ಭಾರತ vs ಆಸ್ಟ್ರೇಲಿಯಾ: 3rd ODI, ಸಂಭಾವ್ಯ ತಂಡ, ಹವಾಮಾನ ವರದಿ, ಪಿಚ್ ರಿಪೋರ್ಟ್

ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಏಕದಿನ ಪಂದ್ಯ ಡಿಸೆಂಬರ್ 2ನೇ ತಾರೀಕು ಬುಧವಾರ ನಡೆಯಲಿದೆ. ಮೊದಲೆರಡು ಪಂದ್ಯಗಳು ಸಿಡ್ನಿಯಲ್ಲಿ ನಡೆದಿದ್ದರೆ ಏಕದಿನ ಸರಣಿಯ ಅಂತಿಮ ಪಂದ್ಯಕ್ಕೆ ಕ್ಯಾನ್‌ಬೆರಾ ಆತಿಥ್ಯ ವಹಿಸಿಕೊಳ್ಳಲಿದೆ. ಆಸ್ಟ್ರೇಲಿಯಾ ಮೊದಲ ಎರಡು ಪಂದ್ಯಗಳನ್ನು ಭರ್ಜರಿಯಾಗಿ ಗೆದ್ದಿರುವ ಕಾರಣ ಈ ಪಂದ್ಯ ಕೇಲ ಔಪಚಾರಿಕ ಪಂದ್ಯವಾಗಿರಲಿದೆ. ಆದರೆ ವಯಟ್‌ವಾಶ್ ಅವಮಾನದಿಂದ ತಪ್ಪಿಸಿಕೊಳ್ಳಲು ಟೀಮ್ ಇಂಡಿಯಾ ಹರಸಾಹಸ ಪಡಲಿದೆ.

ಮೊದಲ ಎರಡು ಪಂದ್ಯಗಳಲ್ಲಿ ಭಾರತದ ಬೌಲಿಂಗ್ ವಿಭಾಗದ ಪ್ರದರ್ಶನ ನೀರಸವಾಗಿತ್ತು. ಜೊತೆ ಫೀಲ್ಡಿಂಗ್ ಕೂಡ ಉತ್ತಮವಾಗಿರಲಿಲ್ಲ. ಕೆಲ ಸುಲಭ ಕ್ಯಾಚ್ಗಗಳನ್ನು ಫೀಲ್ಡರ್‌ಗಳು ಕೈಚೆಲ್ಲಿದ್ದರು. ಬೌಂಡರಿ ತಡೆಯುವಲ್ಲೂ ವಿಫಲರಾಗಿದ್ದರು. ಇದು ತಂಡವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದ ಜೊತೆಗೆ ಆಸ್ಟ್ರೇಲಿಯಾ ಎರಡು ಪಂದ್ಯಗಳಲ್ಲಿ ಬೃಹತ್ ಮೊತ್ತವನ್ನು ಪೇರಿಸಲು ಕಾರಣವಾಯಿತು.

ಪ್ರೇಕ್ಷಕರ ಮುಂದೆ ಆಡಿದ್ದು, ಒಡಿಐ ಸರಣಿ ಗೆದ್ದಿದ್ದು ಖುಷಿ ನೀಡಿದೆ: ಫಿಂಚ್

ಇದೀಗ ಎರಡು ತಂಡಗಳು ಕೂಡ ಕ್ಯಾನ್ಬೆರಾಗೆ ಪ್ರಯಾಣವನ್ನು ಬೆಳೆಸಿದ್ದು ಮುಂದಿನ ಪಂದ್ಯದಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ವಿಶ್ವಾಸದಲ್ಲಿ ಟೀಮ್ ಇಂಡಿಯಾ ಇದೆ. ಈ ಮೂಲಕ ವೈಟ್‌ವಾಶ್ ಅವಮಾನದಿಂದ ತಪ್ಪಿಸಿಕೊಳ್ಳಬೇಕಿದೆ.

ಕ್ಯಾನ್‌ಬೆರಾ ಹವಾಮಾನ

ಕ್ಯಾನ್‌ಬೆರಾ ಹವಾಮಾನ

ಆಸ್ಟ್ರೇಲಿಯಾದ ರಾಜಧಾನಿಯಾಗಿರುವ ಕ್ಯಾನ್‌ಬೆರಾ ಅಂತಿಮ ಏಕದಿನ ಪಂದ್ಯಕ್ಕೆ ಆತಿಥ್ಯ ವಹಿಸಿಕೊಂಡಿದೆ. ಪಂದ್ಯ ನಡೆಯುವ ದಿನ ಅನುಕೂಲಕರ ವಾತಾವರಣವಿರಲಿದೆ. ಮಳೆ ಬರುವ ಪ್ರಮಾಣ ಶೇಕಡಾ 3ರಷ್ಟು ಮಾತ್ರವೇ ಇದೆ. 26 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಇರಲಿದೆ.

ಪಿಚ್ ರಿಪೋರ್ಟ್

ಪಿಚ್ ರಿಪೋರ್ಟ್

ಕ್ಯಾನ್‌ಬೆರಾದ ಮನುಕಾ ಓವಲ್‌ ಕಳೆದ ಕೆಲ ಪಂದ್ಯಗಳ ವರದಿಯನ್ನು ನೋಡಿದರೆ ಬ್ಯಾಟ್ಸ್‌ಮನ್‌ಗಳಿಗೆ ಪೂರಕವಾಗಿರಲಿದೆ. ಇದರ ಜೊತೆಗೆ ಸ್ಪಿನ್ನರ್‌ಗಳು ಹಾಗೂ ವೇಗಿಗಳಿಗೂ ಪೂರಕವಾಗಿ ವರ್ತಿಸಲಿದೆ. ಆದರೆ ಬೇಗನೆ ವಿಕೆಟ್ ಪಡೆಯಲು ವಿಫಲವಾದರೆ ಬೌಲರ್‌ಗಳ ಪಾಲಿಕೆ ಪಠಿಣವಾಗಿರಲಿದೆ.

ಸಂಭಾವ್ಯ ತಂಡ ಭಾರತ

ಸಂಭಾವ್ಯ ತಂಡ ಭಾರತ

ಶಿಖರ್ ಧವನ್, ಮಾಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ, ಯುಜ್ವೇಂದ್ರ ಚಾಹಲ್ ಮತ್ತು ನವದೀಪ್ ಸೈನಿ / ಶಾರ್ದುಲ್ ಠಾಕೂರ್

ಸಂಭಾವ್ಯ ತಂಡ ಆಸ್ಟ್ರೇಲಿಯಾ

ಸಂಭಾವ್ಯ ತಂಡ ಆಸ್ಟ್ರೇಲಿಯಾ

ಆರೋನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಮಾರ್ನಸ್ ಲ್ಯಾಬುಶೈನ್, ಗ್ಲೆನ್ ಮ್ಯಾಕ್ಸ್ ವೆಲ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಆಷ್ಟನ್ ಅಗರ್ / ಕ್ಯಾಮೆರಾನ್ ಗ್ರೀನ್, ಕೇನ್ ರಿಚರ್ಡ್ಸನ್, ಜೋಶ್ ಹ್ಯಾಜಲ್‌ವುಡ್, ಮಿಚೆಲ್ ಸ್ಟಾರ್ಕ್ ಮತ್ತು ಆಡಂ ಜಂಪಾ.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, December 1, 2020, 12:51 [IST]
Other articles published on Dec 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X