ಭಾರತ vs ಆಸೀಸ್: ಕಾಕತಾಳೀಯ, ಕುತೂಹಲಕಾರಿ ಅಂಕಿ-ಅಂಶಗಳು!

ಬೆಂಗಳೂರು: ಕ್ರಿಕೆಟ್ ಎಂದರೆ ಅದು ಅಂಕಿ-ಅಂಶಗಳೊಂದಿಗೆ ನಡೆಯುವ ಕುತೂಹಲಕಾರಿ ಕದನ. ಕ್ರಿಕೆಟ್ ರಂಗದಲ್ಲಿ ಎಷ್ಟೋ ದಾಖಲೆಗಳು ನಿರ್ಮಾಣವಾಗಿದ್ದಿದೆ. ದಾಖಲೆಗಳಲ್ಲಿ ಒಳ್ಳೆಯ ದಾಖಲೆಗಳು ಮತ್ತು ಕೆಟ್ಟ ದಾಖಲೆಗಳು ಎರಡೂ ಇರುತ್ತವೆ. ದಾಖಲೆಗಳಷ್ಟೇ ಅಲ್ಲ; ಕೇಳುವಾಗ ಅಚ್ಚರಿ ಅನ್ನಿಸುವಂತ ಸಂಗತಿಗಳೂ ಕ್ರಿಕೆಟ್‌ ಅಂಗಣದಲ್ಲಿ ಆಗಾಗ ನಡೆಯುತ್ತಿರುತ್ತವೆ. ಇತ್ತೀಚೆಗೆ ಮುಕ್ತಾಯಗೊಂಡಿರುವ ಭಾರತ vs ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲೂ ಕುತೂಹಲಕಾರಿ ಸಂಗತಿಗಳು ನಡೆದಿದ್ದವು.

ಟೀಮ್ ಇಂಡಿಯಾ vs ಇಂಗ್ಲೆಂಡ್ 2021: ಸಂಪೂರ್ಣ ವೇಳಾಪಟ್ಟಿ, ಪಂದ್ಯದ ಸ್ಥಳ ಹಾಗೂ ತಂಡ

ಮುಖ್ಯವಾಗಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಆರಂಭಿಕ ಪಂದ್ಯದಲ್ಲಿ ಹೀನಾಯವಾಗಿ ಸೋತಿದ್ದ ಟೀಮ್ ಇಂಡಿಯಾ ಆ ಬಳಿಕ ಸೆಣಿಯನ್ನು ವಶಪಡಿಸಿಕೊಂಡ ರೀತಿಯೇ ಒಂದು ಕೌತುಕ ಅನ್ನಿಸಿತ್ತು. ಭಾರತದ ಹೆಸರಿನಲ್ಲಿ ದಾಖಲೆಯೂ ನಿರ್ಮಾಣವಾಗಿತ್ತು.

ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ: ನಾಕೌಟ್ ಪಂದ್ಯಗಳ ವೇಳಾಪಟ್ಟಿ

ಭಾರತ vs ಆಸ್ಟ್ರೇಲಿಯಾ 2020-2021ರ ಸರಣಿಯ ವೇಳೆ ನಡೆದ ಕೆಲ ಕುತೂಹಲಕಾರಿ ಸಂಗತಿಗಳು ಮತ್ತು ಕಾಕತಾಳೀಯ ಸಂಗತಿಗಳ ಮಾಹಿತಿ ಇಲ್ಲಿದೆ.

1. ಏಕದಿನ ಸರಣಿ vs ಟಿ20

1. ಏಕದಿನ ಸರಣಿ vs ಟಿ20

ಭಾರತ-ಆಸ್ಟ್ರೇಲಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-1ರಿಂದ ಆಸ್ಟ್ರೇಲಿಯಾ ಗೆದ್ದಿತ್ತು. ಅದೇ ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ಭಾರತ 2-1ರಿಂದ ಗೆದ್ದು ಸೇಡು ತೀರಿಸಿಕೊಂಡಿತ್ತು. ಏಕದಿನ ಸರಣಿಯಲ್ಲಿ ಭಾರತ ವೈಟ್‌ವಾಷ್ ಅನುಭವಿಸಲಿದೆ ಎಂಬ ರೀತಿಯಲ್ಲಿತ್ತು. ಆದರೆ ಭಾರತ ಕೊನೇ ಪಂದ್ಯದಲ್ಲಿ ಗೆದ್ದಿತ್ತು. ಟಿ20ಐನಲ್ಲಿ ಆಸೀಸ್ ವೈಟ್‌ವಾಷ್ ಭೀತಿ ಅನುಭವಿಸಿತ್ತು. ಆದರೆ ಕೊನೇ ಪಂದ್ಯ ಗೆದ್ದು ವೈಟ್‌ವಾಷ್‌ನಿಂದ ತಪ್ಪಿಸಿಕೊಂಡಿತ್ತು.

2. ಟೆಸ್ಟ್ ಅಂಕಿ-ಅಂಶಗಳು

2. ಟೆಸ್ಟ್ ಅಂಕಿ-ಅಂಶಗಳು

* ಟೆಸ್ಟ್ ಸರಣಿಯಲ್ಲಿ 4 ಪಂದ್ಯಗಳನ್ನಾಡಿದ್ದ ಭಾರತದ ಚೇತೇಶ್ವರ ಪೂಜಾರ 271 ರನ್ ಗಳಿಸಿದ್ದರು. ಈ ರನ್‌ಗಾಗಿ ಪೂಜಾರ ಬರೋಬ್ಬರಿ 928 ಎಸೆತ ಎದುರಿಸಿದ್ದರು.

* ಆರಂಭಿಕ ಟೆಸ್ಟ್‌ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ 36 ರನ್‌ಗೆ ಇನ್ನಿಂಗ್ಸ್‌ ಮುಗಿಸಿ ಮುಖಭಂಗ ಅನುಭವಿಸಿತ್ತು. ಈ ಕೆಟ್ಟ ದಾಖಲೆ ನಿರ್ಮಾಣವಾಗಿದ್ದು 2020 ಡಿಸೆಂಬರ್ 19ರಂದು. ಅದಾಗಿ ನಾಲ್ಕನೇ ಟೆಸ್ಟ್‌ನಲ್ಲಿ ಭಾರತ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಅಂದರೆ, ಗಬ್ಬಾ ಸ್ಟೇಡಿಯಂನಲ್ಲಿ ಭಾರತ ಗೆದ್ದಿದ್ದು 32 ವರ್ಷಗಳ ಬಳಿಕ. ಈ ಗೆಲುವು ಸಿಕ್ಕಿದ್ದು ಜನವರಿ 19ನೇ ತಾರೀಖಿನಂದು.

3. ಬಲಿಷ್ಠ vs ಅತೀ ದುರ್ಬಲ ತಂಡ

3. ಬಲಿಷ್ಠ vs ಅತೀ ದುರ್ಬಲ ತಂಡ

* ಭಾರತ-ಆಸ್ಟ್ರೇಲಿಯಾ ಸರಣಿ 1-1ರಿಂದ ಸಮಬಲಗೊಂಡಿತ್ತು. ಸರಣಿ ವಿಜೇತರನ್ನು ನಿರ್ಧರಿಸಲಿದ್ದ 4ನೇ ಟೆಸ್ಟ್‌ಗೂ ಮುನ್ನ ಪ್ರಕಟವಾದ ಭಾರತ ಮತ್ತು ಆಸ್ಟ್ರೇಲಿಯಾ ಪ್ಲೇಯಿಂಗ್ XIಗೆ ಅಜಗಜಾಂತರ ವ್ಯತ್ಯಾಸವಿತ್ತು. ಆಸ್ಟ್ರೇಲಿಯಾದ್ದು ಬಲಿಷ್ಠ ಪ್ಲೇಯಿಂಗ್ XI ಆಗಿದ್ದರೆ, ಭಾರತದ್ದು ಅತೀ ದುರ್ಬಲ ಪ್ಲೇಯಿಂಗ್ XI ಆಗಿತ್ತು!.

* 4ನೇ ಟೆಸ್ಟ್‌ಗೆ ಆಸ್ಟ್ರೇಲಿಯಾ ಪ್ಲೇಯಿಂಗ್ XI: 504 ಪಂದ್ಯಗಳು, 23,767 ರನ್‌ಗಳು, 1,046 ವಿಕೆಟ್‌ಗಳು | * 4ನೇ ಟೆಸ್ಟ್‌ಗೆ ಭಾರತ ಪ್ಲೇಯಿಂಗ್ ‍XI: 215 ಪಂದ್ಯಗಳು, 14,814 ರನ್, 13 ವಿಕೆಟ್‌ಗಳು.

* ವಿಚಿತ್ರವೆಂದರೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತದ ಪ್ಲೇಯಿಂಗ್ XI ಪ್ರತೀ ಪಂದ್ಯಕ್ಕೂ ಬದಲಾಗುತ್ತಿತ್ತು. ಭಾರತ ಪರ ಎಲ್ಲಾ ನಾಲ್ಕು ಪಂದ್ಯಗಲ್ಲಿ ಆಡಿದ್ದವರೆಂದರೆ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಇಬ್ಬರೇ.

4. ಒಂದೇ ದಿನ 2 ದಾಖಲೆಗಳು

4. ಒಂದೇ ದಿನ 2 ದಾಖಲೆಗಳು

2016ರಲ್ಲಿ ಭಾರತಕ್ಕೆ ಪ್ರವಾಸ ಬಂದಿದ್ದ ಇಂಗ್ಲೆಂಡ್ ತಂಡ ಚೆನ್ನೈನಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ಹೀನಾಯ ಸೋಲು ಕಂಡಿತ್ತು. ಅಂದು ವಿರಾಟ್ ಕೊಹ್ಲಿ ಪಡೆ ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಕಳೆದು 759 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತ್ತು. ಈಗಲೂ ಟೆಸ್ಟ್‌ ಇನ್ನಿಂಗ್ಸ್‌ ಒಂದರಲ್ಲಿ ಭಾರತ ನಿರ್ಮಿಸಿದ ಅತ್ಯಧಿಕ ಟೋಟಲ್ ಆಗಿ ಈ ಸ್ಕೋರ್‌ ದಾಖಲೆಯಾಗಿ ಉಳಿದಿದೆ. ಈ ದಾಖಲೆ ನಿರ್ಮಾಣವಾಗಿದ್ದು 2016 ಡಿಸೆಂಬರ್ 19ರಂದು. ಅಂದಿನ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್‌ ಸಹಿತ 75 ರನ್ ಜಯ ದಾಖಲಿಸಿತ್ತು. ಆದರೆ ಅದಾಗಿ 4 ವರ್ಷಗಳ ಬಳಿಕ, ಅಂದರೆ 2020ರಂದು ಡಿಸೆಂಬರ್ 19ರಂದೇ ಕೊಹ್ಲಿ ಪಡೆ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೇವಲ 36 ರನ್ ಬಾರಿಸಿ ಕೆಟ್ಟ ದಾಖಲೆ ನಿರ್ಮಿಸಿತ್ತು. ಇನ್ನಿಂಗ್ಸ್‌ನಲ್ಲಿ ಭಾರತ ಅತ್ಯಧಿಕ ರನ್ ಬಾರಿಸಿದ್ದು ಮತ್ತು ಅತೀ ಕಡಿಮೆ ರನ್ ಬಾರಿಸಿದ್ದು ಎರಡೂ ಒಂದೇ ದಿನ; ಅದು ಡಿಸೆಂಬರ್ 19ರಂದು!.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, January 22, 2021, 23:29 [IST]
Other articles published on Jan 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X