ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್, ಏಕದಿನ , ಟಿ20: 3 ಫಾರ್ಮೆಟ್‌ನಲ್ಲಿ ಸ್ಥಾನ ಪಡೆದ ಟೀಮ್ ಇಂಡಿಯಾ ಆಟಗಾರರು

 India Tour Of Australia 2020-21: Players Who Are In ODI, T20I, Test Squads

ಟೀಮ್ ಇಂಡಿಯಾ ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಬಿಸಿಸಿಐ ಆಟಗಾರರನ್ನು ಆಯ್ಕೆ ಮಾಡಿದೆ. ಸುಮಾರು ಮೂರು ತಿಂಗಳವರೆಗೆ ವಿರಾಟ್ ಕೊಹ್ಲಿ ಪಡೆ ಕಾಂಗರೂ ನಾಡಿನಲ್ಲಿ ಬೀಡು ಬಿಡಲಿದೆ. ಹೀಗಾಗಿ ಸುದೀರ್ಘ ಸರಣಿಗಾಗಿ, ಆಟಗಾರರ ಆಯ್ಕೆ ಸಮಿತಿ ಅಧ್ಷಕ್ಷ ಸುನಿಶ್ ಜೋಶಿ ಬಹಳ ಲೆಕ್ಕಾಚಾರದಲ್ಲಿ ತಂಡವನ್ನು ಆಯ್ಕೆ ಮಾಡಿದ್ದಾರೆ.

ಯುಎಇಯಲ್ಲಿ ಐಪಿಎಲ್ 2020 ಯಶಸ್ವಿಯಾಗಿ ಪೂರ್ಣಗೊಂಡ ನಂತರ, ಟೀಮ್ ಇಂಡಿಯಾ ಮೂರು ಸ್ವರೂಪದ ಕ್ರಿಕೆಟ್ ಸರಣಿಗಾಗಿ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲು ಸಜ್ಜಾಗಿದೆ. ಕೊಹ್ಲಿ ಪಡೆ ನವೆಂಬರ್ 12ರಂದು ಸಿಡ್ನಿಗೆ ತೆರಳುವ ಸಾಧ್ಯತೆ ಇದೆ.

ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಮ್ ಇಂಡಿಯಾ ಆಯ್ಕೆ: ಟಿ20, ಏಕದಿನ, ಟೆಸ್ಟ್ ತಂಡದ ಸಂಪೂರ್ಣ ವಿವರಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಮ್ ಇಂಡಿಯಾ ಆಯ್ಕೆ: ಟಿ20, ಏಕದಿನ, ಟೆಸ್ಟ್ ತಂಡದ ಸಂಪೂರ್ಣ ವಿವರ

ಕೋವಿಡ್-19 ಪ್ರೇರಿತ ನಂತರ ಯಾವುದೇ ತಂಡವು ಬೇರೆ ರಾಷ್ಟ್ರಗಳಿಗೆ ತೆರಳಿದರೆ ಕ್ವಾರಂಟೈನ್‌ಗೆ ಒಳಗಾಗುತ್ತದೆ. ಹಾಗೆಯೇ ವಿರಾಟ್ ಕೊಹ್ಲಿ ನೇತೃತ್ವದ ತಂಡವು ಸಿಡ್ನಿಯಲ್ಲಿ 14 ದಿನಗಳ ಕ್ವಾರಂಟೈನ್‌ಗೆ ಒಳಗಾಗಲಿದೆ, ಅಲ್ಲಿ ಅವರಿಗೆ ಒಂದು ವಾರದ ನಂತರ ಅಭ್ಯಾಸ ಮಾಡಲು ಅವಕಾಶವಿರುತ್ತದೆ.

ಮೂರು ಫಾರ್ಮೆಟ್‌ನಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ ಕಾದಾಟ ನಡೆಸುವುದರಿಂದ ಆಯಾ ಫಾರ್ಮೆಟ್‌ಗೆ ತಕ್ಕಂತಹ ಅನುಭವಿ, ಚಾಣಾಕ್ಷ್ಯ ಆಟಗಾರರನ್ನು ಆಯ್ಕೆ ಸಮಿತಿಯು ಆಯ್ಕೆ ಮಾಡಿದೆ. ಇದರ ನಡುವೆ ಮೂರು ಫಾರ್ಮೆಟ್‌ನಲ್ಲಿ ನಾಯಕ ಕೊಹ್ಲಿ ಹೊರತುಪಡಿಸಿ ಬೇರೆ ಯಾವೆಲ್ಲ ಆಟಗಾರರು ಸ್ಥಾನ ಪಡೆದಿದ್ದಾರೆ ಎಂಬ ಮಾಹಿತಿ ಈ ಕೆಳಗಿದೆ

ಆಸ್ಟ್ರೇಲಿಯಾ ವಿರುದ್ಧ ಮೂರು ಸ್ವರೂಪದ ಕ್ರಿಕೆಟ್ ಸರಣಿಗೆ ಆಯ್ಕೆಯಾದ ಆಟಗಾರರು:

ವಿರಾಟ್ ಕೊಹ್ಲಿ

ಕೆ.ಎಲ್ ರಾಹುಲ್

ಜಸ್ಪ್ರೀತ್ ಬುಮ್ರಾ

ಮಯಾಂಕ್ ಅಗರ್ವಾಲ್

ಮೊಹಮ್ಮದ್ ಶಮಿ

ನವದೀಪ್ ಸೈನಿ

ರವೀಂದ್ರ ಜಡೇಜಾ

Story first published: Tuesday, October 27, 2020, 9:42 [IST]
Other articles published on Oct 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X