ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs AUS: ಹೋರಾಡಿ ಸೋತ ಟೀಮ್ ಇಂಡಿಯಾ: ಏಕದಿನ ಸರಣಿ ಆಸಿಸ್ ಕೈವಶ

india vs australia: 2nd ODI, australia won the match

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲೂ ಟೀಮ್ ಇಂಡಿಯಾ ಸೋಲುಕಂಡಿದೆ. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳನ್ನು ಸೋತು ಸರಣಿಯನ್ನು ಆಸ್ಟ್ರೇಲಿಯಾಗೆ ಒಪ್ಪಿಸಿದೆ. ಈ ಮೂಲಕ ಸುದೀರ್ಘ ಪ್ರವಾಸದಲ್ಲಿ ಕೆಟ್ಟ ಆರಂಭವನ್ನು ಪಡೆದುಕೊಂಡಿದೆ.

ಆಸ್ಟ್ರೇಲಿಯಾ ನೀಡಿದ್ದ 390 ರನ್‌ಗಳ ಬೃಹತ್ ಮೊತ್ತವನ್ನು ಟೀಮ್ ಇಂಡಿಯಾ ಬೆನ್ನಟ್ಟಿತು. ಸಾಕಷ್ಟು ಹೋರಾಟವನ್ನು ನಡೆಸಿತಾದರೂ ಆಸ್ಟ್ರೇಲಿಯಾ ತಂಡ ಗಳಿದ ಬೃಹತ್ ಮೊತ್ತವನ್ನು ತಲುಪಲು ಸಾಧ್ಯವಾಗಲಿಲ್ಲ. ಟೀಮ್ ಇಂಡಿಯಾ ಪರವಾಗಿ ವಿರಾಟ್ ಕೊಹ್ಲಿ ಕೆಎಲ್ ರಾಹುಲ್ ಅರ್ಧ ಶತಕವನ್ನು ಗಳಿಸಿದರು. ಅಂತಿಮವಾಗಿ ಭಾರತ ನಿಗದಿತ 50 ಓವರ್‌ಗಳಲ್ಲಿ 334 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ 51 ರನ್‌ಗಳ ಸೋಲು ಕಂಡಿದೆ.

ಭಾರತ vs ಆಸ್ಟ್ರೇಲಿಯಾ: ವಿಶೇಷ ಮೈಲಿಗಲ್ಲು ಸ್ಥಾಪಿಸಿದ ವಿರಾಟ್ ಕೊಹ್ಲಿಭಾರತ vs ಆಸ್ಟ್ರೇಲಿಯಾ: ವಿಶೇಷ ಮೈಲಿಗಲ್ಲು ಸ್ಥಾಪಿಸಿದ ವಿರಾಟ್ ಕೊಹ್ಲಿ

ಆಸ್ಟ್ರೇಲಿಯಾ ಬೃಹತ್ ಮೊತ್ತ

ಆಸ್ಟ್ರೇಲಿಯಾ ಬೃಹತ್ ಮೊತ್ತ

ಮೊದಲಿಗೆ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಬರಹತ್ ಮೊತ್ತವನ್ನು ಪೇರಿಸಿತು. ಆಸ್ಟ್ರೇಲಿಯಾದ ಅಗ್ರ ಐವರು ಬ್ಯಾಟ್ಸ್‌ಮನ್‌ಗಳು 50+ ರನ್ ಬಾರಿಸಿ ದಾಖಲೆ ಬರೆದರು. ಸ್ಟೀವ್ ಸ್ಮಿತ್ ಸರಣಿಯಲ್ಲಿ ಎರಡನೇ ಶತಕವನ್ನು ದಾಖಲಿಸಿದರು. ಉಳಿದಂತೆ ವಾರ್ನರ್, ಫಿಂಚ್, ಲ್ಯಾಬುಶೈನ್ ಹಾಗೂ ಮ್ಯಾಕ್ಸ್‌ವೆಲ್ ಅರ್ಧ ಶತಕ ಬಾರಿಸಿ ಮಿಂಚುಹರಿಸಿದರು. ಈ ಮೂಲಕ 389 ರನ್‌ಗಳ ಮ=ಬೃಹತ್ ಮೊತ್ತವನ್ನು ಪೇರಿಸುವಲ್ಲಿ ಆಸ್ಟ್ರೇಲಿಯಾ ಯಶಸ್ವಿಯಾಯಿತು.

ಭಾರತದ ಪ್ರತಿ ಹೋರಾಟ

ಆಸ್ಟ್ರೇಲಿಯಾ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಟೀಮ್ ಇಂಡಿಯಾಗೆ ಆರಂಬಿಕ ಆಟಗಾರರು ಅರ್ಧ ಶತಕದ ಜೊತೆಯಾಟವನ್ನು ನೀಡಿದರು. ಮೊದಲ ವಿಕೆಟ್‌ಗೆ 58 ರನ್‌ಗಳ ಜೊತೆಯಾಟವನ್ನು ನೀಡಿದ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಪ್ಯಾಟ್ ಕಮ್ಮಿನ್ಸ್ ಯಶಸ್ವಿಯಾದರು. ಅದಾದ ಬಳಿಕ ಧವನ್ ಕೂಡ ವಿಕೆಟ್ ಒಪ್ಪಿಸಿದರು.

ವಿರಾಟ್ ಕೊಹ್ಲಿ ಭರ್ಜರಿ ಆಟ

ವಿರಾಟ್ ಕೊಹ್ಲಿ ಭರ್ಜರಿ ಆಟ

ಟೀಮ್ ಇಂಡಿಯಾದ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಪ್ರದರ್ಶನ ಗಮನಾರ್ಹವಾಗಿತ್ತು. ಮೊದಲಿಗೆ ಶ್ರೇಯಸ್ ಅಯ್ಯರ್ ಜೊತೆಗೆ ಇನ್ನಿಂಗ್ಸ್ ಕಟ್ಟಲು ಆರಂಭಿಸಿದ ಕೊಹ್ಲಿ ಉತ್ತಮವಾಗಿ ಆಡುತ್ತಿದ್ದರು. ಆದರೆ ಆ ಸಂದರ್ಭದಲ್ಲಿ ಶ್ರೇಯಸ್ ಐಯ್ಯರ್ 38 ರನ್ ಗಳಿಸಿ ವಿಕೆಟ್ ಒಪ್ಪಿಸಿದರು ಬಳಿಕ ಕೆಎಲ್ ರಾಹುಲ್ ನಾಯಕ ಕೊಹ್ಲಿಗೆ ಜೊತೆಯಾದರು. ಕೆಎಲ್ ರಾಹುಲ್ ಜೊತೆಗೂ ಉತ್ತಮ ಜೊತೆಯಾಟ ನೀಡಿದ ವಿರಾಟ್ ಕೊಹ್ಲಿ ಫುಲ್‌ಶಾಟ್‌ ಎಸೆತದಲ್ಲಿ ವಿಫವಾಗಿ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು.

ವಿರಾಟ್ ಕೊಹ್ಲಿ ಮೈಲಿಗಲ್ಲು

ವಿರಾಟ್ ಕೊಹ್ಲಿ ಮೈಲಿಗಲ್ಲು

ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ 250ನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 22,000ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಅಂತಾರಾಷ್ಟ್ರಿಯ ಕ್ರಿಕೆಟ್‌ನಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ.

ಬೆನ್ನಟ್ಟುವಲ್ಲಿ ವಿಫಲ

ಬೆನ್ನಟ್ಟುವಲ್ಲಿ ವಿಫಲ

ವಿರಾಟ್ ಕೊಹ್ಲಿ ವಿಕೆಟ್ ಪತನದ ಬಳಿಕ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಒಂದಷ್ಟು ಹೊತ್ತು ಆಸ್ಟ್ರೇಲಿಯಾ ಬೌಲರ್‌ಗಳಿಗೆ ಪ್ರತಿರೋಧವನ್ನು ಒಡ್ಡಿದರು. ಆದರೆ ಕೆಎಲ್ ರಾಹುಲ್ 76 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಹಾರ್ದಿಕ್ ಪಾಂಡ್ಯ ಜೊತೆಗೂಡಿದ ರವೀಂದ್ರ ಜಡೇಜಾ ಅಂತಿಮ ಪ್ರಯತ್ನವನ್ನು ನಡೆಸಿದರು. ಆದರೆ ಪ್ಯಾಟ್ ಕಮ್ಮಿನ್ಸ್ ಎಸೆದ ಸತತ ಎರಡು ಎಸೆತಗಳಲ್ಲಿ ಈ ಇಬ್ಬರೂ ಫೆವಿಲಿಯನ್ ಸೇರಿಕೊಂಡರು. ಅಲ್ಲಿಗೆ ಭಾರತದ ಹೋರಾಟ ಅಂತ್ಯವಾಗಿತ್ತು. ಅಂತಿಮವಾಗಿ ಭಾರತ ನಿಗದಿತ 50 ಓವರ್‌ಗಳಲ್ಲಿ 338 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು ಶರಣಾಯಿತು.

Story first published: Monday, November 30, 2020, 10:02 [IST]
Other articles published on Nov 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X