ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಸಾರಥ್ಯದ ಟೀಮ್‌ ಇಂಡಿಯಾ ಬಗ್ಗೆ ಬಿಷಪ್‌ ಅಭಿಪ್ರಾಯವಿದು

Ian Bishop

ಹೊಸದಿಲ್ಲಿ, ಜುಲೈ 31: ಏಕದಿನ ಕ್ರಿಕೆಟ್‌ನ ನಂ.1 ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ ಸಾರಥ್ಯದ ಟೀಮ್‌ ಇಂಡಿಯಾ ಎದುರು ಎರಡು ಪಂದ್ಯಗಳ ಟೆಸ್ಟ್‌ ಸರಣಿ ಗೆಲ್ಲುವುದು ವೆಸ್ಟ್‌ ಇಂಡೀಸ್‌ ಬಹಳಾ ಕಠಿಣ ಎಂದು ವಿಂಡೀಸ್‌ನ ಮಾಜಿ ದೈತ್ಯ ವೇಗದ ಬೌಲರ್‌ ಇಯಾನ್‌ ಬಿಶಪ್‌ ಹೇಳಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಭಾರತ ತಂಡ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿದ್ದು, ತವರು ನೆಲದಲ್ಲಿ ಸೋಲಿಲ್ಲದ ಸರದಾರನಂತೆ ಮೆರೆಯುತ್ತಿದೆ. ಈ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ನಂ.1 ಸ್ಥಾನದಲ್ಲಿದ್ದು, ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿ ತನ್ನ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ ಅಭಿಯಾನ ಆರಂಭಿಸಲು ಸಜ್ಜಾಗುತ್ತಿದೆ.

ಲಸಿತ್‌ ಮಾಲಿಂಗ ಸ್ಥಾನ ತುಂಬಲು ಬಂದ ಛೋಟಾ ಮಾಲಿಂಗ! ವಿಡಿಯೊಲಸಿತ್‌ ಮಾಲಿಂಗ ಸ್ಥಾನ ತುಂಬಲು ಬಂದ ಛೋಟಾ ಮಾಲಿಂಗ! ವಿಡಿಯೊ

ಇನ್ನು ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕಾಂಗರೂ ಪಡೆಯನ್ನುಸೆದೆಬಡಿದು ಆಸೀಸ್‌ ನೆಲದಲ್ಲಿ ಚೊಚ್ಚಲ ಟೆಸ್ಟ್‌ ಸರಣಿ ಜಯ ದಾಖಲಿಸಿದ ಭಾರತ ತಂಡ, ಬಳಿಕ ಇಂಗ್ಲೆಂಡ್‌ ಪ್ರವಾಸ ಕೈಗೊಂಡು 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಕೆಚ್ಚೆದೆಯ ಹೋರಾಟ ನಡೆಸಿ 1-4 ಅಂತರದ ಸೋಲನುಭವಿಸಿತು.

"ಭಾರತ ತನ್ನ ತವರು ನೆಲದಲ್ಲಿನ ಸ್ಥಿತಿಗತಿಗಳನ್ನು ಚೆನ್ನಾಗಿ ಅರಿತಿದೆ. ಇದರ ಜೊತೆ ವಿದೇಶಿ ನೆಲದಲ್ಲೂ ಇತ್ತೀಚೆಗೆ ಉತ್ತಮ ಪ್ರದರ್ಶನ ನೀಡಲು ಆರಂಭಿಸಿದೆ. ಇಂಗ್ಲೆಂಡ್‌ ಪ್ರವಾಸದಲ್ಲೂ ಭಾರತ ಉತ್ತಮ ಹೋರಾಟ ಪ್ರದರ್ಶಿಸಿತ್ತು. ಇದಕ್ಕೂ ಮುನ್ನ ಆಸ್ಟ್ರೇಲಿಯಾ ನೆಲದಲ್ಲಿ ಆಸೀಸ್‌ ತಂಡವನ್ನು ಮಣಿಸಿ ಸರಣಿ ಜಯ ದಾಖಲಿಸಿತ್ತು. ಆಸ್ಟ್ರೇಲಿಯಾ ತಂಡದಲ್ಲಿ ಇಬ್ಬರು ಪ್ರಮುಖ ಆಟಗಾರರು ಇಲ್ಲವಾಗಿದ್ದರೂ ಕೂಡ, ಪ್ರವಾಸಿ ಭಾರತ ತಂಡ ಬಲಿಷ್ಠವಾಗಿತ್ತು," ಎಂದು ಇಯಾನ್‌ ಬಿಷಪ್‌ ಟೀಮ್‌ ಇಂಡಿಯಾದ ಸಾಧನೆಯನ್ನು ಗುಣಗಾನ ಮಾಡಿದೆ.

<span class=ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌: ಟೀಮ್‌ ಇಂಡಿಯಾದ ವೇಳಾಪಟ್ಟಿ" title="ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌: ಟೀಮ್‌ ಇಂಡಿಯಾದ ವೇಳಾಪಟ್ಟಿ" />ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌: ಟೀಮ್‌ ಇಂಡಿಯಾದ ವೇಳಾಪಟ್ಟಿ

ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ತಂಡಕ್ಕೆ ಸವಾಲೊಡ್ಡಬೇಕಾದರೆ ವೆಸ್ಟ್‌ ಇಂಡೀಸ್‌ ತಂಡದ ಬ್ಯಾಟ್ಸ್‌ಮನ್‌ಗಳು ಜಸ್‌ಪ್ರೀತ್‌ ಬುಮ್ರಾ ಅವರಂತಹ ಬಲಿಷ್ಠ ಬೌಲರ್‌ಗಳ ಎದುರು ದೊಡ್ಡ ಶತಕಗಳನ್ನು ದಾಖಲಿಸಬೇಕು ಎಂದು ಬಿಷಪ್‌ ಸಲಹೆ ನೀಡಿದ್ದಾರೆ. ಅಲ್ಲದೆ ವೆಸ್ಟ್‌ ಇಂಡೀಸ್‌ ತಂಡ ತನ್ನ ರನ್ ಗಳಿಕೆಗಾಗಿ ರಾಸ್ಟನ್‌ ಚೇಸ್‌ ಮತ್ತು ಶೇಯ್‌ ಹೋಪ್‌ ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದು ಹೇಳಿದ್ದಾರೆ.

ವೆಸ್ಟ್‌ ಇಂಡೀಸ್‌ ಪರ 29 ಟೆಸ್ಟ್‌ಗಳನ್ನು ಆಡಿರುವ ಶೇಯ್‌ ಹೋಪ್‌ 2 ಶತಕ ಮತ್ತು 5 ಅರ್ಧಶತಗಳನ್ನು ಒಳಗೊಂಡ 1459 ರನ್‌ ದಾಖಲಿಸಿ ಗಳಿಸಿದ್ದರೆ, ಮತ್ತೊಂದೆಡೆ ಅಷ್ಟ್ಏ ಪಂದ್ಯಗಳನ್ನಾಡಿ 5 ಶತಕ ಮತ್ತು 7 ಅರ್ಧಶತಕಗಳನ್ನು ದಾಖಲಿಸಿರುವ ರಾಸ್ಟನ್‌ ಚೇಸ್‌ ಒಟ್ಟು 1621 ರನ್‌ಗಳನ್ನು ಗಳಿಸಿದ್ದಾರೆ.

ಐಪಿಎಲ್‌ 2020: ಮುಂಬೈ ಇಂಡಿಯನ್ಸ್‌ಗೆ ತೆಕ್ಕೆಗೆ ವಿಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ಐಪಿಎಲ್‌ 2020: ಮುಂಬೈ ಇಂಡಿಯನ್ಸ್‌ಗೆ ತೆಕ್ಕೆಗೆ ವಿಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌

"ವೆಸ್ಟ್‌ ಇಂಡೀಸ್‌ ತಂಡ ತನ್ನ ಬ್ಯಾಟಿಂಗ್‌ ಬೆನ್ನೆಲುಬಾದ ರಾಸ್ಟನ್‌ ಚೇಸ್‌ ಮತ್ತು ಶೇಯ್‌ ಹೋಪ್‌ ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ. ವಿಂಡೀಸ್‌ನ ಪಿಚ್‌ಗಳು ಇದೀಗ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ಈ ಪಿಚ್‌ಗಳಲ್ಲಿ ಕಳೆದ ಎರಡು ವರ್ಷಗಳಿಂದ ಆಡಿರುವ ನಮ್ಮ ತಂಡ ದೊಡ್ಡ ಶತಕಗಳನ್ನು ಗಳಿಸುವ ಕಡೆಗೆ ಪ್ರಯತ್ನಿಸಬೇಕು," ಎಂದು ಬಿಷಪ್‌ ಹೇಳಿದ್ದಾರೆ.

ಆಗಸ್ಟ್‌ ಮೂರರಂದು ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿ ಮೊದಲ ಟಿ20 ಪಂದ್ಯವನ್ನಾಡಲಿರುವ ಟೀಮ್‌ ಇಂಡಿಯಾ, ಆಗಸ್ಟ್‌ 22ರಂದು ನಡೆಯಲಿರುವ ಮೊದಲ ಟೆಸ್ಟ್‌ ಪಂದ್ಯದ ಮೂಲಕ ತನ್ನ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಅಭಿಯಾನವನ್ನೂ ಆರಂಭಿಸಲಿದೆ.

Story first published: Wednesday, July 31, 2019, 20:36 [IST]
Other articles published on Jul 31, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X