ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ-ಅಫ್ಘಾನಿಸ್ತಾನ ಕ್ರಿಕೆಟ್ ಟೆಸ್ಟ್: ಧವನ್ ಅಬ್ಬರ ಬಳಿಕ ಈಗ ಮಳೆ ಆಟ!

IND vs AFG test : ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ | Oneindia Kannada
india vs afghanistan test cricket match report

ಬೆಂಗಳೂರು, ಜೂನ್ 14:ಆರಂಭಿಕ ಆಟಗಾರ ಶಿಖರ್ ಧವನ್ ಅವರು ಚಿನ್ನಸ್ವಾಮಿ ಅಂಗಳದಲ್ಲಿ ಬ್ಯಾಟ್‌ ಬೀಸಿದ ಪರಿಗೆ ಮೋಡ ಆವರಿಸಿದ ಥಂಡಿ ವಾತಾವರಣದಲ್ಲಿಯೂ ಆಫ್ಘನ್ ಆಟಗಾರರು ಬೆವರಿಳಿಸಿದರು.

ಆದರೆ, ವರುಣನ ಕಾಟ ಆರಂಭವಾಗಿದ್ದು, ಆಟವನ್ನು ಸ್ಥಗಿತಗೊಳಿಸಲಾಗಿದೆ. ಭೋಜನ ವಿರಾಮದ ಕೆಲ ಸಮಯದ ಬಳಿಕ ಮಳೆಯಿಂದ ಆಟ ರದ್ದುಗೊಂಡಿತ್ತು.

ಮಳೆ ವಿರಾಮ ನೀಡಿದ ಬಳಿಕ ಅಂಗಳದಲ್ಲಿದ್ದ ನೀರನ್ನು ಹೊರಹಾಕಿ ಮತ್ತೆ ಆಟ ಆರಂಭಿಸಲಾಯಿತಾದರೂ, ಮೂರು ಓವರ್‌ ಆಡುವಷ್ಟರಲ್ಲಿ ಮತ್ತೆ ಮಳೆ ಶುರುವಾಯಿತು.

ಈ ವೇಳೆ ಭಾರತ 48.4 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 264 ರನ್ ಗಳಿಸಿತ್ತು. ಆರಂಭಿಕ ಆಟಗಾರ ಮುರಳಿ ವಿಜಯ್ 99 ಮತ್ತು ಮೂರನೇ ಕ್ರಮಾಂಕದಲ್ಲಿ ಆಡುತ್ತಿರುವ ಲೋಕೇಶ್ ರಾಹುಲ್ 44 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.

ಭಾರತ vs ಆಫ್ಘಾನಿಸ್ತಾನ ಸ್ಕೋರ್ ಕಾರ್ಡ್

ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನಾಯಕ ಅಜಿಂಕ್ಯ ರಹಾನೆ ಅವರ ನಿರ್ಧಾರವನ್ನು ಭಾರತ ತಂಡದ ಆರಂಭಿಕ ಆಟಗಾರರಿಬ್ಬರೂ ಸಮರ್ಥಿಸಿಕೊಂಡರು.

ಮೊದಲ ವಿಕೆಟ್‌ಗೆ ಇಬ್ಬರೂ 28.4 ಓವರ್‌ಗಳಲ್ಲಿ 168 ರನ್ ಕಲೆಹಾಕಿದರು.

ಎಡಗೈ ಬ್ಯಾಟ್ಸ್‌ಮನ್‌ ಶಿಖರ್ ಧವನ್ ಅವರು ಅಫ್ಘಾನಿಸ್ತಾನದ ಅನನುಭವಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಬೌಂಡರಿ ಸಿಕ್ಸರ್‌ಗಳ ಮೂಲಕ ಇನ್ನೂ ಐಪಿಎಲ್ ಗುಂಗಿನಲ್ಲಿಯೇ ಇರುವಂತೆ ಅಬ್ಬರದ ಆಟವಾಡಿದರು.

ಕೇವಲ 88 ಎಸೆತಗಳಲ್ಲಿ ಶತಕ ದಾಖಲಿಸಿದ ಶಿಖರ್ ಧವನ್, ಭೋಜನ ವಿರಾಮದ ಬಳಿಕ ಕೆಲವೇ ಹೊತ್ತಿನಲ್ಲಿ 107 (96) ರನ್ ಗಳಿಸಿ ಔಟಾದರು. ಅವರ ಶತಕದಲ್ಲಿ 19 ಬೌಂಡರಿ ಮತ್ತು 3 ಭರ್ಜರಿ ಸಿಕ್ಸರ್‌ಗಳು ಸೇರಿವೆ.

ಮತ್ತೊಂದೆಡೆ ಆರಂಭದಲ್ಲಿ ಆಫ್ಘನ್ ಬೌಲರ್‌ಗಳನ್ನು ಎದುರಿಸಲು ತಿಣುಕಾಡಿದ ಮುರಳಿ ವಿಜಯ್, ನಿಧಾನವಾಗಿ ಲಯ ಕಳೆದುಕೊಂಡರು.

ನಿಧಾನಗತಿಯ ಆಟಕ್ಕೆ ಮೊರೆ ಹೋಗಿದ್ದ ಅವರು, ಬಳಿಕ ಸಾಲು ಸಾಲು ಬೌಂಡರಿಗಳ ಜತೆಗೆ ಒಂದು ಸಿಕ್ಸರ್ ಸಹ ಸಿಡಿಸಿ ಶತಕದ ಹೊಸ್ತಿಲಲ್ಲಿ ಇದ್ದಾರೆ.

ಎಲ್ಲ ಕಣ್ಣೂ ನೆಟ್ಟಿದ್ದ ಅಫ್ಘಾನಿಸ್ತಾನದ ಪ್ರಮುಖ ಸ್ಪಿನ್ನರ್ ರಶೀದ್ ಖಾನ್ ಜಾದೂ ಮೊದಲ ಅವಧಿಯಲ್ಲಿ ನಡೆಯಲಿಲ್ಲ. ಟಿ20 ಮಾದರಿಯಲ್ಲಿಯೂ ದುಬಾರಿಯಾಗದ ರಶೀದ್ ಖಾನ್, ಟೆಸ್ಟ್‌ನಲ್ಲಿ ಶಿಖರ್ ಮತ್ತು ವಿಜಯ್ ಆರ್ಭಟಕ್ಕೆ ಸುಸ್ತಾದರು.

ವೇಗದ ಬೌಲರ್ ಯಾಮಿನ್ ಅಹ್ಮದ್‌ಜೈ ಅಫ್ಘಾನಿಸ್ತಾನದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್ ಪಡೆದ ಹೆಗ್ಗಳಿಕೆಗೆ ಪಾತ್ರರಾದರು.

ಕೊನೆಯ ಇನ್ನಿಂಗ್ಸ್‌ನಲ್ಲಿ ಚೆಂಡು ಹೆಚ್ಚು ತಿರುವು ಪಡೆಯುವ ಸಾಧ್ಯತೆ ಇರುವುದರಿಂದ ಭಾರತ ತಂಡದ ನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

ಟಿ 20 ಮತ್ತು ಏಕದಿನ ಟೂರ್ನಿಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ ಆಫ್ಘಾನಿಸ್ತಾನಕ್ಕೆ ಐಸಿಸಿ ಟೆಸ್ಟ್ ಮಾನ್ಯತೆ ನೀಡಿದ್ದು, ಇದೇ ಮೊದಲ ಬಾರಿಗೆ ಅದು ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಡುತ್ತಿದೆ.

ಕನ್ನಡಿಗ ಕರುಣ್ ನಾಯರ್‌, ಹೊಸ ಪ್ರತಿಭೆ ನವದೀಪ್ ಸೈನ್ ಅವರಿಗೆ ತಂಡದಲ್ಲಿ ಅವಕಾಶ ಸಿಕ್ಕಿಲ್ಲ. ಅನುಭವಿ ಆಟಗಾರರೊಂದಿಗೆ ತಂಡ ಕಣಕ್ಕಿಳಿದಿದೆ.

ಆಫ್ಘಾನಿಸ್ತಾನಕ್ಕೆ ಪಾದಾರ್ಪಣೆಯ ಪಂದ್ಯ: ಭಾರತಕ್ಕೂ ಪರೀಕ್ಷೆಆಫ್ಘಾನಿಸ್ತಾನಕ್ಕೆ ಪಾದಾರ್ಪಣೆಯ ಪಂದ್ಯ: ಭಾರತಕ್ಕೂ ಪರೀಕ್ಷೆ

ತಂಡಗಳು ಹೀಗಿವೆ
ಭಾರತ: ಶಿಖರ್ ಧವನ್, ಮುರಳಿ ವಿಜಯ್, ಚೇತೇಶ್ವರ ಪೂಜಾರ, ಲೋಕೇಶ್ ರಾಹುಲ್, ಅಜಿಂಕ್ಯ ರಹಾನೆ (ನಾ), ದಿನೇಶ್ ಕಾರ್ತಿಕ್ (ವಿ.ಕೀ), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಇಶಾಂತ್ ಶರ್ಮಾ, ಉಮೇಶ್ ಯಾದವ್.

ಅಫ್ಘಾನಿಸ್ತಾನ: ಮೊಹಮ್ಮದ್ ಷಹಜಾದ್, ಜಾವೇದ್ ಅಹ್ಮದಿ, ರಹಮತ್ ಷಾ, ಅಸ್ಗರ್ ಸ್ಟಾನಿಕ್‌ಜಾಯ್ (ನಾ), ಅಫ್ಸರ್ ಜಜೈ (ವಿ.ಕೀ), ಮೊಹಮ್ಮದ್ ನಬಿ, ಹಸ್ಮತುಲ್ಲಾಹ್ ಶಾಹಿದಿ, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ಯಾಮಿನ್ ಅಹ್ಮದ್‌ಜೈ, ವಫದಾರ್.

Story first published: Thursday, June 14, 2018, 15:14 [IST]
Other articles published on Jun 14, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X