ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾದಲ್ಲಿ 2 ವಾರಗಳ ಕ್ವಾರಂಟೈನ್‌ಗೆ ಒಳಗಾಗಲಿದೆ ಟೀಮ್ ಇಂಡಿಯಾ

India to undergo two-week quarantine period in Australia

ಮೆಲ್ಬರ್ನ್, ಜುಲೈ 21: ಈ ವರ್ಷದಾಂತ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ಆಸ್ಟ್ರೇಲಿಯಾಕ್ಕೆ ಪ್ರವಾಸ ಹೊರಡಲಿದೆ. ಕ್ರಿಕೆಟ್ ಜಗತ್ತು ಅತೀ ಕುತೂಹಲದಿಂದ ಕಾಯುತ್ತಿರುವ ಪ್ರವಾಸ ಸರಣಿಯಿದು. ಈ ವೇಳೆ ಆಸ್ಟ್ರೇಲಿಯಾ ತಲುಪಿದ ಕೂಡಲೇ ಟೀಮ್ ಇಂಡಿಯಾ 2 ವಾರಗಳ ಕ್ವಾರಂಟೈನ್‌ಗೆ ಒಳಗಾಗಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಹಂಗಾಮಿ ಮುಖ್ಯಸ್ಥ ನಿಕ್ ಹಾಕ್ಲೆ ಹೇಳಿದ್ದಾರೆ.

ಪತ್ನಿ ರಿತಿಕಾಗೆ ಕಿರಿ ಕಿರಿ ನೀಡುವ ರೋಹಿತ್‌ ಶರ್ಮಾರ 2 ಅಭ್ಯಾಸಗಳಿವು!ಪತ್ನಿ ರಿತಿಕಾಗೆ ಕಿರಿ ಕಿರಿ ನೀಡುವ ರೋಹಿತ್‌ ಶರ್ಮಾರ 2 ಅಭ್ಯಾಸಗಳಿವು!

ಕ್ವಾರಂಟೈನ್ ಅವಧಿಯಲ್ಲಿರುವಾಗ ಆಟಗಾರರಿಗೆ ಮತ್ತು ಬೆಂಬಲ ಸಿಬ್ಬಂದಿಗೆ ಅತ್ಯುತ್ತಮ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು 2020ರ ಟಿ20 ವಿಶ್ವಕಪ್ ಮುಂದೂಡಿಕೆಯನ್ನು ಘೋಷಿಸುವಾಗ ನಿಕ್ ಹಾಕ್ಲೆ ಹೇಳಿದ್ದರು. ಇದೇ ಮಾತನ್ನು ಹಾಕ್ಲೆ ಪುನರುಚ್ಛರಿಸಿದ್ದಾರೆ.

2020ರ ಟಿ20 ವಿಶ್ವಕಪ್ ಮುಂದೂಡಿಕೆ: ಟಿಕೆಟ್ ಕೊಂಡವರ ಕತೆಯೇನು?!2020ರ ಟಿ20 ವಿಶ್ವಕಪ್ ಮುಂದೂಡಿಕೆ: ಟಿಕೆಟ್ ಕೊಂಡವರ ಕತೆಯೇನು?!

ಇಸ್‌ಪಿಎನ್ ಕ್ರಿಕ್‌ಇನ್ಫೋ ಜೊತೆ ಮಾತನಾಡಿದ ಹಾಕ್ಲೆ, 'ಇಲ್ಲಿಗೆ ಬರುವ ತಂಡಕ್ಕೆ ಎರಡು ವಾರಗಳ ಕ್ವಾರಂಟೈನ್ ಬೇಕಾದಷ್ಟು ಸಾಕು. ಕ್ವಾರಂಟೈನ್ ವೇಳೆ ಆಟಗಾರರು ಮತ್ತು ಬೆಂಬಲ ಸಿಬ್ಬಂದಿಗೆ ಅತ್ಯುತ್ತಮ ಸೌಲಭ್ಯಗಳು ದೊರೆಯಲಿದೆ ಎಂದು ನಾವು ಭರವಸೆ ನೀಡುತ್ತಿದ್ದೇವೆ,' ಎಂದಿದ್ದಾರೆ.

ಐಪಿಎಲ್ 2008: ಮೊದಲ ಆವೃತ್ತಿಯಲ್ಲಿ ನಾಯಕರಾಗಿದ್ದ ಎಲ್ಲಾ ಕ್ರಿಕೆಟಿಗರು ಈಗ ಎಲ್ಲಿದ್ದಾರೆ?ಐಪಿಎಲ್ 2008: ಮೊದಲ ಆವೃತ್ತಿಯಲ್ಲಿ ನಾಯಕರಾಗಿದ್ದ ಎಲ್ಲಾ ಕ್ರಿಕೆಟಿಗರು ಈಗ ಎಲ್ಲಿದ್ದಾರೆ?

ಆಸ್ಟ್ರೇಲಿಯಾಕ್ಕೆ ಭಾರತದ ಪ್ರವಾಸ ಸರಣಿಗಳು ಅಕ್ಟೋಬರ್ 11ರಿಂದ ಟಿ20 ಸರಣಿಯೊಂದಿಗೆ ಆರಂಭಗೊಳ್ಳಲಿದೆ. ಪ್ರವಾಸ ಸರಣಿಯು 3 ಟಿ20ಐ ಪಂದ್ಯಗಳು, 4 ಟೆಸ್ಟ್ ಪಂದ್ಯಗಳು ಮತ್ತು 3 ಏಕದಿನ ಪಂದ್ಯಗಳನ್ನು ಒಳಗೊಂಡಿರಲಿದೆ. ಕಳೆದ ಬಾರಿ ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿದ್ದ ಭಾರತ ಅಲ್ಲಿ ಚೊಚ್ಚಲ ಬಾರಿ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು.

Story first published: Wednesday, July 22, 2020, 9:32 [IST]
Other articles published on Jul 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X