ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

3ನೇ ಏಕದಿನಕ್ಕೆ ಭಾರತದ ಪ್ರಮುಖ ಬೌಲರ್ ಬದಲಾವಣೆ ಸಾಧ್ಯತೆ

India vs Australia 3rd ODI 2020: T Natarajan or Shardul Thakur likely to replace Navdeep Saini

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಆರಂಭಿಕ ಎರಡೂ ಏಕದಿನ ಪಂದ್ಯಗಳನ್ನು ಸೋತಿರುವ ಟೀಮ್ ಇಂಡಿಯಾ ವೈಟ್ ವಾಷ್ ಮುಖಭಂಗದ ಭೀತಿಯಲ್ಲಿದೆ. ಏಕದಿನ ಸರಣಿ ಕೈ ತಪ್ಪಿದ್ದರೂ ಪ್ರತಿಷ್ಠೆಗಾದರೂ ಕೊನೇ ಏಕದಿನ ಪಂದ್ಯ ಗೆಲ್ಲುವತ್ತ ವಿರಾಟ್ ಕೊಹ್ಲಿ ಪಡೆ ಕಣ್ಣಿಟ್ಟಿದೆ. ಹೀಗಾಗಿ ಕ್ಯಾನ್ಬೆರಾದ ಮನುಕಾ ಓವಲ್ ಸ್ಟೇಡಿಯಂನಲ್ಲಿ ಡಿಸೆಂಬರ್ 2ರಂದು ನಡೆಯಲಿರುವ 3ನೇ ಮತ್ತು ಕೊನೇಯ ಟಿ20ಐ ಪಂದ್ಯದ ವೇಳೆ ಭಾರತ ತಂಡದಲ್ಲಿ ಪ್ರಮುಖ ಬೌಲರ್‌ ಬದಲಾವಣೆಯಾಗುವ ನಿರೀಕ್ಷೆಯಿದೆ.

ಸ್ಟೀವ್ ಸ್ಮಿತ್ ವಿಕೆಟ್ ಪಡೆಯಲು ಟೀಮ್ ಇಂಡಿಯಾಗೆ ಹರ್ಭಜನ್ ಸಿಂಗ್ ಸಲಹೆಸ್ಟೀವ್ ಸ್ಮಿತ್ ವಿಕೆಟ್ ಪಡೆಯಲು ಟೀಮ್ ಇಂಡಿಯಾಗೆ ಹರ್ಭಜನ್ ಸಿಂಗ್ ಸಲಹೆ

ಆಸ್ಟ್ರೇಲಿಯಾ ವಿರುದ್ಧ ಒಂದು ವೇಳೆ ಟೀಮ್ ಇಂಡಿಯಾ 3-0ಯ ಅಂತರದಲ್ಲಿ ಏಕದಿನ ಸರಣಿ ಕಳೆದುಕೊಂಡರೆ ಈ ವರ್ಷ ಎರಡನೇ ಸಾರಿ ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡ ವೈಟ್ ವಾಷ್ ಆದಂತಾಗುತ್ತದೆ.

ಯುಎಸ್‌ ಟಿ20 ಲೀಗ್‌ನಲ್ಲೂ ಶಾರೂಕ್ ಫ್ರಾಂಚೈಸಿ: ಲಾಸ್‌ಏಂಜಲೀಸ್ ತಂಡದ ಮಾಲೀಕತ್ವಯುಎಸ್‌ ಟಿ20 ಲೀಗ್‌ನಲ್ಲೂ ಶಾರೂಕ್ ಫ್ರಾಂಚೈಸಿ: ಲಾಸ್‌ಏಂಜಲೀಸ್ ತಂಡದ ಮಾಲೀಕತ್ವ

2020ರ ಈ ವರ್ಷಾರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧವೂ ಭಾರತ ತಂಡ ಏಕದಿನ ಸರಣಿಯಲ್ಲಿ 3-0ಯ ಸೋಲು ಕಂಡಿತ್ತು.

ಬೌಲಿಂಗ್‌ನಲ್ಲಿ ಬದಲಾವಣೆ ನಿರೀಕ್ಷೆ

ಬೌಲಿಂಗ್‌ನಲ್ಲಿ ಬದಲಾವಣೆ ನಿರೀಕ್ಷೆ

ಪ್ರತಿಷ್ಠೆಗೋಸ್ಕರ ಪ್ರಮುಖವೆನಿಸಿರುವ ಕೊನೇಯ ಏಕದಿನ ಪಂದ್ಯದಲ್ಲಿ ಕೊಹ್ಲಿ ಪಡೆ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಮಾಡುವ ನಿರೀಕ್ಷೆಯಿದೆ. ಅಂತಾರಾಷ್ಟ್ರೀಯ ಪ್ರವಾಸ ಮಾಡಿದ್ದ ಭಾರತದ ವೇಗಿ ನವದೀಪ್ ಸೈನಿ ಮೊದಲೆರಡು ಪಂದ್ಯಗಳಲ್ಲಿ ತಂತ್ರಗಾರಿಕೆಯೇ ಇಲ್ಲದವರಂತೆ ಕಾಣಿಸಿದರು. ಹೀಗಾಗಿ ಸೈನಿ ಬದಲಾಯಿಸುವ ಸಾಧ್ಯತೆಯಿದೆ.

ಸೈನಿಯಿಂದ ದುಬಾರಿ ರನ್

ಸೈನಿಯಿಂದ ದುಬಾರಿ ರನ್

ದ್ವಿತೀಯ ಏಕದಿನ ಪಂದ್ಯದಲ್ಲಿ ನವದೀಪ್ ಸೈನಿ ದುಬಾರಿ ರನ್ ನೀಡಿದ್ದರು. ಏಳು ಓವರ್ ಎಸೆದಿದ್ದ ಸೈನಿ ಒಂದೂ ವಿಕೆಟ್ ಪಡೆಯದೆ 70 ರನ್‌ ನೀಡಿದ್ದರು. ಹೀಗಾಗಿ ಸೈನಿಗೆ 10 ಓವರ್‌ಗಳನ್ನು ನೀಡುವ ಬದಲು 1 ಓವರ್‌ ಅನ್ನು ಮಯಾಂಕ್ ಅಗರ್ವಾಲ್ ಎಸೆದಿದ್ದರು. ಇನ್ನು ಒಂದಿಷ್ಟು ಓವರ್‌ಗಳನ್ನು ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಎಸೆದಿದ್ದರು.

ಬದಲಾಗೋ ಬೌಲರ್ ಯಾರು?

ಬದಲಾಗೋ ಬೌಲರ್ ಯಾರು?

ಕೊನೇ ಏಕದಿನ ಪಂದ್ಯಕ್ಕೆ ಸೈನಿ ಬದಲಿಗೆ ಬೇರೆ ಬೌಲರ್‌ ಅನ್ನು ಕೊಹ್ಲಿ ಅವರು ತಂಡಕ್ಕೆ ಕರೆತರುವ ನಿರೀಕ್ಷೆ ಹೆಚ್ಚಿದೆ. ಒಂದೋ ಸುಮಾರು 27 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ವೇಗಿ ಶಾರ್ದೂಲ್ ಠಾಕೂರ್ ಅಥವಾ ಯಾರ್ಕರ್ ಸ್ಪೆಷಾಲಿಸ್ಟ್ ತಂಗರಾಸು ನಟರಾಜನ್ ಪ್ಲೇಯಿಂಗ್ XIನಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

ಬೂಮ್ರಾ ಕತೆಯೇನು?

ಬೂಮ್ರಾ ಕತೆಯೇನು?

ಟೀಮ್ ಇಂಡಿಯಾದ ಬಹು ನಿರೀಕ್ಷಿತ ವೇಗಿ ಜಸ್‌ಪ್ರೀತ್‌ ಬೂಮ್ರಾ ಕೂಡ ಈ ಸಾರಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಎರಡು ಏಕದಿನ ಪಂದ್ಯಗಳಲ್ಲಿ ಕೇವಲ 2 ವಿಕೆಟ್ ಪಡೆದಿದ್ದಾರೆ. ಅದೂ ಕೂಡ ಹೆಚ್ಚು ರನ್‌ಗಳನ್ನು ನೀಡಿ. ಆದರೆ ಬೂಮ್ರಾ ಮತ್ತು ಶಮಿ ತಂಡದ ಪ್ರಮುಖ ವೇಗಿಗಳಾಗಿರುವುದರಿಂದ ಇವರಲ್ಲಿ ಬದಲಾವಣೆ ಸಾಧ್ಯತೆ ಕಡಿಮೆಯಿದೆ.

Story first published: Tuesday, December 1, 2020, 16:36 [IST]
Other articles published on Dec 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X