ಅಂತಿಮ ಪಂದ್ಯವನ್ನು ಗೆದ್ದು ಭಾರತ ಕ್ಲೀನ್‌ಸ್ವೀಪ್ ತಪ್ಪಿಸಲಿದೆ: ಶ್ರೇಯಸ್ ಐಯ್ಯರ್

ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳನ್ನು ಸೋತಿರುವ ಭಾರತ ಅಂತಿಮ ಪಂದ್ಯವನ್ನಾದರೂ ಗೆದ್ದು ಕ್ಲೀನ್ ಸ್ವೀಪ್ ಮುಖಭಂಗವನ್ನು ತಪ್ಪಿಸಿಕೊಳ್ಳಲಿ ಎಂಬುದು ಅಭಿಮಾನಿಗಳ ಆಶಯ.ಇದಕ್ಕೆ ಪೂರಕವಾಗಿ ಟೀಮ್ ಇಂಡಿಯಾದ ಯುವ ಆಟಗಾರ ಶ್ರೇಯಸ್ ಐಯ್ಯರ್ ಹೇಳಿಕೆಯನ್ನು ನೀಡಿದ್ದಾರೆ.

ಟೀಮ್ ಇಂಡಿಯಾ ಅಂತಿಮ ಪಂದ್ಯವನ್ನು ಗೆದ್ದೇ ಗೆಲ್ಲುವ ನಿರ್ಧಾರವನ್ನು ಮಾಡಿದೆ. ಈ ಮೂಲಕ ಕ್ಲೀನ್‌ಸ್ವೀಪ್ ಮುಖಬಂಗದಿಂದ ತಪ್ಪಿಸಿಕೊಳ್ಳಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಭಾರತ ತಂಡ ಅನುಸರಿಸಿದ ಕೆಲ ಕ್ರಮಗಳು ಫಲನೀಡುತ್ತಿಲ್ಲ ಎಂಬುದನ್ನು ತಂಡ ಅರಿತುಕೊಂಡಿದೆ ಎಂದು ಈ ಸಂದರ್ಭದಲ್ಲಿ ಅವರು ಹೇಳಿದ್ದಾರೆ.

ರೋಹಿತ್ ಶರ್ಮಾರನ್ನು ಭಾರತ ಮಿಸ್ ಮಾಡಿಕೊಳ್ಳುತ್ತಿದೆ: ದೊಡ್ಡ ಗಣೇಶ್

ಕಳೆದ ಎರಡು ಪಂದ್ಯಗಳಲ್ಲಿ ಅನುಭವಿಸಿದ ಸೋಲನ್ನು ನಾವು ಸಕಾರಾತ್ಮಕವಾಗಿಯೇ ನೋಡುತ್ತೇವೆ. ನಾವು ಬ್ಯಾಟಿಂಗ್ ವಿಚಾರದಲ್ಲಿ ಅತ್ಯುತ್ತಮವಾಗಿಯೇ ಆಡಿದ್ದೇವೆ. ಖಂಡಿತಾ ಬೌಲರ್‌ಗಳು ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿಲ್ಲ. ಆದರೆ ಖಂಡಿತಾವಾಗಿಯೂ ಬೌಲರ್‌ಗಳು ತಮ್ಮ ಕರ್ತವ್ಯ ಪ್ರಜ್ಞೆಯನ್ನು ಮರೆತಿಲ್ಲ. ಅವರು ಕೂಡ ಸಕಾರಾತ್ಮಕವಾಗಿಯೇ ಇದ್ದಾರೆ ಎಂದು ಐಯ್ಯರ್ ಹೇಳಿದ್ದಾರೆ.

"ಐಪಿಎಲ್‌ನಲ್ಲಿ 14 ಪಂದ್ಯಗಳನ್ನಾಡಿದ ಒತ್ತಡ ಬಳಿಕ ಕ್ವಾರಂಟೈನ್‌ನಲ್ಲಿ ಉಳಿದುಕೊಂಡ ವಿಚಾರ ಇದು ಖಂಡಿತವಾಗಿಯೂ ನಿಮ್ಮ ಮೇಲೆ ಪರಿಣಾಮವನ್ನು ಬೀರುತ್ತದೆ. ಇದು ತಂಡದ ಪ್ರತಿಯೊಬ್ಬ ಆಟಗಾರನ ಮೇಲೆಯೂ ಪರಿಣಾಮ ಬೀರುತ್ತದೆ. ಇದು ಕೇವಲ ಬೌಲರ್‌ಗಳಿಗೆ ಮಾತ್ರವೇ ಅನ್ವಯಿಸುವುದಿಲ್ಲ ಎಂದು ಶ್ರೇಯಸ್ ಐಯ್ಯರ್ ಹೇಳಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, December 1, 2020, 17:24 [IST]
Other articles published on Dec 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X