ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ದಕ್ಷಿಣ ಆಫ್ರಿಕಾ: ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ!

India thump South Africa by innings and 137 runs, script world record

ಪುಣೆ, ಅಕ್ಟೋಬರ್ 13: ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಭಾನುವಾರ (ಅಕ್ಟೋಬರ್ 13) ಮುಕ್ತಾಯಗೊಂಡ, ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇನ್ನಿಂಗ್ಸ್‌ ಸಹಿತ 137 ರನ್ ಗೆಲುವನ್ನಾಚರಿಸಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾಕ್ಕೆ ಇನ್ನಿಂಗ್ಸ್‌ ಸಹಿತ 137 ರನ್ ಜಯದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾಕ್ಕೆ ಇನ್ನಿಂಗ್ಸ್‌ ಸಹಿತ 137 ರನ್ ಜಯ

ಈ ಪಂದ್ಯದ ಗೆಲುವಿನೊಂದಿಗೆ ಭಾರತ 3 ಪಂದ್ಯಗಳ ಟೆಸ್ಟ್ ಸರಣಿಯನ್ನು 2-0ಯಿಂದ ಗೆದ್ದುಕೊಂಡಿದೆ. ಅಲ್ಲದೆ ಐಸಿಸಿ ಟೆಸ್ಟ್ ಚಾಂಪಿಯನ್‌ಷಿಪ್‌ ಅಂಕಪಟ್ಟಿಯಲ್ಲಿ 200 ಅಂಕಗಳೊಂದಿಗೆ ಕೊಹ್ಲಿ ಪಡೆ ಅಗ್ರ ಸ್ಥಾನದಲ್ಲಿ ಮುಂದುವರೆದಿದೆ.

ಸಾಲು ಸಾಲು ದಾಖಲೆ ಬರೆದು ಇತಿಹಾಸ ನಿರ್ಮಿಸಿದ ವಿರಾಟ್ ಕೊಹ್ಲಿ!ಸಾಲು ಸಾಲು ದಾಖಲೆ ಬರೆದು ಇತಿಹಾಸ ನಿರ್ಮಿಸಿದ ವಿರಾಟ್ ಕೊಹ್ಲಿ!

ಪ್ರೊಟಿಯಾಸ್ ವಿರುದ್ಧ ಟೆಸ್ಟ್ ಸರಣಿ ವಶ ಪಡಿಸಿಕೊಂಡಿರುವ ಭಾರತ, ಇದೇ ಪಂದ್ಯದಲ್ಲಿ ಅಪರೂಪದ ದಾಖಲೆಗೂ ಕಾರಣವಾಗಿದೆ. ದ್ವಿತೀಯ ಟೆಸ್ಟ್‌ನಲ್ಲಿ ಭಾರತ 601, ದಕ್ಷಿಣ ಆಫ್ರಿಕಾ 275+189 ರನ್ ಗಳಿಸಿತ್ತು.

ಸತತ 11 ಗೆಲುವಿನ ವಿಶ್ವ ದಾಖಲೆ

ಸತತ 11 ಗೆಲುವಿನ ವಿಶ್ವ ದಾಖಲೆ

ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿನ ಗೆಲುವಿನೊಂದಿಗೆ ಭಾರತ, ತವರು ನೆಲದಲ್ಲಿ ನಡೆದ ಸರಣಿಯಲ್ಲಿ ಸತತ 11 ಬಾರಿ ಜಯ ದಾಖಲಿಸಿ ವಿಶ್ವ ದಾಖಲೆ ನಿರ್ಮಿಸಿದೆ. ವಿಶ್ವದ ಯಾವುದೇ ತಂಡ ತವರಿನಲ್ಲಿ ಸತತ 11 ಟೆಸ್ಟ್‌ ಸರಣಿಗಳನ್ನು ಗೆದ್ದಿಲ್ಲ.

ಧೋನಿ-ಕೊಹ್ಲಿ ನಾಯಕತ್ವ

ಧೋನಿ-ಕೊಹ್ಲಿ ನಾಯಕತ್ವ

ಭಾರತದಲ್ಲಿ ನಡೆದ ಟೆಸ್ಟ್‌ ಸರಣಿಗಳಲ್ಲಿ ದೇಸಿ ತಂಡ ದಾಖಲಿಸಿದ 11 ಸರಣಿ ಜಯಗಳಲ್ಲಿ 9 ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಲಭಿಸಿದವು. ಇನ್ನುಳಿದ 2 ಸರಣಿ ಗೆಲುವುಗಳು ಮಾಜಿ ನಾಯಕ ಎಂಎಸ್ ಧೋನಿ ನಾಯಕರಾಗಿದ್ದಾಗ ದೊರೆತವು.

ದಾಖಲೆ ನಿರ್ಮಿಸಿದ್ದ ಭಾರತ-ಆಸ್ಟ್ರೇಲಿಯಾ

ದಾಖಲೆ ನಿರ್ಮಿಸಿದ್ದ ಭಾರತ-ಆಸ್ಟ್ರೇಲಿಯಾ

ಪುಣೆ ಪಂದ್ಯಕ್ಕೂ ಮುನ್ನ ತವರಿನಲ್ಲಿ ಸತತ 10 ಸರಣಿಗಳಲ್ಲಿ ಗೆಲುವು ಸಾಧಿಸಿದ ದಾಖಲೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಹೆಸರಿನಲ್ಲಿತ್ತು. ಆಸ್ಟ್ರೇಲಿಯಾವನ್ನು 1994ರ ನವೆಂಬರ್‌ನಿಂದ 2000ದ ನವೆಂಬರ್ ಅವಧಿಯಲ್ಲಿ ಮುನ್ನಡೆಸಿದ್ದ ಸ್ಟೀವ್ ವಾ ಮತ್ತು ಮಾರ್ಕ್ ಟೇಲರ್, ಜುಲೈ 2004ರಿಂದ ನವೆಂಬರ್ 2008ರ ಅವಧಿಯಲ್ಲಿ ಆಸೀಸ್ ಮುನ್ನಡೆಸಿದ್ದ ರಿಕಿ ಪಾಂಟಿಂಗ್‌ನಿಂದಾಗಿ ಆಸ್ಟ್ರೇಲಿಯಾ ತವರಿನಲ್ಲಿ ಸತತ 10 ಟೆಸ್ಟ್ ಸರಣಿಗಳಲ್ಲಿ ಗೆದ್ದ ದಾಖಲೆ ಹೊಂದಿತ್ತು.

ತೆಂಡೂಲ್ಕರ್ ಕೊನೇ ಟೆಸ್ಟ್ ಸರಣಿ

ತೆಂಡೂಲ್ಕರ್ ಕೊನೇ ಟೆಸ್ಟ್ ಸರಣಿ

ಭಾರತದಲ್ಲಿ ನಡೆದ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ ಕಡೇಯ ಸಾರಿ ಸೋತಿದ್ದು 2012-13ರ ಸೀಸನ್‌ನಲ್ಲಿ ಇಂಗ್ಲೆಂಡ್ ವಿರುದ್ಧ. ಭಾರತದ ಸರಣಿ ಜಯದ ಪಯಣ ಆರಂಭವಾಗಿದ್ದು ವೆಸ್ಟ್ ಇಂಡೀಸ್ ವಿರುದ್ಧ, 2013ರ ನವೆಂಬರ್‌ನಲ್ಲಿ ಮುಂಬೈನಲ್ಲಿ ನಡೆದಿದ್ದ ಸರಣಿಯಿಂದ. ಅದು ಸಚಿನ್ ಅವರಾಡಿದ ಕೊನೇ ಟೆಸ್ಟ್ ಸರಣಿಯಾಗಿತ್ತು. ಅಂದಿನ ಕೊನೇ ಟೆಸ್ಟ್‌ನಲ್ಲಿ ಸಚಿನ್ 74 ರನ್‌ ಬಾರಿಸಿದ್ದರು.

Story first published: Sunday, October 13, 2019, 17:33 [IST]
Other articles published on Oct 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X