ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾದ ಸ್ಪಿನ್ ಗುಣಮಟ್ಟಕ್ಕೆ ಬೆರಗು ವ್ಯಕ್ತಪಡಿಸಿದ ಆಸಿಸ್ ಯುವ ಆಟಗಾರ

 India vs Australia: Cameron Green is astounded by quality of team india spinners

ಕ್ಯಾಮರೂನ್ ಗ್ರೀನ್ ಭಾರತ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಭಾರತದ ಪರವಾಗಿ ಕಣಕ್ಕಿಳಿಯುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆಯನ್ನು ಮಾಡಿದ ಯುವ ಕ್ರಿಕೆಟಿಗ. ಅಂಗಳದಲ್ಲಿ ನರ್ವಸ್ ಆಗಿದ್ದ ವೇಳೆ ರಾಹುಲ್ ಸ್ಪೂರ್ತಿಯ ಮಾತುಗಳನ್ನು ಹೇಳಿ ಹುರಿದುಂಬಿಸಿದ್ದರು ಎಂದು ತಿಳಿಸಿದ್ದರು. ಈಗ ಟೀಮ್ ಇಂಡಿಯಾದ ಸ್ಪಿನ್ ವಿಭಾಗ ಗುಣಮಟ್ಟದ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ.

ಭಾರತದ ಸ್ಪಿನ್ ಬೌಲಿಂಗ್ ದಾಳಿಯ ಗುಣಮಟ್ಟದ ಬಗ್ಗೆ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಬೆರಗು ವ್ಯಕ್ತಪಡಿಸಿದ್ದಾರೆ. ಅಂಗಳದಲ್ಲಿನ ಅನುಭವವನ್ನು ಪಡೆಯದ ಹೊರತು ಅದಕ್ಕೂ ಮುನ್ನ ಸಡೆಸುವ ಯಾವುದೇ ಪೂರ್ವಸಿದ್ದತೆಗಳು ಸಂಪೂರ್ಣ ಅನುಭವವನ್ನು ನೀಡುವುದಿಲ್ಲ ಎಂದು ಗ್ರೀನ್ ಹೇಳಿದ್ದಾರೆ.

ಕೊಹ್ಲಿ ನಾಯಕತ್ವದಲ್ಲಿ ನಟರಾಜನ್ ಚೆನ್ನಾಗಿ ಆಡ್ತಾರೆ: ಕರ್ಸನ್ ಘವ್ರಿಕೊಹ್ಲಿ ನಾಯಕತ್ವದಲ್ಲಿ ನಟರಾಜನ್ ಚೆನ್ನಾಗಿ ಆಡ್ತಾರೆ: ಕರ್ಸನ್ ಘವ್ರಿ

"ನಾನು ಎದುರಿಸಿದ ಅವರ ಸ್ಪಿನ್ನರ್‌ಗಳ ಗುಣಮಟ್ಟ ಆ ಮಟ್ಟದಲ್ಲಿ ಇದೆ ಎಂದು ಕ್ಯಾಮರೂನ್ ಗ್ರೀನ್ ಕ್ರಿಕೆಟ್.ಕಾಮ್.ಎಯು ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಅಂತಿಮ ಏಕದಿನ ಪಂದ್ಯದಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಗ್ರೀನ್ 21 ರನ್ ಗಳಿಸಿ ಕುಲ್‌ದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದ್ದರು.

ಜಡೇಜಾ ಓರ್ವ ಅದ್ಭುತವಾದ ಬೌಲರ್. ತಾನು ಏನು ಮಾಡಬೇಕೆಂದು ಅವರಿಗೆ ತುಂಬಾ ಚೆನ್ನಾಗಿ ತಿಳಿದಿದೆ. ವಿಭಿನ್ನವಾಗಿ ಅವರು ಬೌಲಿಂಗ್ ನಡೆಸುತ್ತಾರೆ. ನೀವು ಅವರ ಬೌಲಿಂಗ್ ಡದುರಸುವ ಮುನ್ನ ಎಷ್ಟೇ ಬಾರಿ ವಿಡಿಯೋಗಳನ್ನು ವೀಕ್ಷಿಸುತ್ತಾ ತಯಾರಿ ನಡೆಸಿದರೂ ಅಂಗಳದಲ್ಲಿ ಅವರ ದಾಳಿಯನ್ನು ಅಂದಾಜಿಸಲು ಸಾಧ್ಯವಿಲ್ಲ ಎಂದು ಭಾರತೀಯ ಸ್ಪಿನ್ ಬೌಲಿಂಗ್ ವಿಭಾಗದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು.

ಟಿ20ಯಲ್ಲಿ ಆಸ್ಟ್ರೇಲಿಯಾಕ್ಕೆ ಭಾರತ ಕಠಿಣ ಸವಾಲೊಡ್ಡುವ ನಿರೀಕ್ಷೆಟಿ20ಯಲ್ಲಿ ಆಸ್ಟ್ರೇಲಿಯಾಕ್ಕೆ ಭಾರತ ಕಠಿಣ ಸವಾಲೊಡ್ಡುವ ನಿರೀಕ್ಷೆ

ಇನ್ನು ಅಂತಿಮ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಕ್ಯಾಮರೂನ್ ಗ್ರೀನ್ ಕೈಗೆ ಆಸಿಸ್ ನಾಯಕ ಆರೋನ್ ಫಿಂಚ್ ಚೆಂಡು ನೀಡಿದ್ದರು. ಈ ಸಂದರ್ಭದಲ್ಲಿ ಎರಡು ಎಸೆತಗಳನ್ನು ವಿರಾಟ್ ಕೊಹ್ಲಿ ಬೀಟ್ ಮಾಡುವಂತೆ ಮಾಡಿ ನಾಯಕನನ್ನು ಮೆಚ್ಚಿಸಿದ್ದರು ಗ್ರೀನ್.

Story first published: Friday, December 4, 2020, 10:58 [IST]
Other articles published on Dec 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X