ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮ್ಯಾಕ್ಸ್‌ವೆಲ್ ಆರ್ಭಟ, ಭಾರತ ವಿರುದ್ಧ ಟಿ20 ಸರಣಿ ಗೆದ್ದ ಆಸ್ಟ್ರೇಲಿಯಾ!

ಮ್ಯಾಕ್ಸ್‌ವೆಲ್ ಆರ್ಭಟ, ಭಾರತ ವಿರುದ್ಧ ಟಿ20 ಸರಣಿ ಗೆದ್ದ ಆಸ್ಟ್ರೇಲಿಯಾ!
India vs Australia, 2nd T20I, Live Cricket Score

ಬೆಂಗಳೂರು, ಫೆಬ್ರವರಿ 27: ಆಸ್ಟ್ರೇಲಿಯಾ ಸ್ಫೋಟಕ ಬ್ಯಾಟ್ಸ್ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ಆರ್ಭಟಕ್ಕೆ ಟೀಮ್ ಇಂಡಿಯಾ ಶರಣಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ (ಫೆಬ್ರವರಿ 27) ನಡೆದ ಭಾರತ-ಆಸ್ಟ್ರೇಲಿಯಾ ದ್ವಿತೀಯ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ, ವಿಕೆಟ್ 7 ಗೆಲುವಿನೊಂದಿಗೆ ಸರಣಿಯನ್ನು 2-0ಯಿಂದ ವಶಪಡಿಸಿಕೊಂಡಿದೆ.

ಭಾರತ ನೀಡಿದ್ದ 191 ರನ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾಕ್ಕೆ ಗ್ಲೆನ್ ಮ್ಯಾಕ್ಸ್‌ವೆಲ್ ಬಲವಾಗಿ ನಿಂತರು. 55 ಎಸೆಗಳಿಗೆ ಮ್ಯಾಕ್ಸ್‌ವೆಲ್ ಅಜೇಯ 113 ರನ್ ಸಿಡಿಸಿದರು. ಜೊತೆಗೆ ಆರಂಭಿಕ ಆಟಗಾರ ಡಿ ಆರ್ಚಿ ಶಾರ್ಟ್ 40 ರನ್ ಸೇರಿಸಿದ್ದೂ ಗೆಲುವಿನ ನೆಲೆಯಲ್ಲಿ ತಂಡಕ್ಕೆ ನೆರವಾಯ್ತು. ಆಸೀಸ್ 19.4 ಓವರ್‌ಗೆ 3 ವಿಕೆಟ್ ಕಳೆದು 194 ರನ್ ಬಾರಿಸಿ ಗೆಲುವನ್ನು ಸಂಭ್ರಮಿಸಿತು.

ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
45584

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತಕ್ಕೆ ಆರಂಭಿಕ ಆಟಗಾರ ಕೆಎಲ್ ರಾಹುಲ್ 47, ನಾಯಕ ವಿರಾಟ್ ಕೊಹ್ಲಿ ಅಜೇಯ 72, ಶಿಖರ್ ಧವನ್ 14, ಧೋನಿ 40 ರನ್‌ಗಳ ಕೊಡುಗೆ ನೀಡಿದರು. 20 ಓವರ್‌ಗೆ ಭಾರತ 4 ವಿಕೆಟ್ ನಷ್ಟದೊಂದಿಗೆ 190 ರನ್ ಬಾರಿಸಿತ್ತು.

ಈ ಪಂದ್ಯದಲ್ಲಿ ವಿಜಯ್ ಶಂಕರ್ ಭಾರತ ಪರ 2 ಪಡೆದು ತಕ್ಕಮಟ್ಟಿಗೆ ಎದುರಾಳಿಯನ್ನು ಕಟ್ಟಿ ಹಾಕಲು ಯತ್ನಿಸಿದರು. ಆದರೆ ಸರಣಿಯನ್ನು ಉಳಿಸಿಕೊಳ್ಳಲು ಭಾರತದಿಂದಾಗಲಿಲ್ಲ. ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ ಎರಡೂ ಪ್ರಶಸ್ತಿ ಆಸೀಸ್‌ನ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಲಭಿಸಿತು.

ಭಾರತ ತಂಡ: ಶಿಖರ್ ಧವನ್, ಲೋಕೇಶ್ ರಾಹುಲ್, ವಿರಾಟ್ ಕೊಹ್ಲಿ (ಸಿ), ರಿಷಬ್ ಪಂತ್, ಎಂಎಸ್ ಧೋನಿ (ವಿಕೆ), ದಿನೇಶ್ ಕಾರ್ತಿಕ್, ವಿಜಯ್ ಶಂಕರ್, ಕೃನಾಲ್ ಪಾಂಡ್ಯ, ಯುಜುವೇಂದ್ರ ಚಹಾಲ್, ಜಸ್‌ಪ್ರೀತ್ ಬೂಮ್ರಾ, ಸಿದ್ಧಾರ್ಥ್ ಕೌಲ್.

ಆಸ್ಟ್ರೇಲಿಯಾ ತಂಡ: ಡಿ ಅರ್ಚಿ ಶಾರ್ಟ್, ಮಾರ್ಕಸ್ ಸ್ಟೊಯಿನಿಸ್, ಆರನ್ ಫಿಂಚ್ (ಸಿ), ಗ್ಲೆನ್ ಮ್ಯಾಕ್ಸ್ವೆಲ್, ಪೀಟರ್ ಹ್ಯಾಂಡ್ಸ್ಕಾಂಬ್ (ವಿ.ಕೆ.), ಆಷ್ಟನ್ ಟರ್ನರ್, ನಾಥನ್ ಕೌಲ್ಟರ್-ನೈಲ್, ಪ್ಯಾಟ್ ಕಮ್ಮಿನ್ಸ್, ಜೀಯೆ ರಿಚರ್ಡ್ಸನ್, ಜಾಸನ್ ಬೆಹೆರೆನ್ಡಾಫ್, ಆಡಮ್ ಝಂಪಾ.

Story first published: Wednesday, February 27, 2019, 22:59 [IST]
Other articles published on Feb 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X