ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸೀಸ್ ವಿರುದ್ಧ ಸೋಲಿನ ಸೇಡು ತೀರಿಸಿದ ಭಾರತ, ಏಕದಿನ ಸರಣಿ ಜೀವಂತ

India vs Australia, 2nd ODI - Live Match Report

ರಾಜ್‌ಕೋಟ್‌, ಜನವರಿ 17: ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಶುಕ್ರವಾರ (ಜನವರಿ 17) ನಡೆದ ಭಾರತ-ಆಸ್ಟ್ರೇಲಿಯಾ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 36 ರನ್‌ ಗೆಲುವನ್ನಾಚರಿಸಿದೆ. ಈ ಮೂಲಕ ಆಸ್ಟ್ರೇಲಿಯಾ ವಿರುದ್ಧ ಅನುಭವಿಸಿದ್ದ ಮೊದಲ ಪಂದ್ಯದ ಸೋಲಿನ ಸೇಡನ್ನು ಕೊಹ್ಲಿ ಪಡೆ ತೀರಿಸಿಕೊಂಡಿದೆ. ಮೂರು ಪಂದ್ಯಗಳ ಏಕದಿನ ಸರಣಿಯೂ ಈಗ 1-1ರಿಂದ ಸಮಬಲಗೊಂಡಿದೆ.

ಸಚಿನ್, ಆಮ್ಲಾ ಹಿಂದಿಕ್ಕಿ ವಿಶ್ವದಾಖಲೆ ಬರೆದ ಹಿಟ್‌ಮ್ಯಾನ್ ರೋಹಿತ್ ಶರ್ಮಾ!ಸಚಿನ್, ಆಮ್ಲಾ ಹಿಂದಿಕ್ಕಿ ವಿಶ್ವದಾಖಲೆ ಬರೆದ ಹಿಟ್‌ಮ್ಯಾನ್ ರೋಹಿತ್ ಶರ್ಮಾ!

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದಿಂದ ರೋಹಿತ್ ಶರ್ಮಾ 42 (44 ಎಸೆತ), ಶಿಖರ್ ಧವನ್ 96 (90 ಎಸೆತ), ವಿರಾಟ್ ಕೊಹ್ಲಿ 78 (76 ಎಸೆತ), ಶ್ರೇಯಸ್‌ ಐಯ್ಯರ್ 7, ಕೆಎಲ್ ರಾಹುಲ್ 80 (52 ಎಸೆತ), ರವೀಂದ್ರ ಜಡೇಜಾ ಅಜೇಯ 20 ರನ್‌ ಸೇರಿಸಿದರು. ತಂಡ 50 ಓವರ್‌ ಮುಕ್ತಾಯಕ್ಕೆ 6 ವಿಕೆಟ್‌ ನಷ್ಟದಲ್ಲಿ 340 ರನ್ ಬಾರಿಸಿತು.

ಭಾರತ vs ಆಸ್ಟ್ರೇಲಿಯಾ, 2ನೇ ಏಕದಿನ, ಸ್ಕೋರ್‌ಕಾರ್ಡ್

1
46131

ಕೊಹ್ಲಿ 'ಸ್ಪಿರಿಟ್ ಆಫ್ ಕ್ರಿಕೆಟ್‌' ಪ್ರಶಸ್ತಿ ಪಡೆದ ಬಳಿಕ ಪಾಕ್ ವೇಗಿಯ ಪ್ರತಿಕ್ರಿಯೆ ನೋಡಿ!ಕೊಹ್ಲಿ 'ಸ್ಪಿರಿಟ್ ಆಫ್ ಕ್ರಿಕೆಟ್‌' ಪ್ರಶಸ್ತಿ ಪಡೆದ ಬಳಿಕ ಪಾಕ್ ವೇಗಿಯ ಪ್ರತಿಕ್ರಿಯೆ ನೋಡಿ!

ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಪರ ನಾಯಕ ಆ್ಯರನ್ ಫಿಂಚ್ 33, ಸ್ಟೀವ್ ಸ್ಮಿತ್ 98 (102 ಎಸೆತ), ಮಾರ್ನಸ್ ಲ್ಯಾಬುಸ್ಚಾಗ್ನೆ 46, ಆ್ಯಷನ್ ಅಗರ್ 25, ಕೇನ್ ರಿಚರ್ಡ್ಸನ್ 24 ರನ್‌ ಕೊಡುಗೆಯಿತ್ತರು. ಆಸ್ಟ್ರೇಲಿಯಾ 49.1 ಓವರ್‌ಗೆ ಎಲ್ಲಾ ವಿಕೆಟ್‌ ಕಳೆದು 304 ರನ್‌ ಮಾಡಿತು.

ಭಾರತ vs ಆಸ್ಟ್ರೇಲಿಯಾ: ಕೆಟ್ಟ ದಾಖಲೆಗೆ ಕಾರಣರಾದ ವಿರಾಟ್ ಕೊಹ್ಲಿ!ಭಾರತ vs ಆಸ್ಟ್ರೇಲಿಯಾ: ಕೆಟ್ಟ ದಾಖಲೆಗೆ ಕಾರಣರಾದ ವಿರಾಟ್ ಕೊಹ್ಲಿ!

ಭಾರತದ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಆ್ಯಡಮ್ ಜಂಪಾ 50 ರನ್‌ಗೆ 3, ಕೇನ್ ರಿಚರ್ಡ್ಸನ್ 2 ವಿಕೆಟ್‌ ಪಡೆದರು. ಆಸೀಸ್ ಇನ್ನಿಂಗ್ಸ್‌ನಲ್ಲಿ ಭಾರತದ ಮೊಹಮ್ಮದ್ ಶಮಿ 3, ನವದೀಪ್ ಸೈನಿ, ರವೀಂದ್ರ ಜಡೇಜಾ, ಕುಲದೀಪ್ ಯಾದವ್ ತಲಾ 2, ಜಸ್‌ಪ್ರೀತ್‌ ಬೂಮ್ರಾ 1 ವಿಕೆಟ್ ಪಡೆದರು. ಕೆಎಲ್ ರಾಹುಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಪಾಕ್ ವಿರುದ್ಧದ ಸರಣಿಗೆ ಬಾಂಗ್ಲಾದ ಪ್ರಮುಖ ಆಟಗಾರ ಹಿಂದೇಟು!ಪಾಕ್ ವಿರುದ್ಧದ ಸರಣಿಗೆ ಬಾಂಗ್ಲಾದ ಪ್ರಮುಖ ಆಟಗಾರ ಹಿಂದೇಟು!

ಭಾರತ ತಂಡ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ಸಿ), ಲೋಕೇಶ್ ರಾಹುಲ್ (ವಿಕೆ), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ಕುಲದೀಪ್ ಯಾದವ್, ಜಸ್ಪ್ರೀತ್ ಬೂಮ್ರಾ.

ಭಾರತ ವಿರುದ್ಧದ ಟಿ20ಐ ಸರಣಿಗೆ ಬಲಿಷ್ಠ ನ್ಯೂಜಿಲೆಂಡ್‌ ತಂಡ ಪ್ರಕಟಭಾರತ ವಿರುದ್ಧದ ಟಿ20ಐ ಸರಣಿಗೆ ಬಲಿಷ್ಠ ನ್ಯೂಜಿಲೆಂಡ್‌ ತಂಡ ಪ್ರಕಟ

ಆಸ್ಟ್ರೇಲಿಯಾ ತಂಡ: ಡೇವಿಡ್ ವಾರ್ನರ್, ಆ್ಯರನ್ ಫಿಂಚ್ (ಸಿ), ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಆ್ಯಷ್ಟನ್ ಟರ್ನರ್, ಅಲೆಕ್ಸ್ ಕ್ಯಾರಿ (ವಿಕೆ), ಆ್ಯಷ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಕೇನ್ ರಿಚರ್ಡ್ಸನ್, ಆಡಮ್ ಜಂಪಾ.

Story first published: Friday, January 17, 2020, 21:58 [IST]
Other articles published on Jan 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X