ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾದ ರೆಟ್ರೋ ಜೆರ್ಸಿ vs ಆಸ್ಟ್ರೇಲಿಯಾದ ಇಂಡಿಜೆನಸ್ ಜೆರ್ಸಿ

India vs Australia: Aussie indigenous jersey up against Indian retro shirt

ಸಿಡ್ನಿ: ಬಹು ನಿರೀಕ್ಷಿತ ಭಾರತ vs ಆಸ್ಟ್ರೇಲಿಯಾ ಸರಣಿ ಇನ್ನಷ್ಟು ರಂಗೇರಿದೆ. ಇತ್ತಂಡಗಳ ಸರಣಿ ವೇಳೆ ಆತಿಥೇಯ ಆಸ್ಟ್ರೇಲಿಯಾ ಮತ್ತು ಪ್ರವಾಸಿ ಭಾರತ ತಂಡಗಳು ವಿಭಿನ್ನ ಮತ್ತು ರಂಗಿನ ಜೆರ್ಸಿಯಿಂದ ಗಮನ ಸೆಳೆಯಲಿವೆ. ಭಾರತ ತಂಡ ರೆಟ್ರೋ ಜೆರ್ಸಿ ಬಿಡುಗಡೆ ಮಾಡಿದ್ದರೆ, ಆಸ್ಟ್ರೇಲಿಯಾ ತಂಡ ಇಂಡಿಜೆಸನ್ ಜೆರ್ಸಿ ಹೊರ ತಂದಿದೆ.

ಭಾರತ vs ಆಸ್ಟ್ರೇಲಿಯಾ ಸರಣಿಗಳನ್ನು ಉಚಿತವಾಗಿ ನೋಡೋದು ಹೇಗೆ?ಭಾರತ vs ಆಸ್ಟ್ರೇಲಿಯಾ ಸರಣಿಗಳನ್ನು ಉಚಿತವಾಗಿ ನೋಡೋದು ಹೇಗೆ?

1992ರ ವಿಶ್ವಕಪ್‌ ವೇಳೆಯ ಭಾರತ ತಂಡವನ್ನು ನೆನಪಿಸುವ ಸಲುವಾಗಿ ಆವತ್ತಿನ ತಂಡ ಧರಿಸಿದ್ದ ಅದೇ ರೀತಿಯ ಜೆರ್ಸಿ ಧರಿಸಿ ಭಾರತೀಯ ಆಟಗಾರರು ಮೈದಾನಕ್ಕಿಳಿಯಲಿದ್ದಾರೆ. ಲಿಮಿಟೆಡ್ ಓವರ್‌ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಈ ಬಣ್ಣದ ಜೆರ್ಸಿ ಧರಿಸಲಿದೆ.

ಆಸ್ಟ್ರೇಲಿಯಾ ಆಟಗಾರರು ಟಿ20 ವೇಳೆ ಇಂಡಿಜೆನಸ್ ಜೆರ್ಸಿ ಧರಿಸಲಿದ್ದಾರೆ. ಕ್ರೀಡೆಯಲ್ಲಿ ಆಸ್ಟ್ರೇಲಿಯಾದ ಸ್ಥಳೀಯ ಸಾಂಪ್ರದಾಯಿಕ ಜನರ ಕೊಡುಗೆಯನ್ನು ಗುರುತಿಸುವ ಮತ್ತು ಬೆಂಬಲಿಸುವ ಉದ್ದೇಶದಿಂದ ಕಾಂಗರೂ ಬಳಗ ವಿಭಿನ್ನ ಜೆರ್ಸಿಯಲ್ಲಿ ಆಡುವ ನಿರ್ಧಾರ ತಾಳಿದೆ.

ನವೆಂಬರ್ 27: ಒಂದಲ್ಲ ಎರಡಲ್ಲ.. ಮೂರು ಜಿದ್ದಾಜಿದ್ದಿನ ಕ್ರಿಕೆಟ್ ಪಂದ್ಯಗಳುನವೆಂಬರ್ 27: ಒಂದಲ್ಲ ಎರಡಲ್ಲ.. ಮೂರು ಜಿದ್ದಾಜಿದ್ದಿನ ಕ್ರಿಕೆಟ್ ಪಂದ್ಯಗಳು

ಆಸ್ಟ್ರೇಲಿಯಾದ ವಿಭಿನ್ನ ಜೆರ್ಸಿಯ ವಿನ್ಯಾಸ, ಆಸೀಸ್ ಜೆರ್ಸಿ ಉತ್ಪಾದಕರು ಮತ್ತು ಇಬ್ಬರು ಇಂಡಿಜಿನಸ್ ಮಹಿಳೆಯರ ಕೊಡುಗೆ. ಆಂಟಿ ಫಿಯೋನಾ ಕ್ಲಾರ್ಕ್ ಮತ್ತು ಕರ್ಟ್ನಿ ಹೇಜಸ್ ಸಲಹೆಯ ಮೇರೆಗೆ ಆಸೀಸ್ ಜೆರ್ಸಿ ಉತ್ಪಾದಕರು ಶರ್ಟ್ ವಿನ್ಯಾಸಗೊಳಿಸಿದ್ದಾರೆ. ಬಹು ನಿರೀಕ್ಷಿತ ಭಾರತ-ಆಸ್ಟ್ರೇಲಿಯಾ ಸರಣಿಗಳು ನವೆಂಬರ್ 27ರಿಂದ ಆರಂಭಗೊಳ್ಳಲಿವೆ.

Story first published: Thursday, November 26, 2020, 18:23 [IST]
Other articles published on Nov 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X