ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ vs ಭಾರತ, ಟೆಸ್ಟ್: ಪೂಜಾರ ಶತಕ, ಭಾರತ 443ಕ್ಕೆ ಡಿಕ್ಲೇರ್

India Vs Australia, 3rd Test: Day 2 Live Updates: Hosts eye early wickets as Kohli reaches fifty

ಮೆಲ್ಬರ್ನ್, ಡಿಸೆಂಬರ್ 27: ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಭಾರತ vs ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಗುರುವಾರ (ಡಿಸೆಂಬರ್ 27) 2ನೇ ದಿನದಾಟದ ಅಂತ್ಯಕ್ಕೆ 169.4 ಓವರ್‌ಗೆ 7 ವಿಕೆಟ್ ಕಳೆದು 443 ರನ್ ಪೇರಿಸಿ ಡಿಕ್ಲೇರ್ ಘೋಷಿಸುವ ಮೂಲಕ ಇನ್ನಿಂಗ್ಸ್‌ ಮುಗಿಸಿದೆ. ಚೇತೇಶ್ವರ ಪೂಜಾರ ಅವರ ಅಮೋಘ ಆಟದ ನೆರವಿನಿಂದ ಭಾರತ ಉತ್ತಮ ಮೊತ್ತ ಕಲೆ ಹಾಕುವಲ್ಲಿ ಯಶಸ್ವಿಯಾಯಿತು. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ಗೆ ಇಳಿದಿದೆ.

ಪಂದ್ಯದ ಸ್ಕೋರ್ ಕಾರ್ಡ್

1
43625

ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ದಾಖಲೆ ಬರೆದ ಮಯಾಂಕ್ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ದಾಖಲೆ ಬರೆದ ಮಯಾಂಕ್

ಟಾಸ್‌ಗೆದ್ದು ಬ್ಯಾಟಿಂಗ್‌ಗೆ ಇಳಿದ ಭಾರತ, ಹನುಮ ವಿಹಾರಿ (8 ರನ್) ಅವರ ವಿಕೆಟ್ ಬೇಗನೆ ಕಳೆದುಕೊಂಡಿತಾದರೂ ಮಯಾಂಕ್ ಅಗರ್ವಾಲ್ (76), ಚೇತೇಶ್ವರ್ ಪೂಜಾರ (106), ವಿರಾಟ್ ಕೊಹ್ಲಿ (82), ಅಜಿಂಕ್ಯ ರಹಾನೆ (34), ರೋಹಿತ್ ಶರ್ಮಾ (63), ರಿಷಬ್ ಪಂತ್ (39) ಅವರ ಭರ್ಜರಿ ರನ್‌ ಬೆಂಬಲ ದೊರೆಯಿತು.

ಬಾಕ್ಸಿಂಗ್‌ ಡೇ ಟೆಸ್ಟ್: ದಾಖಲೆಯಲ್ಲಿ ದ್ರಾವಿಡ್ ಬೆನ್ನು ಹಿಡಿದ ಪೂಜಾರಾಬಾಕ್ಸಿಂಗ್‌ ಡೇ ಟೆಸ್ಟ್: ದಾಖಲೆಯಲ್ಲಿ ದ್ರಾವಿಡ್ ಬೆನ್ನು ಹಿಡಿದ ಪೂಜಾರಾ

ಆಕರ್ಷಕ ಬ್ಯಾಟಿಂಗ್‌ ಪ್ರದರ್ಶಿಸಿದ ಪೂಜಾರ ತನ್ನ 17ನೇ ಟೆಸ್ಟ್ ಶತಕ ಪೂರೈಸಿಕೊಂಡರು. ಭಾರತದ ಇನ್ನಿಂಗ್ಸ್‌ ವೇಳೆ ಆಸೀಸ್‌ನ ಪ್ಯಾಟ್ ಕಮಿನ್ಸ್ 3, ಮಿಚೆಲ್ ಸ್ಟಾರ್ಕ್ 2, ಜೋಶ್ ಹ್ಯಾಝೆಲ್ವುಡ್ ಮತ್ತು ನಾಥನ್ ಲಿಯಾನ್ ತಲಾ 1 ವಿಕೆಟ್ ಕೆಡವಿ ಬೌಲಿಂಗ್‌ ನಲ್ಲಿ ಗಮನ ಸೆಳೆದರು.

ಅಡಿಲೇಡ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 31ರನ್ ಗಳಿಂದ ಸೋಲಿಸಿದ ಭಾರತ, ಪರ್ತ್ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ 146ರನ್ ಗಳಿಂದ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು.

Story first published: Thursday, December 27, 2018, 16:52 [IST]
Other articles published on Dec 27, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X