ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ-ಆಸ್ಟ್ರೇಲಿಯಾ: ಬರಿಗಾಲ ವೃತ್ತ ರಚಿಸಲಿದ್ದಾರೆ ಆಸೀಸ್ ಆಟಗಾರರು

india vs australia 2020: Australia cricketers to make barefoot anti-racism gesture

ಸಿಡ್ನಿ: ಮುಂಬರಲಿರುವ ಭಾರತ vs ಆಸ್ಟ್ರೇಲಿಯಾ ಸರಣಿಯ ವೇಳೆ ಆಸ್ಟ್ರೇಲಿಯಾ ಪುರುಷರ ತಂಡ ಬರಿಗಾಲ ವೃತ್ತ ರಚಿಸಲಿದೆ. ವರ್ಣಬೇಧ ನೀತಿ ವಿರೋಧಿಸಿ ಮತ್ತು ಮೂಲನಿವಾಸಿ ಸಂಸ್ಕೃತಿ ಬೆಂಬಲಿಸಿ ಆಸ್ಟ್ರೇಲಿಯಾ ಆಟಗಾರರು ಹೀಗೆ ಬರಿಗಾಲ ವೃತ್ತ ರಚಿಸಲಿದ್ದಾರೆ ಎಂದು ಆಸ್ಟ್ರೇಲಿಯಾದ ಉಪ ನಾಯಕ ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.

ಟಿ20 ವಿಶ್ವಕಪ್ ಮುಂದೂಡಿಕೆ: ಫುಡ್ ಡೆಲಿವರಿ ಬಾಯ್ ಆಗಿದ್ದಾರೆ ಮೀಕೆರೆನ್ಟಿ20 ವಿಶ್ವಕಪ್ ಮುಂದೂಡಿಕೆ: ಫುಡ್ ಡೆಲಿವರಿ ಬಾಯ್ ಆಗಿದ್ದಾರೆ ಮೀಕೆರೆನ್

ಕಳೆದ ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ವರ್ಣಬೇಧ ನೀತಿ ವಿರೋಧಿಸಿ ಮೈದಾನದಲ್ಲಿ ಮೊಣಕಾಲೂರಲಿಲ್ಲ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕತೆ ಮೈಕಲ್ ಹೋಲ್ಡಿಂಗ್ ಟೀಕಿಸಿದ ಬಳಿಕ ತಂಡದ ಆಟಗಾರರ ಜೊತೆ ಚರ್ಚಿಸಿ ಈ ನಿರ್ಧಾರ ತಾಳಿರುವುದಾಗಿ ಕಮಿನ್ಸ್ ತಿಳಿಸಿದ್ದಾರೆ.

ಸರಣಿ ಆರಂಭಕ್ಕೂ ಮುನ್ನ ತಂಡದ ಆಟಗಾರರು ಮೈದಾನದಲ್ಲಿ ಬರಿಗಾಲಿನ ವೃತ್ತ ರಚಿಸುವುದನ್ನು ಮೊದಲು ಪರಿಚಯಿಸಿದ್ದು ಈ ವರ್ಷ ಆಸ್ಟ್ರೇಲಿಯಾ ಮಹಿಳಾ ತಂಡ. ಆಸ್ಟ್ರೇಲಿಯಾ ಆಲ್ ರೌಂಡರ್ ಆಶ್ಲೀ ಗಾರ್ಡ್ನರ್ ಕೋರಿಕೆಯ ಮೇರೆಗೆ ಇದನ್ನು ಪಾಲಿಸಲಾಯ್ತು. ಗಾರ್ಡ್ನರ್ ಮೂಲನಿವಾಸಿ ಪರಂಪರೆಯವರಾಗಿದ್ದರಿಂದ ಬರಿಗಾಲ ವೃತ್ತಕ್ಕೆ ಕೋರಿಕೊಂಡಿದ್ದರು.

ಭಾರತ vs ಆಸೀಸ್: ಅಡಿಲೇಡ್‌ನಲ್ಲಿ ಕೊರೊನಾ ಭೀತಿ, ಪೈನ್ ಕ್ವಾರಂಟೈನ್ಭಾರತ vs ಆಸೀಸ್: ಅಡಿಲೇಡ್‌ನಲ್ಲಿ ಕೊರೊನಾ ಭೀತಿ, ಪೈನ್ ಕ್ವಾರಂಟೈನ್

ನವೆಂಬರ್ 27ರಿಂದ ಆರಂಭವಾಗಲಿರುವ ಭಾರತ ವಿರುದ್ಧದ ಸರಣಿಯಿಂದ ಬರಿಗಾಲ ವೃತ್ತ ಚಳುವಳಿ ನಡೆಯಲಿದೆ. ಪ್ರತೀ ಸರಣಿ ಆರಂಭಕ್ಕೆ ಮುನ್ನ ಇದನ್ನು ಪಾಲಿಸಲಾಗುತ್ತದೆ ಎಂದು ಪ್ಯಾಟ್ ಕಮಿನ್ಸ್ ಮಾಹಿತಿ ನೀಡಿದ್ದಾರೆ.

Story first published: Friday, November 20, 2020, 14:58 [IST]
Other articles published on Nov 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X