ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: 3ನೇ ಟೆಸ್ಟ್‌ನಲ್ಲಿ ಮುರಿಯಬಲ್ಲ ಪ್ರಮುಖ 5 ದಾಖಲೆಗಳು

India vs australia: 5 Records could get broken in sydeny test

ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಎರಡು ಪಂದ್ಯಗಳು ಈಗ ಅಂತ್ಯವಾಗಿದ್ದು ಮೂರನೇ ಟೆಸ್ಟ್ ಪಂದ್ಯಕ್ಕೆ ದಿನಗಣನೆ ಆರಂಭವಾಗಿದೆ. ಭಾರತ ಹಾಗೂ ಆಸ್ಟ್ರೇಲಿಯಾ ಎರಡು ತಂಡಗಳು ಕೂಡ ಮೆಲ್ಬರ್ನ್‌ನಿಂದ ಸಿಡ್ನಿಗೆ ಸೋಮವಾರವೇ ಪ್ರಯಾಣವನ್ನು ಬೆಳೆಸಿದ್ದು ಅಲ್ಲಿ ಅಭ್ಯಾಸವನ್ನು ಆರಂಭಿಸಿದ್ದಾರೆ. ಸಮಬಲಗೊಂಡಿರುವ ಸರಣಿಯಲ್ಲಿ ಮೇಲು ಗೈ ಸಾಧಿಸಲು ಎರಡು ತಂಡಗಳು ಕೂಡ ತೀವ್ರ ಪೈಪೋಟಿಯನ್ನು ನೀಡಲಿದೆ.

ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾಗೆ ಇಬ್ಬರು ಅನುಭವಿ ಆರಂಭಿಕ ಆಟಗಾರರು ಕೂಡಿಕೊಂಡಿರುವುದು ಎರಡೂ ಕಡೆಗಳ ಹುಮ್ಮಸ್ಸು ಹೆಚ್ಚಿಸಿದೆ. ಡೇವಿಡ್ ವಾರ್ನರ್ ಮೂರನೇ ಟೆಸ್ಟ್‌ನಲ್ಲಿ ಆಸಿಸ್ ಪರವಾಗಿ ಕಣಕ್ಕಿಳಿಯುವ ಸಾಧ್ಯತೆಯಿದ್ದರೆ ರೋಹಿತ್ ಶರ್ಮಾ ಕೂಡ ಸಿಡ್ನಿ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಪರವಾಗಿ ಕಣಕ್ಕಿಳಿಯುವ ಸಂಭವವಿದೆ.

ಟೀಮ್ಇಂಡಿಯಾಗೆ ಮತ್ತೊಂದು ಆಘಾತ: ಟೆಸ್ಟ್ ಸರಣಿಯಿಂದ ಹೊರಬಿದ್ದ ಕೆಎಲ್ ರಾಹುಲ್ಟೀಮ್ಇಂಡಿಯಾಗೆ ಮತ್ತೊಂದು ಆಘಾತ: ಟೆಸ್ಟ್ ಸರಣಿಯಿಂದ ಹೊರಬಿದ್ದ ಕೆಎಲ್ ರಾಹುಲ್

ಮೂರನೇ ಟೆಸ್ಟ್ ಪಂದ್ಯದಲ್ಲಿ ಕೆಲ ಆಟಗಾರರು ಪ್ರಮುಖ ದಾಖಲೆಯನ್ನು ಹಾಗೂ ಮೈಲಿಗಲ್ಲನ್ನು ಸಾಧಿಸುವ ಸನಿಹದಲ್ಲಿದ್ದಾರೆ. ಅಂತಾ ಸಂಭಾವ್ಯ ಐದು ದಾಖಲೆಗಳು ಯಾವುದು ಎಂಬುದನ್ನು ನೋಡೋಣ.

ಚೇತೇಶ್ವರ್ ಪೂಜಾರ

ಚೇತೇಶ್ವರ್ ಪೂಜಾರ

ಟೀಮ್ ಇಂಡಿಯಾದ ಪ್ರಮುಖ ಟೆಸ್ಟ್ ಆಟಗಾರ ಚೇತೇಶ್ವರ್ ಪೂಜಾರ ಈ ಬಾರಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಪಂದ್ಯಗಳಲ್ಲಿ ನೀರಸ ಪ್ರದರ್ಶನವನ್ನು ನೀಡಿದ್ದಾರೆ. ಆದರೆ ಪುಜಾರ ಓರ್ವ ಶಾಸ್ತ್ರೀಯ ಆಟಗಾರನಾಗಿದ್ದು ಯಾವುದೇ ಕ್ಷಣದಲ್ಲೂ ತಂಡಕ್ಕೆ ನೆರವಾಗಬಲ್ಲ ಆಟಗಾರ. ಸಿಡ್ನಿ ಟೆಸ್ಟ್‌ನಲ್ಲಿ ಪೂಜಾರ 6000 ಟೆಸ್ಟ್ ರನ್ ಗಳಿಸುವ ಅವಕಾಶವಿದೆ. ಈ ಸಾಧನೆ ಮಾಡಲು ಪೂಜಾರ 97 ರನ್ ಗಳಿಸುವ ಅವಶ್ಯಕತೆಯಿದೆ. ಸಿಡ್ನಿಯ ಪಂದ್ಯದಲ್ಲಿ ಈ ಸಾಧನೆ ಮಾಡಿದ ವೇಗವಾಗಿ ಈ ಮೈಲಿಗಲ್ಲಿ ದಾಟಿದ 6ನೇ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ ಪೂಜಾರ.

ನಥನ್ ಲಿಯಾನ್

ನಥನ್ ಲಿಯಾನ್

ಆಸ್ಟ್ರೇಲಿಯಾ ಕ್ರಿಕೆಟ್ ತಮಡದ ಅನುಭವಿ ಸ್ಪಿನ್ನರ್ ನಥನ್ ಲಿಯನ್ ಕೂಡ ಮಹತ್ವದ ದಾಖಲೆಯೊಂದರ ಸನಿಹದಲ್ಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 400 ವಿಕೆಟ್ ಗಳಿಸಿದ ಆಟಗಾರರ ಪಟ್ಟಿಗೆ ಸೇರಲು ಲಿಯಾನ್‌ಗೆ ಕೇವಲ 6 ವಿಕೆಟ್‌ಗಳ ಅವಶ್ಯಕತೆಯಿದೆ. ಸಿಡ್ನಿ ಟೆಸ್ಟ್ ಪಂದ್ಯದ ಎರಡು ಇನ್ನಿಂಗ್ಸ್‌ಗಳಲ್ಲಿ ಈ ಆರು ಬಲಿ ಪಡೆದರೆ ಈ ಮೈಲಿಗಲ್ಲನ್ನು ಅವರು ಯಶಸ್ವಿಯಾಗಿ ಪೂರೈಸಲಿದ್ದಾರೆ.

ಅಜಿಂಕ್ಯ ರಹಾನೆ

ಅಜಿಂಕ್ಯ ರಹಾನೆ

ಆಸ್ಟ್ರೇಲಿಯಾ ತಂಡದ ವಿರುದ್ಧ ಮೂರು ಶತಕವನ್ನು ಬಾರಿಸಿದ ಸಾಧನೆಯನ್ನು ವೀರೇಂದ್ರ ಸೆಹ್ವಾಗ್ ಮಾಡಿದ್ದಾರೆ. ಈ ಸಾಧನೆಗೆ ಸಮನಾಗಿ ನಿಲ್ಲುವ ಅವಕಾಶವೀಗ ಟೀಮ್ ಇಂಡಿಯಾದ ಹಂಗಾಮಿ ನಾಯಕ ಅಜಿಂಕ್ಯ ರಹಾನೆಗೆ ಇದೆ. ರಹಾನೆ ಆಸಿಸ್ ವಿರುದ್ದ ಟೆಸ್ಟ್‌ನಲ್ಲಿ ಎರಡು ಶತಕವನ್ನು ಬಾರಿಸಿದ್ದಾರೆ. ಆ ಎರಡು ಕೂಡ ಮೆಲ್ಬರ್ನ್ ಅಂಗಳದಲ್ಲಿ ದಾಖಲಾಗಿದೆ. ಸಿಡ್ನಿ ಅಂಗಳಲ್ಲಿ ಮತ್ತೊಂದು ಶತಕ ದಾಖಲಾದರೆ ಆಸಿಸ್ ವಿರುದ್ಧ ಮೂರನೇ ಶತಕ ದಾಖಲಿಸಿದಂತಾಗುತ್ತದೆ. ಸೆಹ್ವಾಗ್ 3 ಶತಕವನ್ನು 22 ಪಂದ್ಯಗಳಲ್ಲಿ ದಾಖಲಿಸಿದರೆ ರಹಾನೆ 15 ಪಂದ್ಯಗಳಲ್ಲಿ ಎರಡು ಶತಕವನ್ನು ದಾಖಲಿಸಿದ್ದಾರೆ.

ಡೇವಿಡ್ ವಾರ್ನರ್

ಡೇವಿಡ್ ವಾರ್ನರ್

ಆಸ್ಟ್ರೇಲಿಯಾದ ಅಪಾಯಕಾರಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಮೂರನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತ. ಸಿಡ್ನಿ ಅಂಗಳ ಡೇವಿಡ್ ವಾರ್ನರ್‌ಗೆ ನೆಚ್ಚಿನ ಕ್ರೀಡಾಂಗಣವಾಗಿದ್ದು ಆಡಿರುವ 8 ಪಂದ್ಯಗಳಲ್ಲಿ 732 ರನ್ ದಾಖಲಿಸಿದ್ದಾರೆ. 66.54ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿರುವ ವಾರ್ನರ್ 4 ಶತಕವನ್ನು ದಾಖಲಿಸಿದ್ದಾರೆ. ಮುಂದಿನ ಪಂದ್ಯದಲ್ಲಿ ಒಂದು ಶತಕವನ್ನು ದಾಖಲಿಸಿದರೆ ಡೇವಿಡ್ ಬೂನ್ ಹಾಗೂ ಗ್ರೆಗ್ ಚಾಪೆಲ್ ಹೆಸರಿನಲ್ಲಿರುವ ಒಂದೇ ಅಂಗಳದಲ್ಲಿ ಅತಿ ಹೆಚ್ಚು ಶತಕ ದಾಖಲಿಸಿದ ಸಾಧನೆಯನ್ನು ವಾರ್ನರ್ ಮೀರಿ ನಿಲ್ಲಲಿದ್ದಾರೆ.

ರೋಹಿತ್ ಶರ್ಮಾ

ರೋಹಿತ್ ಶರ್ಮಾ

ಟೀಮ್ ಇಂಡಿಯಾದ ಅನುಭವಿ ಆಟಗಾರ ರೋಹಿತ್ ಶರ್ಮಾ ಮೂರನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಲ್ಲಿ ಅಪರೂಪದ ಮೈಲಿಗಲ್ಲೊಂದನ್ನು ಸಾಧಿಸುವ ಸಾಧ್ಯತೆಯಿದೆ. ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 100 ಸಿಕ್ಸರ್(ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ) ಸಿಡಿಸುವ ಅವಕಾಶ ರೋಹಿತ್ ಶರ್ಮಾ ಮುಂದಿದೆ. ಆಸಿಸ್ ವಿರುದ್ಧ ಎಲ್ಲಾ ಮಾದರಿಗಳಲ್ಲಿ 64 ಪಂದ್ಯಗಳನ್ನು ಆಡಿರುವ ಶರ್ಮಾ 99 ಸಿಕ್ಸರ್ ಸಿಡಿಸಿದ್ದಾರೆ.

Story first published: Tuesday, January 5, 2021, 10:59 [IST]
Other articles published on Jan 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X