ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಕ್ರಿಕೆಟ್‌ನಲ್ಲಿ ಉಮೇಶ್ ಯಾದವ್ 100 ವಿಕೆಟ್ ಸಾಧನೆ

India Vs Afghanistan: Umesh Yadav claims 100th Test wicket

ಬೆಂಗಳೂರು, ಜೂನ್ 15: ಅಫ್ಘಾನಿಸ್ತಾನದ ಬ್ಯಾಟ್ಸ್‌ಮನ್ ರಹಮತ್ ಶಾ ಅವರನ್ನು ಎಲ್‌ಬಿಡಬ್ಲ್ಯೂ ಬಲೆಗೆ ಕೆಡಹುವ ಮೂಲಕ ಭಾರತದ ವೇಗದ ಬೌಲರ್ ಉಮೇಶ್ ಯಾದವ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 100 ವಿಕೆಟ್ ಸಾಧನೆ ಮಾಡಿದರು.

ಈ ಮೂಲಕದ ಶತಕದ ವಿಕೆಟ್ ಗಡಿ ತಲುಪಿದ ಭಾರತದ 8ನೆಯ ವೇಗದ ಬೌಲರ್ ಮತ್ತು ಭಾರತದ ಪರ ಒಟ್ಟಾರೆಯಾಗಿ 22ನೇ ಬೌಲರ್ ಎನಿಸಿಕೊಂಡರು.

ಕಿಯಾ ಸೂಪರ್ ಲೀಗ್ ಗೆ ಆಯ್ಕೆಯಾದ ಕ್ರಿಕೆಟರ್ ಸ್ಮೃತಿಕಿಯಾ ಸೂಪರ್ ಲೀಗ್ ಗೆ ಆಯ್ಕೆಯಾದ ಕ್ರಿಕೆಟರ್ ಸ್ಮೃತಿ

ನೂರಕ್ಕೂ ಅಧಿಕ ವಿಕೆಟ್‌ಗಳನ್ನು ಕಿತ್ತ ವೇಗದ ಬೌಲರ್‌ಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ದಿಗ್ಗಜ ಕಪಿಲ್ ದೇವ್ ಅವರ ಬಳಗವನ್ನು ಸೇರಿಕೊಂಡ ಗೌರವಕ್ಕೆ ನಾಗ್ಪುರದ ಬೌಲರ್ ಉಮೇಶ್ ಯಾದವ್ ಪಾತ್ರರಾದರು.

ಕಪಿಲ್ ದೇವ್ 131 ಪಂದ್ಯಗಳಿಂದ 434 ವಿಕೆಟ್ ಕಿತ್ತಿದ್ದರೆ, ಮಾಜಿ ಎಡಗೈ ವೇಗದ ಬೌಲರ್ ಜಹೀರ್ ಖಾನ್ 93 ಪಂದ್ಯಗಳಲ್ಲಿ 311 ವಿಕೆಟ್ ಪಡೆದಿದ್ದರು.

ಭಾರತ vs ಆಫ್ಘಾನಿಸ್ತಾನ ಸ್ಕೋರ್ ಕಾರ್ಡ್

ಟೆಸ್ಟ್ ಕ್ರಿಕೆಟ್‌ನಲ್ಲಿ ವಿಕೆಟ್ ಶತಕ ಸಾಧನೆ ಮಾಡಿರುವ ಇತರೆ ವೇಗದ ಬೌಲರ್‌ಗಳೆಂದರೆ ಇಶಾಂತ್ ಶರ್ಮಾ (236), ಜಾವಗಲ್ ಶ್ರೀನಾಥ್ (236), ಮೊಹಮ್ಮದ್ ಶಮಿ (110), ಕರ್ಸನ್ ಘಾರ್ವಿ (109) ಮತ್ತು ಇರ್ಫಾನ್ ಪಠಾಣ್ (100).

ಉಳಿದ 14 ಬೌಲರ್‌ಗಳ ಪೈಕಿ 132 ಪಂದ್ಯಗಳಲ್ಲಿ 619 ವಿಕೆಟ್ ಪಡೆದಿರುವ ಮಾಜಿ ನಾಯಕ, ಲೆಗ್‌ ಸ್ಪಿನ್ನರ್ ಅನಿಲ್ ಕುಂಬ್ಳೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಕೆಎಲ್ ರಾಹುಲ್ ರನ್ನು ಭಾರತದ ಜೋ ರೂಟ್ ಎಂದು ಕರೆದಿದ್ದೇಕೆ?ಕೆಎಲ್ ರಾಹುಲ್ ರನ್ನು ಭಾರತದ ಜೋ ರೂಟ್ ಎಂದು ಕರೆದಿದ್ದೇಕೆ?

ಹರ್ಭಜನ್ ಸಿಂಗ್ 103 ಪಂದ್ಯಗಳಲ್ಲಿ 417 ವಿಕೆಟ್ ಕಿತ್ತಿದ್ದರೆ, ರವಿಚಂದ್ರನ್ ಅಶ್ವಿನ್ 58 ಟೆಸ್ಟ್‌ ಪಂದ್ಯಗಳಲ್ಲಿ 312 ವಿಕೆಟ್ ಪಡೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಮಾಜಿ ಆಟಗಾರರಾದ ಬಿಷನ್ ಸಿಂಗ್ ಬೇಡಿ, ಇಎಎಸ್ ಪ್ರಸನ್ನ, ವೆಂಕಟರಾಘವನ್, ಬಿ.ಎಸ್. ಚಂದ್ರಶೇಖರ್, ದಿಲೀಪ್ ದೋಶಿ ಮತ್ತು ಸುಭಾಷ್ ಗುಪ್ಟೆ ಇದ್ದಾರೆ.

Story first published: Friday, June 15, 2018, 17:05 [IST]
Other articles published on Jun 15, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X