ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪ್ಲೇಯಿಂಗ್ XIನಲ್ಲಿಲ್ಲದ ಯುಜುವೇಂದ್ರ ಚಾಹಲ್ ಗೇಮ್ ಚೇಂಜರ್ ಆದ ಕತೆ!

India vs Australia 1st T20: Yuzvendra Chahal From Not In Playing 11 To A Game Changer

ಕ್ಯಾನ್ಬೆರಾ: ಕ್ರೀಡಾಕೂಟಗಳಂದರೇನೇ ಹಾಗೆ. ಇಲ್ಲಿ ಕೆಲವೊಮ್ಮೆ ಎಣಿಕೆಯನ್ನು ಮೀರಿ ಅಚ್ಚರಿಯ ಫಲತಾಂಶ ಬಂದುಬಿಡುತ್ತದೆ. ಇಂಥದ್ದೇ ಅಚ್ಚರಿಯ ತಿರುವಿಗೆ ಶುಕ್ರವಾರ (ಡಿಸೆಂಬರ್ 4) ನಡೆದ ಭಾರತ vs ಆಸ್ಟ್ರೇಲಿಯಾ ನಡುವಿನ ಮೊದಲನೇ ಟಿ20ಐ ಪಂದ್ಯ ಗಮನ ಸೆಳೆದಿದೆ. ಪ್ಲೇಯಿಂಗ್ XIನಲ್ಲಿ ಇಲ್ಲದ ಯುಜುವೇಂದ್ರ ಚಾಹಲ್ ಗೇಮ್ ಚೇಂಜರ್ ಆಗಿ ಮಿಂಚಿದ್ದಾರೆ.

ಜಡೇಜಾ ಬದಲಿಗೆ ಚಾಹಲ್-ವಿವಾದ, ಕನ್ಕಶನ್ ಸಬ್ ನಿಯಮವೇನು?!ಜಡೇಜಾ ಬದಲಿಗೆ ಚಾಹಲ್-ವಿವಾದ, ಕನ್ಕಶನ್ ಸಬ್ ನಿಯಮವೇನು?!

ಕ್ಯಾನ್ಬೆರಾದ ಮನುಕಾ ಓವಲ್ ಸ್ಟೇಡಿಯಂನಲ್ಲಿ ನಡೆದ ಮೊದಲ ಟಿ20ಐ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಡುವ ಆಟಗಾರರ ಬಳಗದಲ್ಲಿ ಲೆಗ್ ಸ್ಪಿನ್ನರ್ ಚಾಹಲ್ ಇರಲಿಲ್ಲ. ಆದರೆ ಭಾರತದ ಇನ್ನಿಂಗ್ಸ್‌ನಲ್ಲಿ ಆಲ್ ರೌಂಡರ್ ರವೀಂದ್ರ ಜಡೇಜಾ ಗಾಯಕ್ಕೀಡಾಗಿದ್ದರಿಂದ ದ್ವಿತೀಯ ಇನ್ನಿಂಗ್ಸ್‌ ವೇಳೆ ಚಾಹಲ್ ಅವರನ್ನು ಮೈದಾನಕ್ಕಿಳಿಸಲಾಯ್ತು. ಆ ಮೇಲೆ ಪಂದ್ಯದ ಗತಿಯೇ ಬದಲಾಯ್ತು.

ಭಾರತದ ಇನ್ನಿಂಗ್ಸ್‌ನ ಕೊನೇ ಕ್ಷಣದಲ್ಲಿ ಜಡೇಜಾ ತಲೆಗೆ ಚೆಂಡು ಬಡಿದಿದ್ದರಿಂದ ಆಸ್ಟ್ರೇಲಿಯಾ ಇನ್ನಿಂಗ್ಸ್‌ನಲ್ಲಿ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್‌ನ (ಐಸಿಸಿ) ಕನ್ಕಶನ್ ಸಬ್‌ಸ್ಟಿಟ್ಯೂಟ್ ನಿಯಮದ ಪ್ರಕಾರ ಚಾಹಲ್ ಮೈದಾನಕ್ಕಿಳಿದರು. 4 ಓವರ್‌ಗಳನ್ನೂ ಎಸೆದ ಚಾಹಲ್ ಆಸ್ಟ್ರೇಲಿಯಾ ಪ್ರಮುಖ ವಿಕೆಟ್‌ಗಳನ್ನು ಮುರಿದು ಎದುರಾಳಿ ಸೋಲಿಗೆ ಕಾರಣರಾದರು.

2021ರ ಏಷ್ಯಾಕಪ್ ಶ್ರೀಲಂಕಾದಲ್ಲಿ, 2022ರ ಆಯೋಜನೆಯ ಹಕ್ಕು ಪಾಕಿಸ್ತಾನಕ್ಕೆ: ಪಿಸಿಬಿ ಸಿಇಒ ವಾಸಿಂ ಖಾನ್2021ರ ಏಷ್ಯಾಕಪ್ ಶ್ರೀಲಂಕಾದಲ್ಲಿ, 2022ರ ಆಯೋಜನೆಯ ಹಕ್ಕು ಪಾಕಿಸ್ತಾನಕ್ಕೆ: ಪಿಸಿಬಿ ಸಿಇಒ ವಾಸಿಂ ಖಾನ್

ಚಾಹಲ್ ಮ್ಯಾಜಿಕ್ ಬೌಲಿಂಗ್‌ಗೆ 35 ರನ್ ಬಾರಿಸಿದ್ದ ಆ್ಯರನ್ ಫಿಂಚ್, 12 ರನ್ ಬಾರಿಸಿದ್ದ ಸ್ಟೀವ್ ಸ್ಮಿತ್, 7 ರನ್ ಬಾರಿಸಿದ್ದ ಮ್ಯಾಥ್ಯೂ ವೇಡ್ ವಿಕೆಟ್ ಒಪ್ಪಿಸಿದರು. 4 ಓವರ್‌ಗಳಲ್ಲಿ 25 ರನ್ ನೀಡಿದ ಚಾಹಲ್ 3 ವಿಕೆಟ್‌ ಪಡೆದು ಪಂದ್ಯದ ಹೀರೋ ಅನ್ನಿಸಿದರು. ಹೀಗಾಗಿ ಭಾರತ ನೀಡಿದ್ದ 161 ರನ್ ಗುರಿಗೆ ಬದಲಾಗಿ 150 ರನ್ ಬಾರಿಸಿದ ಆಸೀಸ್ ಸೋಲೊಪ್ಪಿಕೊಂಡಿತು. ಚಾಹಲ್ ಪಂದ್ಯಶ್ರೇಷ್ಠರೆನಿಸಿದರು.

Story first published: Friday, December 4, 2020, 19:02 [IST]
Other articles published on Dec 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X