ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ವಿರುದ್ಧ ಡೇ-ನೈಟ್ ಟೆಸ್ಟ್‌ ಪಂದ್ಯವನ್ನಾಡಲಿದೆ ಟೀಮ್ ಇಂಡಿಯಾ

 India To Play Day-Night Test In Australia

ಟೀಮ್ ಇಂಡಿಯಾ ಬಾಂಗ್ಲಾದೇಶದ ವಿರುದ್ಧ ತನ್ನ ಮೊದಲ ಡೇ-ನೈಟ್ ಟೆಸ್ಟ್‌ ಅನ್ನು ಆಡಿತ್ತು. ಕೊಲ್ಕತ್ತಾದಲ್ಲಿ ನಡೆದ ಈ ಐತಿಹಾಸಿಕ ಕ್ಷಣವನ್ನು ಕ್ರಿಕೆಟ್ ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ಅದಾದ ಬಳಿಕ ಟೀಮ್ ಇಂಡಿಯಾ ಇನ್ನು ಯಾವಾಗ ಡೇ-ನೈಟ್ ಪಂದ್ಯವನ್ನಾಡಲಿದೆ ಎಂಬ ಕುರಿತು ಸಾಕಷ್ಟು ಚರ್ಚೆಗಳು ನಡೆದಿತ್ತು.

ಇದೀಗ ಟೀಮ್ ಇಂಡಿಯಾ ಮತ್ತೊಂದು ಡೇ-ನೈಟ್ ಟೆಸ್ಟ್‌ ಪಂದ್ಯವನ್ನಾಡಲು ಸಿದ್ಧವಾಗಿದೆ. ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯೇ ಸ್ಪಷ್ಟಪಡಿಸಿದ್ದಾರೆ. ಆಸಿಸ್ ವಿರುದ್ಧ ಟೀಮ್ ಇಂಡಿಯಾ ಅಹರ್ನಿಶಿ ಪಂದ್ಯವನ್ನಾಡಲಿದೆ ಎಂದು ಮಾಹಿತಿ ನೀಡಿದ್ದಾರೆ.

ಪಿಂಕ್ ಟೆಸ್ಟ್‌ನ ಭವಿಷ್ಯದ ಯೋಜನೆ ಹಂಚಿಕೊಂಡ ದಾದಾಪಿಂಕ್ ಟೆಸ್ಟ್‌ನ ಭವಿಷ್ಯದ ಯೋಜನೆ ಹಂಚಿಕೊಂಡ ದಾದಾ

ಈ ವರ್ಷಾಂತ್ಯದಲ್ಲಿ ಅಸ್ಟ್ರೇಲಿಯಾ ವಿರುದ್ಧ ಸರಣಿಯನ್ನಾಡಲು ಆಸಿಸ್ ನೆಲಕ್ಕೆ ಭಾರತ ಪ್ರವಾಸ ತೆರಳಲಿದೆ. ಈ ಪ್ರವಾಸದಲ್ಲಿ ಟೀಮ್ ಇಂಡಿಯಾ ಒಂದು ಹಗಲು ರಾತ್ರಿ ಪಂದ್ಯದಲ್ಲಿ ಪಾಲ್ಗೊಳ್ಳಲಿದೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಅಧಿಕೃತ ಮಾಹಿತಿ ಸದ್ಯದಲ್ಲೇ ಹೊರಬೀಳಲಿದೆ ಎಂದು ಗಂಗೂಲಿ ಹೇಳಿದ್ದಾರೆ.

2020-21ನೇ ಸೀಸನ್‌ನಿಂದ ಟೀಮ್ ಇಂಡಿಯಾ ವೇಳಾಪಟ್ಟಿಯಲ್ಲಿ ಡೇ-ನೈಟ್ ಟೆಸ್ಟ್ ಅನ್ನು ಮುಂಬರುವ ಸರಣಿಗಳಲ್ಲಿ ಸಾಮಾನ್ಯದಂತೆಯೇ ಆಡಿಸಲಾಗುತ್ತದೆ ಎಂಬ ಮಾತನ್ನು ಕೂಡ ಗಂಗೂಲಿ ಹೇಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ ಆಡಲಿದೆ.

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ವಿರುದ್ಧ ಡೇ-ನೈಟ್ ಟೆಸ್ಟ್ ಪಂದ್ಯವನ್ನಾಡಲು ಸಿದ್ಧ ಎಂಬ ಮಾತನ್ನು ಹೇಳಿದ್ದರು. ಅದಾದ ಕೆಲವೇ ದಿನಗಳಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಮಹತ್ವದ ವಿಚಾರವನ್ನು ಮಾಧ್ಯವದ ಮುಂದೆ ಪ್ರಸ್ತಾಪಿಸಿದ್ದಾರೆ.

Story first published: Monday, February 17, 2020, 9:59 [IST]
Other articles published on Feb 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X