ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ಪಾಂಡ್ಯ, ಧವನ್ ಹೋರಾಟ ವ್ಯರ್ಥ, ಮೊದಲ ಪಂದ್ಯದಲ್ಲಿ ಆಸಿಸ್‌ಗೆ ಗೆಲುವು

India vs Australia: 1st ODI, australia won by 66 runs

ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಭರ್ಜರಿಯಾಗಿ ಗೆದ್ದಿದೆ. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 374 ರನ್‌ಗಳಿಸಿ ಬೃಹತ್ ಗುರಿಯನ್ನು ಭಾರತ ತಂಡದ ಮುಂದಿಟ್ಟಿತು. ಇದನ್ನು ಬೆನ್ನಟ್ಟಿದ ಭಾರತ ಹಿನ್ನೆಡೆ ಕಂಡು 308 ರನ್ ಗಳಿಗೆ ತನ್ನ ಆಟವನ್ನು ಮುಗಿಸಿದೆ.

ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಅದ್ಭುತ ಆರಂಭವನ್ನು ಪಡೆಯಿತು. ವಾರ್ನರ್ ಹಾಗೂ ಫಿಂಚ್ ಜೋಡಿ ಮೊದಲ ವಿಕೆಟ್‌ಗೆ 156 ರನ್‌ಗಳ ಬೃಹತ್ ಮೊತ್ತವನ್ನು ಕೂಡಿಹಾಕಿತು. ವಾರ್ನರ್ 69 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಬಳಿಕ ನಾಯಕ ಫಿಂಚ್‌ಗೆ ಸ್ಮಿತ್ ಜೊತೆಗೂಡಿದರು. ಈ ಇಬ್ಬರು ನಡೆಯೂ ಶತಕದ ಜೊತೆಯಾಟ ಮಾತ್ರವಲ್ಲದೆ ಇಬ್ಬರೂ ಶತಕವನ್ನು ಪೂರೈಸಿ ಮಿಂಚಿದರು. ಬಳಿಕ ಬಂದ ಮ್ಯಾಕ್ಸ್‌ವೆಲ್ 19 ಎಸೆತಗಳಲ್ಲಿ 45 ರನ್ ಸೇರಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು. ಫಿಂಚ್ 114 ರನ್ ಗಳಿಸಿದರೆ ಸ್ಮಿತ್ 105 ರನ್ ಗಳಿಸಿದರು.

ಭಾರತ vs ಆಸ್ಟ್ರೇಲಿಯಾ: ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಬೇಡದ ದಾಖಲೆ ಬರೆದ ಚಾಹಲ್ಭಾರತ vs ಆಸ್ಟ್ರೇಲಿಯಾ: ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಬೇಡದ ದಾಖಲೆ ಬರೆದ ಚಾಹಲ್

ಆಸ್ಟ್ರೇಲಿಯಾ ಬೃಹತ್ ಮೊತ್ತ

ಆಸ್ಟ್ರೇಲಿಯಾ ಬೃಹತ್ ಮೊತ್ತ

ಈ ಭರ್ಜರಿ ಆಟದ ಪರಿಣಾಮವಾಗಿ ಆಸ್ಟ್ರೇಲಿಯಾ ನಿಗದಿತ 50 ಓವರ್‌ಗಳಲ್ಲಿ ಭರ್ಜರಿ 374 ರನ್ ಪೇರಿಸಿತು. ಈ ಮೊತ್ತವನ್ನು ಟೀಮ್ ಇಂಡಿಯಾ ಬೆನ್ನಟ್ಟಲು ಆರಂಬಿಸಿತು. ಮೊದಲ ವಿಕೆಟ್‌ಗೆ ಅರ್ಧ ಶತಕದ ಜೊತೆಯಾಟವನ್ನು ನೀಡಿದ ಮಯಾಂಕ್ ಧವನ್ ಜೋಡಿ ಇನ್ನೇನು ಉತ್ತಮವಾಗಿ ಪಂದ್ಯ ಸಾಗುತ್ತಿದೆ ಎನ್ನುವಾಗ ಮೊದಲ ವಿಕೆಟ್ ಕಳೆದುಕೊಂಡಿತು.

ಕುಸಿತ ಕಂಡ ಟೀಮ್ ಇಂಡಿಯಾ

ಕುಸಿತ ಕಂಡ ಟೀಮ್ ಇಂಡಿಯಾ

ಮಯಾಂಕ್ ಅಗರ್ವಾಲ್ 22 ರನ್ ಗಳಿಸಿ ಔಟಾದ ಬಳಿಕ ಬಂದ ವಿರಾಟ್ ಕೊಹ್ಲಿ 21 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಶ್ರೇಯಸ್ ಅಯ್ಯರ್ ಬಂದ ಹಾಗೆಯೇ ಫೆವಿಲಿಯನ್ ಸೇರಿಕೊಂಡರು. ಕೆಎಲ್ ರಾಹುಲ್ ಕೂಡ 12 ರನ್‌ಗಳಿಗೆ ಆಟವನ್ನು ಮುಗಿಸಿದರು.

ಧವನ್ ಪಾಂಡ್ಯ ಜೊತೆಯಾಟ

ಧವನ್ ಪಾಂಡ್ಯ ಜೊತೆಯಾಟ

ಬಳಿಕ ಹಾರ್ದಿಕ್ ಪಾಂಡ್ಯ ಆರಂಭಿಕ ಆಟಗಾರ ಧವನ್‌ಗೆ ಜೊತೆಯಾದರು. ಈ ಜೋಡಿ ಅದ್ಭುತವಾಗಿ ಇನ್ನಿಂಗ್ಸ್ ಬೆಳೆಸುತ್ತಾ ಸಾಗಿತು. ಒಂದು ಹಂತದಲ್ಲಿ ಈ ಜೋಡಿ ಭಾರತಕ್ಕೆ ಗೆಲುವು ತಂದುಕೊಡಬಹುದು ಎಂಬ ಆಶಾವಾದವುಂಟು ಮಾಡಿತು. 128 ರನ್‌ಗಳ ಜೊತೆಯಾಟವನ್ನು ನೀಡಿದ ಈ ಜೋಡಿ 74 ರನ್‌ಗಳಿಸಿದ್ದ ಧವನ್ ವಿಕೆಟ್ ಕಳೆದುಕೊಂಡಿತು.

ಭಗ್ನವಾದ ಕನಸು

ಭಗ್ನವಾದ ಕನಸು

ಬಳಿಕ ಹಾರ್ದಿಕ್ ಪಾಂಡ್ಯ ಹಾಗೂ ಜಡೇಜಾ ಜೊತೆ ಸೇರಿ ಹೋರಾಟವನ್ನು ಮುಂದುವರಿಸಿದರು. ಆದರೆ ಈ ಹಂತದಲ್ಲಿ ಒತ್ತಡಕ್ಕೆ ಒಳಗಾದ ಪಾಂಡ್ಯ 90 ರನ್ ಗಳಸಿ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿ ವಿಕೆಟ್ ಒಪ್ಪಿಸಿದರು. ಅಲ್ಲಿಗೆ ಭಾರತದ ಗೆಲುವಿನ ಕನಸು ಭಗ್ನವಾಯಿತು. ಅಂತಿಮವಾಗಿ ನಿಗದಿತ 50 ಓವರ್‌ಗಳಲ್ಲಿ ಭಾರತ ತಂಡ 308 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಶರಣಾಯಿತು.

Story first published: Friday, November 27, 2020, 18:28 [IST]
Other articles published on Nov 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X