ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ 2020: ಟೀಮ್ ಇಂಡಿಯಾಕ್ಕೆ ದೊಡ್ಡ ಆಘಾತ!

India tour of Australia: Rohit Sharma, Ishant Sharma set to miss Australia Test series

ಬೆಂಗಳೂರು: ಭಾರತ vs ಆಸ್ಟ್ರೇಲಿಯಾ ಸರಣಿ ಆರಂಭಕ್ಕೆ ಇನ್ನು ಕೆಲವೇ ದಿನಗಳ ಬಾಕಿಯಿರುವಾಗಲೇ ಟೀಮ್ ಇಂಡಿಯಾಕ್ಕೆ ಆಘಾತಕಾರಿ ಸಂಗತಿಯೊಂದು ಕೇಳಿಬಂದಿದೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಭಾರತದ ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ಇಶಾಂತ್ ಶರ್ಮಾ ಮಿಸ್ ಮಾಡಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಡಿಸೆಂಬರ್‌ನಿಂದ ಜನವರಿವರೆಗೆ ನಡೆಯಲಿರುವ ಬಹು ನಿರೀಕ್ಷಿತ ಟೆಸ್ಟ್ ಸರಣಿಯಲ್ಲಿ ರೋಹಿತ್, ಇಶಾಂತ್ ಪಾಲ್ಗೊಳ್ಳೋ ಸಾಧ್ಯತೆ ಕಡಿಮೆಯಿದೆ ಎಂದು ವರದಿಯೊಂದು ಹೇಳಿದೆ.

ಆಸ್ಟ್ರೇಲಿಯಾದಲ್ಲಿ ಭಾರತ: ಕೆಎಲ್ ರಾಹುಲ್ ತಂಡ ಸೋಲಿಸಿದ ಕೊಹ್ಲಿ ಪಡೆಆಸ್ಟ್ರೇಲಿಯಾದಲ್ಲಿ ಭಾರತ: ಕೆಎಲ್ ರಾಹುಲ್ ತಂಡ ಸೋಲಿಸಿದ ಕೊಹ್ಲಿ ಪಡೆ

13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ ವೇಳೆ ಗಾಯಕ್ಕೀಡಾಗಿದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ನ ಇಶಾಂತ್ ಶರ್ಮಾ ಐಪಿಎಲ್ ಬಳಿಕ ಆಸ್ಟ್ರೇಲಿಯಾಕ್ಕೆ ತೆರಳದೆ ಭಾರತಕ್ಕೆ ವಾಪಸ್ಸಾಗಿದ್ದರು.

ಭಾರತದ ವಿರುದ್ಧ ಸರಣಿಗೂ ಮುನ್ನ ಪ್ರತಿಜ್ಞೆ ಮಾಡಿದ ಡೇವಿಡ್ ವಾರ್ನರ್ಭಾರತದ ವಿರುದ್ಧ ಸರಣಿಗೂ ಮುನ್ನ ಪ್ರತಿಜ್ಞೆ ಮಾಡಿದ ಡೇವಿಡ್ ವಾರ್ನರ್

ಸದ್ಯ ರೋಹಿತ್ ಮತ್ತು ಇಶಾಂತ್ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ)ಯಲ್ಲಿ ಅಭ್ಯಾಸ ನಡೆಸುತ್ತ ಚೇತರಿಸಿಕೊಳ್ಳುತ್ತಿದ್ದಾರೆ.

ಆಸ್ಟ್ರೇಲಿಯಾಕ್ಕೆ ಹೊರಡಬೇಕಿತ್ತು

ಆಸ್ಟ್ರೇಲಿಯಾಕ್ಕೆ ಹೊರಡಬೇಕಿತ್ತು

ನವೆಂಬರ್ 27ಕ್ಕೆ ಆರಂಭವಾಗಲಿರುವ ಭಾರತ-ಆಸ್ಟ್ರೇಲಿಯಾ ಸರಣಿಗೂ ಮುನ್ನ 14 ದಿನಗಳ ಕಡ್ಡಾಯ ಕ್ವಾರಂಟೈನ್ ಪಾಲಿಸಬೇಕಾಗಿರುವುದರಿಂದ ಇಷ್ಟರಲ್ಲಾಗಲೇ ಇಶಾಂತ್, ರೋಹಿತ್ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಬೇಕಾಗಿತ್ತು. ಆದರೆ ಇಬ್ಬರೂ ಇನ್ನೂ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಿಲ್ಲ. ಜೊತೆಗೆ ಇಶಾಂತ್, ರೋಹಿತ್ ಇಬ್ಬರೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಫಿಟ್‌ನಲ್ಲಿ ಇಲ್ಲ ಎಂದೂ ಹೇಳಲಾಗುತ್ತಿದೆ.

ಫಿಟ್‌ನೆಸ್ ತೃಪ್ತಿ ನೀಡಿಲ್ಲ

ಫಿಟ್‌ನೆಸ್ ತೃಪ್ತಿ ನೀಡಿಲ್ಲ

ಎನ್‌ಸಿಎ ಅಧಿಕಾರಿಗಳು ಇತ್ತೀಚೆಗೆ ಸಭೆ ನಡೆಸಿ ರೋಹಿತ್, ಇಶಾಂತ್ ಚೇತರಿಕೆ ಸ್ಥಿತಿಯ ಬಗ್ಗೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಧಿಕಾರಿಗಳಿಗೆ ಮನವರಿಕೆ ಮಾಡಿದ್ದಾರೆ. ರೋಹಿತ್, ಇಶಾಂತ್ ಫಿಟ್ನೆಸ್ ಎನ್‌ಸಿಎ ಅಧಿಕಾರಿಗೆ ತೃಪ್ತಿ ನೀಡಿಲ್ಲ ಎಂದು ತಿಳಿದು ಬಂದಿದೆ. ಯಾವುದಕ್ಕೂ ಬಿಸಿಸಿಐ ಅಂತಿಮ ನಿರ್ಧಾರ ಇನ್ನೂ ಪ್ರಕಟಿಸಿಲ್ಲ.

ಸಂಗತಿ ಕಠಿಣವಾಗುತ್ತದೆ

ಸಂಗತಿ ಕಠಿಣವಾಗುತ್ತದೆ

'ರೋಹಿತ್ ವೈಟ್‌ಬಾಲ್‌ನಲ್ಲಿ ಆಡುತ್ತಿಲ್ಲ. ನೀವು ಟೆಸ್ಟ್ ಸರಣಿ ಆಡಬೇಕಾದರೆ ಮುಂದಿನ 3-4 ದಿನಗಳಲ್ಲಿ ನೀವು ಆಸ್ಟ್ರೇಲಿಯಾದ ವಿಮಾನ ಹತ್ತಬೇಕಾಗುತ್ತದೆ. ಇಲ್ಲದಿದ್ದರೆ ಸಂಗತಿ ಕಠಿಣವಾಗಲಿದೆ,' ಎಂದು ಎಬಿಸಿ ಸ್ಪೋರ್ಟ್ಸ್ ಜೊತೆ ಮಾತನಾಡಿದ ಶಾಸ್ತ್ರಿ ಇತ್ತೀಚೆಗೆ ಹೇಳಿದ್ದರು. ಅಂದ್ಹಾಗೆ ಟೆಸ್ಟ್ ಸರಣಿ ಡಿಸೆಂಬರ್ 17ರಿಂದ ಜನವರಿ 19ರ ವರೆಗೆ ಅಡಿಲೇಡ್, ಮೆಲ್ಬರ್ನ್, ಸಿಡ್ನಿ ಮತ್ತು ಬ್ರಿಸ್ಬೇನ್‌ನಲ್ಲಿ ನಡೆಯಲಿದೆ.

ಗಾಯಕ್ಕೀಡಾಗಿದ್ದ ರೋಹಿತ್, ಇಶಾಂತ್

ಗಾಯಕ್ಕೀಡಾಗಿದ್ದ ರೋಹಿತ್, ಇಶಾಂತ್

ಐಪಿಎಲ್ ವೇಳೆ ಸ್ನಾಯುಸೆಳೆತಕ್ಕೆ (ಹ್ಯಾಮ್‌ಸ್ಟ್ರಿಂಗ್‌) ತುತ್ತಾಗಿದ್ದ ರೋಹಿತ್ ಶರ್ಮಾ ಮತ್ತು ಸೈಡ್ ಸ್ಟ್ರೇನ್‌ಗೆ (ಹೊಟ್ಟೆ ಭಾಗದ ಬದಿಯ ಸ್ನಾಯುಗಳು ಅಥವಾ ಜಾಯಿಂಟ್ ಬೇನೆ) ಒಳಗಾಗಿರು ಇಶಾಂತ್ ಶರ್ಮಾ ಇಬ್ಬರೂ ಇಂಡಿಯನ್ ಪ್ರೀಮಿಯರ್ ಲೀಗ್‌ ಬಳಿಕ ಭಾರತಕ್ಕೆ ವಾಪಸ್ಸಾಗಿದ್ದರು.

Story first published: Tuesday, November 24, 2020, 11:17 [IST]
Other articles published on Nov 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X