ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್: ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಗೆದ್ದ ಕಿರಿಯರ ತಂಡ

India under 19 team won the odi series against srilanka

ಮೊರಟುವಾ, ಆಗಸ್ಟ್ 10: ಶ್ರೀಲಂಕಾದಲ್ಲಿ ನಡೆದ ಐದು ಪಂದ್ಯಗಳ ಏಕದಿನ ಸರಣಿಯನ್ನು ಭಾರತ ಕಿರಿಯರ ತಂಡ ಕೈವಶ ಮಾಡಿಕೊಂಡಿದೆ.

ಎರಡು ಟೆಸ್ಟ್‌ಗಳ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದ್ದ ಭಾರತದ ಅಂಡರ್ 19 ತಂಡದ ಪಡೆ, ಏಕದಿನ ಸರಣಿಯಲ್ಲಿಯೂ ಪಾರಮ್ಯ ಮೆರೆದು 3-2 ಅಂತರದಿಂದ ಜಯಿಸಿತು.

ಹನುಮ ವಿಹಾರಿ ಶತಕದ ಸೊಬಗು: ಉತ್ತಮ ಮೊತ್ತದತ್ತ ಭಾರತ ಎಹನುಮ ವಿಹಾರಿ ಶತಕದ ಸೊಬಗು: ಉತ್ತಮ ಮೊತ್ತದತ್ತ ಭಾರತ ಎ

ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದ ಕಿರಿಯರ ತಂಡ, ಉಳಿದ ಮೂರೂ ಪಂದ್ಯಗಳಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ಆರಂಭಿಕ ಆಘಾತ ಅನುಭವಿಸಿತು. ತಂಡಕ್ಕೆ ನಿಶಾನ್ ಮಧುಷ್ಕಾ ಮತ್ತು ನುವನಿದು ಫೆರ್ನಾಂಡೊ ಆಸರೆಯಾದರು. ಈ ಇಬ್ಬರನ್ನು ಹೊರತುಪಡಿಸಿ ಉಳಿದ ಬ್ಯಾಟ್ಸ್‌ಮನ್‌ಗಳಿಂದ ಗಮನಾರ್ಹ ಪ್ರದರ್ಶನ ಕಂಡುಬರಲಿಲ್ಲ.

213 ರನ್‌ಗಳ ಸುಲಭ ಗುರಿ ಬೆನ್ನತ್ತಿದ ಭಾರತ, 42.4 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.

ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅಜೇಯ ಶತಕ ಬಾರಿಸಿ, ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಬಿಸಿಸಿಐ ಸಂವಿಧಾನ: ಸುಪ್ರೀಂಕೋರ್ಟ್ ನಿರ್ಧಾರಕ್ಕೆ ನ್ಯಾ. ಲೋಧಾ ಅತೃಪ್ತಿಬಿಸಿಸಿಐ ಸಂವಿಧಾನ: ಸುಪ್ರೀಂಕೋರ್ಟ್ ನಿರ್ಧಾರಕ್ಕೆ ನ್ಯಾ. ಲೋಧಾ ಅತೃಪ್ತಿ

ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ ಅಂಡರ್ 19: 212/9 (50) ನಿಶಾನ್ ಮಧುಷ್ಕಾ 95, ನುವನಿದು ಫೆರ್ನಾಂಡೊ 56, ಪಸಿಂದು ಸೂರಿಯಬಂಡಾರ 20, ಮೋಹಿತ್ ಜಂಗ್ರಾ 30/2, ಸಮೀರ್ ಚೌಧರಿ 20/1, ಅಜಯ್ ದೇವ್ ಗೌಡ್ 29/1

ಭಾರತ ಅಂಡರ್ 19: 214/2 (42.2) ಯಶಸ್ವಿ ಜೈಸ್ವಾಲ್ 114*, ದೇವದತ್ ಪಡಿಕ್ಕಲ್ 38, ಪವನ್ ಶಾ 36, ಲಕ್ಷಿತ ಮನಸಿಂಘೆ 37/1, ಅವಿಷ್ಕಾ ಲಕ್ಷನ್ 38/1.

ಫಲಿತಾಂಶ: ಭಾರತಕ್ಕೆ ಎಂಟು ವಿಕೆಟ್‌ಗಳ ಜಯ ಮತ್ತು 3-2ರಿಂದ ಏಕದಿನ ಸರಣಿ

Story first published: Saturday, August 11, 2018, 10:37 [IST]
Other articles published on Aug 11, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X