ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸೀಸ್ ದ್ವಿತೀಯ ಟೆಸ್ಟ್: ತಂಡಗಳ ಬಲಾಬಲ, ಪ್ರಸಾರ ಮಾಹಿತಿ

India vs Australia test : ಭಾರತ vs ಆಸೀಸ್ ದ್ವಿತೀಯ ಟೆಸ್ಟ್: ತಂಡಗಳ ಬಲಾಬಲ | Oneindia Kannada
India vs Australia, 2nd Test: Preview, where to watch, timing, squads

ಪರ್ತ್, ಡಿಸೆಂಬರ್ 13: ಪರ್ತ್ ಸ್ಟೇಡಿಯಂನಲ್ಲಿ ಶುಕ್ರವಾರ (ಡಿಸೆಂಬರ್ 14) ಆರಂಭವಾಗಲಿರುವ ಭಾರತ vs ಆಸ್ಟ್ರೇಲಿಯಾ ದ್ವಿತೀಯ ಟೆಸ್ಟ್ ಪಂದ್ಯಕ್ಕಾಗಿ ಇತ್ತಂಡಗಳು ಸಜ್ಜಾಗಿವೆ. ಮೊದಲ ಪಂದ್ಯ ಗೆದ್ದು ಸರಣಿ 1-0y ಮುನ್ನಡೆಯಲ್ಲಿರುವುದರಿಂದ ಭಾರತ ಸಹಜವಾಗಿಯೇ ಉಮೇದಿನಲ್ಲಿದೆ.

ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೆ ರೋಹಿತ್, ಅಶ್ವಿನ್ ಇಲ್ಲಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೆ ರೋಹಿತ್, ಅಶ್ವಿನ್ ಇಲ್ಲ

ಬೌಲರ್‌ಗಳಿಗೆ ಕೊಂಚ ಅನುಕೂಲ ಮಾಡಿಕೊಡುವ ಪರ್ತ್ ಪಿಚ್ ನಲ್ಲಿ ಭಾರತ ಗೆಲ್ಲೋದು ಸುಲಭವಿಲ್ಲ ಎಂಬ ಮಾತುಗಳು ಕೇಳಿ ಬಂದಿರುವುದು ನಿಜ. ಆದರೆ ಸರಣಿ ಜಯಿಸಿ ಇತಿಹಾಸ ನಿರ್ಮಿಸುವ ಯೋಜನೆಯಲ್ಲಿರುವುದರಿಂದ ಭಾರತ ಗೆಲುವಿಗಾಗಿ ಹೋರಾಡಲು ತಯಾರಾಗಿ ನಿಂತಿದೆ.

ಐಪಿಎಲ್ ಆಡದಿರಲು ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮನ್ ನಿರ್ಧಾರಐಪಿಎಲ್ ಆಡದಿರಲು ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮನ್ ನಿರ್ಧಾರ

ಅಡಿಲೇಡ್ ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ನಲ್ಲಿ ಭಾರತ 31 ರನ್ ಜಯ ದಾಖಲಿಸಿತ್ತು. ಅದೂ ಕೆಎಲ್ ರಾಹುಲ್ ಕೊನೇ ಕ್ಷಣದಲ್ಲಿ ಪಡೆದ ಕ್ಯಾಚ್ ಪಂದ್ಯಕ್ಕೆ ತಿರುವು ನೀಡಿತ್ತು. ಇಲ್ಲದಿದ್ದರೆ ಮೊದಲ ಟೆಸ್ಟ್ ಫಲಿತಾಂಶ ಆತಿಥೇಯರ ಪರ ವಾಲುವ ಸಾಧ್ಯತೆಯನ್ನೂ ಅಲ್ಲಗೆಳೆಯುವಂತಿಲ್ಲ.

ಪ್ರಮುಖ ಆಟಗಾರರೇ ಹೊರಗೆ

ಪ್ರಮುಖ ಆಟಗಾರರೇ ಹೊರಗೆ

ಗಾಯಾಳುಗಳಾಗಿರುವ ಆರ್ ಅಶ್ವಿನ್ ಮತ್ತು ರೋಹಿತ್ ಶರ್ಮಾ, ದ್ವಿತೀಯ ಟೆಸ್ಟ್ ಗಾಗಿ ಪ್ರಕಟಿತ ಭಾರತ ತಂಡದಲ್ಲಿ ಸ್ಥಾನ ಪಡೆದಿಲ್ಲ. ರೋಹಿತ್‌ಗೆ ಬೆನ್ನು ನೋವಾದರೆ, ಅಶ್ವಿನ್ ಅವರು ಕಿಬ್ಬೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಆರಂಭಿಕರಾಗಿ ಕೆಎಲ್ ರಾಹುಲ್ ಮತ್ತು ಮುರಳಿ ವಿಜಯ್‌ಗೆ ತಂಡದಲ್ಲಿ ಉಳಿದುಕೊಂಡಿದ್ದಾರೆ.

ಟೀಕಿಸಲ್ಪಟ್ಟ ಆಟಗಾರರು

ಟೀಕಿಸಲ್ಪಟ್ಟ ಆಟಗಾರರು

ಮೊದಲ ಟೆಸ್ಟ್ ನಲ್ಲಿ ಸ್ಥಾನ ಪಡೆದಿದ್ದ ಆಸ್ಟ್ರೇಲಿಯಾದ ಆ್ಯರನ್ ಫಿಂಚ್ ಮತ್ತು ಮಿಚೆಲ್ ಸ್ಟಾರ್ಕ್ ವೈಫಲ್ಯ ಪ್ರದರ್ಶಿಸಿದ್ದರು. ಇದಕ್ಕೆ ಇಬ್ಬರೂ ಟೀಕೆಗೆ ಒಳಗಾಗಿದ್ದರು ಕೂಡ. ಆದರೆ ದ್ವಿತೀಯ ಟೆಸ್ಟ್ ವೇಳೆ ಫಿಂಚ್ ಬ್ಯಾಟಿಂಗ್ ವಿಭಾಗದಲ್ಲಿ, ಸ್ಟಾರ್ಕ್ ಬೌಲಿಂಗ್ ವಿಭಾಗದಲ್ಲಿ ಚೇತರಿಕೆ ತೋರಿಕೊಳ್ಳುವ ನಿರೀಕ್ಷೆಯಿದೆ.

13 ಜನ ಆಟಗಾರರ ಭಾರತ ತಂಡ

13 ಜನ ಆಟಗಾರರ ಭಾರತ ತಂಡ

ವಿರಾಟ್ ಕೊಹ್ಲಿ (ಕ್ಯಾಪ್ಟನ್), ಕೆಎಲ್ ರಾಹುಲ್, ಮುರಳಿ ವಿಜಯ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಬ್ ಪಂತ್ (ವಿಕೆ), ರವೀಂದ್ರ ಜಡೇಜಾ, ಇಶಾಂತ್ ಶರ್ಮಾ, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಭುವನೇಶ್ವರ ಕುಮಾರ್, ಉಮೇಶ್ ಯಾದವ್.

13 ಜನ ಆಟಗಾರರ ಆಸೀಸ್ ತಂಡ

13 ಜನ ಆಟಗಾರರ ಆಸೀಸ್ ತಂಡ

ಟಿಮ್ ಪೈನ್ (ಕ್ಯಾಪ್ಟನ್ & ವಿಕ್), ಮಾರ್ಕಸ್ ಹ್ಯಾರಿಸ್, ಆ್ಯರನ್ ಫಿಂಚ್, ಉಸ್ಮಾನ್ ಖವಾಜಾ, ಟ್ರಾವಿಸ್ ಹೆಡ್, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್ಕಾಂಬ್, ನಾಥನ್ ಲಿಯಾನ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಝೆಲ್ವುಡ್.

ನೇರ ಪ್ರಸಾರ

ನೇರ ಪ್ರಸಾರ

ಪರ್ತ್ ಸ್ಟೇಡಿಯಂನಲ್ಲಿ ಶುಕ್ರವಾರ (ಡಿಸೆಂಬರ್ 14) ಭಾರತೀಯ ಕಾಲಮಾನ 7.50 amಗೆ ಪಂದ್ಯ ಆರಂಭಗೊಳ್ಳಲಿದೆ. ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ಸ್ ಪಂದ್ಯವನ್ನು ನೇರ ಪ್ರಸಾರ ಗೊಳಿಸಲಿದೆ. ಸೋನಿ LIVನಲ್ಲೂ ಜಾಲತಾಣಿಗರು ಪಂದ್ಯದ ನೇರ ಪ್ರಸಾರ ವೀಕ್ಷಿಸಬಹುದು. ಜೊತೆಗೆ ಮೈಖೇಲ್ ಕನ್ನಡ ಕೂಡ ಪಂದ್ಯದ ಲೈವ್‌ಸ್ಕೋರ್, ಸ್ಕೋರ್ ಕಾರ್ಡ್ ಪ್ರಕಟಿಸಲಿದೆ.

Story first published: Thursday, December 13, 2018, 16:21 [IST]
Other articles published on Dec 13, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X