ಭಾರತ vs ಆಸ್ಟ್ರೇಲಿಯಾ, 3ನೇ ಟಿ20: ನಿರ್ಣಾಯಕ ಪಂದ್ಯಕ್ಕೆ ಅಡ್ಡಿಯಾಗಲಿದೆಯಾ ಮಳೆ?: ಕ್ರೀಡಾಂಗಣದ ಮಾಹಿತಿ

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಟಿ20 ಸರಣಿಯ ಅಂತಿಮ ಪಂದ್ಯ ಹೈದರಾಬಾದ್‌ನ ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿದೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿಯೂ ಸೋಲು ಅನುಭವಿಸಿದ್ದ ಭಾರತ ತಂಡ ಮಳೆಯಿಂದಾಗಿ ಅಡ್ಡಿಯುಂಟಾದ ಎರಡನೇ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿತು. ಇದರ ಪರಿಣಾಮವಾಗಿ ಟೀಮ್ ಇಂಡಿಯಾ ಸರಣಿಯಲ್ಲಿ ಸಮಬಲ ಸಾಧಿಸಲು ಸಾಧ್ಯವಾಗಿದೆ. ಇದೀಗ ಅಂತಿಮ ಪಂದ್ಯ ನಿರ್ಣಾಯಕವೆನಿಸಿದ್ದು ಕುತೂಹಲ ಮೂಡಿಸಿದೆ.

ಮೂರನೇ ಪಂದ್ಯ ಹೈದರಾಬಾದ್‌ನಲ್ಲಿ ನಡೆಯಲಿದ್ದು ಎರಡು ತಂಡಗಳು ಕೂಡ ಈ ಪಂದ್ಯಕ್ಕೆ ಸಂಪೂರ್ಣವಾಗಿ ಸಜ್ಜಾಗಿದೆ. ಹಾಗಾಗಿ ಈ ನಿರ್ಣಾಯಕ ಪಂದ್ಯ ನಡೆಯಲಿರುವ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದ ಅಂಕಿ ಅಂಶಗಳು ಏನು ಹೇಳುತ್ತವೆ? ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡಲಿದೆಯಾ? ಕುತೂಹಲ ಕಾರಿ ಮಾಹಿತಿಗಳನ್ನು ಮುಂದೆ ಓದಿ..

ಅಂತಿಮ ಪಂದ್ಯದ ಬಳಿಕ ಕಣ್ಣೀರಿಟ್ಟ ಟೆನಿಸ್ ಲೆಜೆಂಡ್ ರೋಜರ್ ಫೆಡರರ್: ಗೆಳೆಯನನ್ನು ಬೀಳ್ಕೊಟ್ಟ ರಾಫಾಅಂತಿಮ ಪಂದ್ಯದ ಬಳಿಕ ಕಣ್ಣೀರಿಟ್ಟ ಟೆನಿಸ್ ಲೆಜೆಂಡ್ ರೋಜರ್ ಫೆಡರರ್: ಗೆಳೆಯನನ್ನು ಬೀಳ್ಕೊಟ್ಟ ರಾಫಾ

ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಭಾರತದ ಟಿ20I ದಾಖಲೆ

ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಭಾರತದ ಟಿ20I ದಾಖಲೆ

ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಈವರೆಗೆ ಕೇವಲ ಒಂದು ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಮಾತ್ರವೇ ಆಡಿದೆ. 2019ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದಿದ್ದ ಈ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿತ್ತು. ಇದಕ್ಕೂ ಮುನ್ನ 2017ರಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಒಂದು ಚುಟುಕು ಸರಣಿಯನ್ನು ಆಯೋಜನೆ ಮಾಡಲಾಗಿತ್ತಾದರೂ ಈ ಪಂದ್ಯ ಮಳೆಯಿಂದಾಗಿ ರದ್ಧಾಗಿತ್ತು.

RGI ಸ್ಟೇಡಿಯಂನ ಟಿ20ಐ ಅಂಕಿಅಂಶಗಳು

RGI ಸ್ಟೇಡಿಯಂನ ಟಿ20ಐ ಅಂಕಿಅಂಶಗಳು

ಗರಿಷ್ಠ ಮೊತ್ತ: ಭಾರತ-209/4
ಕಡಿಮೆ ಮೊತ್ತ: ವೆಸ್ಟ್ ಇಂಡೀಸ್-207/5
ಅತಿ ಹೆಚ್ಚು ರನ್: ವಿರಾಟ್ ಕೊಹ್ಲಿ: 94
ಗರಿಷ್ಠ ಸ್ಕೋರ್: ವಿರಾಟ್ ಕೊಹ್ಲಿ: 94
ಅತಿ ಹೆಚ್ಚು ಸಿಕ್ಸರ್: ವಿರಾಟ್ ಕೊಹ್ಲಿ: 6
ಹೆಚ್ಚಿನ ವಿಕೆಟ್‌ಗಳು: ಯುಜುವೇಂದ್ರ ಚಾಹಲ್ ಹಾಗೂ ಕೆ ಪಿಯರ್: 2 ವಿಕೆಟ್
ಅತ್ಯುತ್ತಮ ಬೌಲಿಂಗ್: ಯುಜಿ ಚಹಾಲ್: 2/36
ಗರಿಷ್ಠ ಜೊತೆಯಾಟ: ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್: 100 ರನ್

ಹೈದರಾಬಾದ್ ಸ್ಟೇಡಿಯಂ ಪಿಚ್ ರಿಪೋರ್ಟ್

ಹೈದರಾಬಾದ್ ಸ್ಟೇಡಿಯಂ ಪಿಚ್ ರಿಪೋರ್ಟ್

ಇಲ್ಲಿ ಅನೇಕ ಐಪಿಎಲ್ ಪಂದ್ಯಗಳು ನಡೆದಿದ್ದು ಪಿಚ್ ನಿಧಾನವಾಗಿ ವರ್ತಿಸುವುದು ಸಾಮಾನ್ಯವಾಗಿದೆ. ಟಿ20 ಮಾದರಿಯಲ್ಲಿ ಈ ಕ್ರೀಡಾಂಗಣದಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 158 ಆಗಿದ್ದು ಎರಡನೇ ಇನ್ನಿಂಗ್ಸ್‌ನಲ್ಲಿ ಅದು 135 ರನ್‌ಗಳಿಗೆ ಇಳಿದಿದೆ. ಇನ್ನು ಐಪಿಎಲ್‌ನಲ್ಲಿ ಈ ಕ್ರೀಡಾಂಗಣದಲ್ಲಿ ಕೆಲ ಕನಿಷ್ಠ ಮೊತ್ತಗಳನ್ನು ಕೂಡ ರಕ್ಷಿಸಿರುವ ಪಂದ್ಯಗಳನ್ನು ಕೂಡ ನೋಡಿದ್ದೇವೆ. ಈ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ತಂಡ ಮೊದಲಿಗೆ ಬ್ಯಾಟಿಂಗ್ ನಡೆಸುವುದನ್ನು ಬಯಸುತ್ತದೆ. ಭಾನುವಾರ ನಡೆಯಲಿರುವ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡ 160-170 ರನ್‌ಗಳನ್ನು ಗಳಿಸಲು ಸಾಧ್ಯವಾದರೆ ಈ ಮೊತ್ತವನ್ನು ರಕ್ಷಿಸಿಕೊಳ್ಳುವ ಸಾಧ್ಯತೆಯಿದೆ.

ಹವಾಮಾನ ವರದಿ

ಹವಾಮಾನ ವರದಿ

ರಾಜೀವ್ ಗಾಂಧಿ ಸ್ಟೇಡಿಯಂನ ಸುತ್ತಮುತ್ತ ಭಾನುವಾರ ಮಳೆಯಾಗುವ ಸಾಧ್ಯತೆ ಶೇ.11ರಷ್ಟಿದೆ. ಮಳೆಯ ತೀವ್ರತೆ 0.7 ಮಿ.ಮೀ ಇದ್ದರೂ ಮಳೆಯ ಅವಧಿಯು ಕೇವಲ ಅರ್ಧ ಗಂಟೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ನಾಗ್ಪುರದಲ್ಲಿ ಉಂಟಾದಷ್ಟು ಪ್ರಮಾಣದ ಅಡ್ಡಿಯುಂಟಾಗುವ ಸಾಧ್ಯತೆಯಿಲ್ಲ. ರಾತ್ರಿಯಲ್ಲಿ 59 ಪ್ರತಿಶತದಷ್ಟು ಮೋಡದ ವಾತಾವರಣವಿದ್ದು ತಾಪಮಾನವು ಸುಮಾರು 22 ಡಿಗ್ರಿಗಳಷ್ಟು ಇರಲಿದೆ.

ಎರಡು ತಂಡಗಳ ಸಂಪೂರ್ಣ ಸ್ಕ್ವಾಡ್

ಎರಡು ತಂಡಗಳ ಸಂಪೂರ್ಣ ಸ್ಕ್ವಾಡ್

ಟೀಮ್ ಇಂಡಿಯಾ: ಕೆಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ರವಿಚಂದ್ರನ್ ಅಶ್ವಿನ್, ದೀಪಕ್ ಹೂಡಾ , ದೀಪಕ್ ಚಹಾರ್

ಆಸ್ಟ್ರೆಲಿಯಾ: ಆರೋನ್ ಫಿಂಚ್ (ನಾಯಕ), ಕ್ಯಾಮೆರಾನ್ ಗ್ರೀನ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಡೇನಿಯಲ್ ಸ್ಯಾಮ್ಸ್, ಶಾನ್ ಅಬಾಟ್, ಪ್ಯಾಟ್ ಕಮ್ಮಿನ್ಸ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್, ಜೋಶ್ ಇಂಗ್ಲಿಸ್, ನಾಥನ್ ಎಲ್ಲಿಸ್, ಕೇನ್ ರಿಚರ್ಡ್ಸನ್, ಆಷ್ಟನ್ ಅಗರ್

For Quick Alerts
ALLOW NOTIFICATIONS
For Daily Alerts
Story first published: Sunday, September 25, 2022, 8:46 [IST]
Other articles published on Sep 25, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X