಗಿದೆ ಎಂದು ರೋಹಿತ್ ಶರ್ಮಾ ಈಗಾಗಲೇ ಸುಳಿವು ನೀಡಿದ್ದಾರೆ. ಒಂದು ವೇಳೆ ಜಸ್ಪ್ರೀತ್ ಬುಮ್ರಾ ಫಿಟ್‌ನೆಸ್ ಪರೀಕ್ಷೆಯಲ್ಲಿ ಪಾಸಾಗದಿದ್ದರೆ ಮೊಹಮ್ಮದ್ ಶಮಿ ಆಯ್ಕೆಯಾಗುವ ಸಾಧ್ಯತೆ ಇದೆ.

ಮೊಣಕಾಲಿನ ಗಾಯದಿಂದಾಗಿ ರವೀಂದ್ರ ಜಡೇಜಾ ಟಿ20 ವಿಶ್ವಕಪ್‌ಗೆ ಆಯ್ಕೆಯಾಗುವ ಸಾಧ್ಯತೆ ಬಹುತೇಕ ಕಡಿಮೆ ಇದೆ. ಮುಂದಿನ ವಾರ ಹರ್ಷಲ್ ಪಟೇಲ್ ಫಿಟ್‌ನೆಸ್ ಪರೀಕ್ಷೆಯಲ್ಲಿ ತಮ್ಮ ಆಯ್ಕೆಯನ್ನು ನಿರ್ಧರಿಸಲಿದ್ದಾರೆ. ಏಷ್ಯಾಕಪ್ ನಡೆಯುತ್ತಿರುವುದರಿಂದ ಪಂದ್ಯಾವಳಿ ಮುಗಿದ ನಂತರ ತಂಡವನ್ನು ಆಯ್ಕೆ ಮಾಡಲಾಗುತ್ತಿದೆ.

India vs Pakistan: ಗೆಲ್ಲೊ ಮ್ಯಾಚ್ ನ ಕಚ್ಚೆಲ್ಲಿದ ಭಾರತ! | Oneindia Kannada
 ಆಟಗಾರರ ಆಯ್ಕೆಗೆ ಮೊದಲು ಸಭೆ

ಆಟಗಾರರ ಆಯ್ಕೆಗೆ ಮೊದಲು ಸಭೆ

ಸೆಪ್ಟೆಂಬರ್ 11 ರಂದು ಏಷ್ಯಾ ಕಪ್ ಫೈನಲ್ ಪಂದ್ಯದ ನಂತರ ತಂಡವನ್ನು ಪ್ರಕಟಿಸುವ ನಿರೀಕ್ಷೆಯಿದೆ. ತಂಡವನ್ನು ಪ್ರಕಟಿಸುವ ಮೊದಲು ಮುಂಬೈನಲ್ಲಿ ಆಯ್ಕೆ ಸಭೆಗಾಗಿ ಆಯ್ಕೆಗಾರರು ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಚರ್ಚಿಸುವ ಸಾಧ್ಯತೆಯಿದೆ. ಅದೇ ಸಭೆಯಲ್ಲಿ, ಭಾರತವು ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಜೊತೆಗೆ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಸರಣಿಗಳಿಗೆ ತಂಡವನ್ನು ಆಯ್ಕೆ ಮಾಡುತ್ತದೆ.

ಎಲ್ಲಾ ಟಿ20 ವಿಶ್ವಕಪ್‌ ಆಡುವ ಆಟಗಾರರು ಏಕದಿನ ತಂಡದಿಂದ ವಿಶ್ರಾಂತಿ ಪಡೆಯುತ್ತಾರೆ ಎಂದು ನಿರೀಕ್ಷಿಸಲಾಗಿದೆ ಕೆ.ಎಲ್. ರಾಹುಲ್ ಗಾಯದಿಂದ ವಾಪಸ್ ಆಗಿದ್ದು ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ. ಅವರಿಗೆ ವಿಶ್ರಾಂತಿ ನೀಡಿದರೆ ಶಿಖರ್ ಧವನ್ ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ.

Story first published: Tuesday, September 6, 2022, 23:54 [IST]
Other articles published on Sep 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X