ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗಾಬಾ ಟೆಸ್ಟ್: ಆಸ್ಟ್ರೇಲಿಯಾದ 32 ವರ್ಷಗಳ ಸೋಲಿಲ್ಲದ ದಾಖಲೆಗೆ ಅಡ್ಡಿಯಾಗುತ್ತಾ ರಹಾನೆ ಪಡೆ

India vs Australia: Can india break australia record at Gabba

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ಅಂತಿಮ ಘಟ್ಟಕ್ಕೆ ತಪುಪಿದ್ದು ಶುಕ್ರವಾರದಿಂದ ಬ್ರಿಸ್ಬೇನ್‌ನ ಗಾಬಾ ಕ್ರೀಡಾಂಗಣದಲ್ಲಿ ಸರಣಿಯ ಅಂತಿಮ ಪಂದ್ಯ ಆರಂಭವಾಗಲಿದೆ. ಸರಣಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಎರಡೂ ತಂಡಗಳು 1-1 ಅಂತರದಿಂದ ಸರಣಿಯನ್ನು ಸಮಬಲ ಮಾಡಿಕೊಂಡಿದ್ದು ಗಾಬಾ ಅಂಗಳದಲ್ಲಿ ನಡೆಯುವ ಟೆಸ್ಟ್ ಪಂದ್ಯದ ಫಲಿತಾಂಶ ಸರಣಿಯನ್ನು ನಿರ್ಣಯಿಸಲಿದೆ.

ಪ್ರವಾಸಿ ತಂಡವಾಗಿರುವ ಟೀಮ್ ಇಂಡಿಯಾ ಆಟಗಾರರು ಸರಣಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಗಾಯಗೊಂಡಿದ್ದಾರೆ. ಟೀಮ್ ಇಂಡಿಯಾದ ಹಲವಾರು ಆಟಗಾರರ ಸೇವೆ ಅಂತಿಮ ಪಂದ್ಯದಲ್ಲಿ ಲಭ್ಯವಿರುವುದಿಲ್ಲ. ಸಿಡ್ನಿ ಟೆಸ್ಟ್‌ನಲ್ಲಿ ಕಣಕ್ಕಿಳಿದಿದ್ದ ರವೀಂದ್ರ ಜಡೇಜಾ ಹಾಗೂ ಹನುಮ ವಿಹಾರಿ ಹೊರಗುಳಿಯುವುದು ಪಕ್ಕಾ ಆಗಿದ್ದರೆ ವೇಗಿ ಜಸ್ಪ್ರೀತ್ ಬೂಮ್ರಾ ಕೂಡ ಕಾಯಗೊಂಡಿರುವುದು ಅವರ ಲಭ್ಯತೆಯ ಬಗ್ಗೆ ಖಚಿತವಿಲ್ಲ.

ಗಾಯದ ಸಮಸ್ಯೆಗೆ ಐಪಿಎಲ್ ದೂರಿದ ಆಸೀಸ್ ಕೋಚ್ ಜಸ್ಟಿನ್ ಲ್ಯಾಂಗರ್ಗಾಯದ ಸಮಸ್ಯೆಗೆ ಐಪಿಎಲ್ ದೂರಿದ ಆಸೀಸ್ ಕೋಚ್ ಜಸ್ಟಿನ್ ಲ್ಯಾಂಗರ್

ಈ ಮಧ್ಯೆ ನಿರ್ಣಾಯಕ ಪಂದ್ಯ ನಡೆಯುತ್ತಿರುವ ಗಾಬಾ ಅಂಗಳ ಆಸ್ಟ್ರೇಲಿಯಾ ಪಾಲಿಗೆ ಅತ್ಯಂತ ನೆಚ್ಚಿನ ತಾಣ. ಮೂರು ದಶಕಗಳಿಂದ ಈ ಅಂಗಳದಲ್ಲಿ ಆಸ್ಟ್ರೇಲಿಯಾ ಸೋಲಿನ ರುಚಿಯನ್ನೇ ಕಾಣದಿರುವುದು ಆಸ್ಟ್ರೇಲಿಯಾ ತಂಡದ ಹುಮ್ಮಸ್ಸನ್ನು ಹೆಚ್ಚಿಸಿದೆ.

ಗಾಬಾದಲ್ಲಿ ಆಸಿಸ್ ಅಸಾಧಾರಣ ದಾಖಲೆ

ಗಾಬಾದಲ್ಲಿ ಆಸಿಸ್ ಅಸಾಧಾರಣ ದಾಖಲೆ

ಬ್ರಿಸ್ಬೇನ್‌ನ ಗಾಬಾ ಅಂಗಳವೆಂದರೆ ಆಸ್ಟ್ರೇಲಿಯಾಗೆ ಸಾಧಾರಣ ಕ್ರೀಡಾಂಗಣವಲ್ಲ. ಅದು ಅತ್ಯಂತ ನೆಚ್ಚಿನ ತಾಣವಾಗಿದೆ. ಇಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸುವುದು ಎದುರಾಳಿ ತಂಡಗಳಿಗೆ ಕಳೆದ ಮೂರು ದಶಕಗಳಿಂದ ಕನಸಾಗಿಯೇ ಉಳಿದಿದೆ. ಹೀಗಾಗಿ ಗಾಬಾ ಅಂಗಳ ಆಸಿಸ್ ಪಾಲಿಗೆ ಸುರಕ್ಷಿತ ತಾಣವಾಗಿದೆ. ಇದು ಭಾರತ ತಂಡಕ್ಕೂ ಸವಾಲಾಗಿದೆ.

1988ರಲ್ಲಿ ಕೊನೆಯ ಸೋಲು

1988ರಲ್ಲಿ ಕೊನೆಯ ಸೋಲು

ಆಸ್ಟ್ರೇಲಿಯಾ ತಂಡ ಬ್ರಿಸ್ಬೇನ್‌ನ ಗಾಬಾ ಕ್ರೀಡಾಂಗಣದಲ್ಲಿ ಕೊನೆಯ ಬಾರಿಗೆ ಸೋಲು ಕಂಡಿದ್ದು 1988ರಷ್ಟು ಹಿಂದೆ. ವೆಸ್ಟ್ ಇಂಡೀಸ್ ತಮಡದ ವಿರುದ್ಧ ಅಂದು ಆಸ್ಟ್ರೇಲಿಯಾ 8 ವಿಕೆಟ್‌ಗಳ ಸೋಲನ್ನು ಕಂಡಿತ್ತು. ಅಂದಿನ ವೆಸ್ಟ್ ಇಮಡೀಸ್ ತಂಡದ ನಾಯಕನಾಗಿದ್ದವರು ಸರ್ ವೀವ್ ರಿಚರ್ಡ್ಸ್‌. ಆ ತಂಡದಲ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರರೆನಿಸಿದ ಗಾರ್ಡನ್ ಗ್ರೀನಿಡ್ಜ್, ಮಾಲ್ಕೋಲ್ಮ್ ಮಾರ್ಶಲ್, ಕಾರ್ಟ್ನಿ ವಾಲ್ಶ್, ಕಾರ್ಟ್ಲಿ ಆಂಬ್ರೋಸ್ ಅವರಂತಾ ಆಟಗಾರರು ಇದ್ದರು.

ಸುದೀರ್ಘ ಗೆಲುವಿನ ದಾಖಲೆ

ಸುದೀರ್ಘ ಗೆಲುವಿನ ದಾಖಲೆ

ಗಾಬಾ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಸುದೀರ್ಘ ಕಾಲದಿಂದ ಗೆಲುವನ್ನು ಕಂಡಿರುವ ದಾಖಲೆಯಿದೆ. 1988ರ ಬಳಿಕ ಆಸ್ಟ್ರೇಲಿಯಾ 28 ಅಂತಾರಾಷ್ಟ್ರೀಯ ಟಸ್ಟ್ ಪಂದ್ಯಗಳನ್ನು ಆಡಿದೆ. ಆದರೆ ಒಂದು ಪಂದ್ಯವನ್ನು ಕೂಡ ಸೋತಿಲ್ಲ. ಇದು ವಿಶ್ವದ ಯಾವುದೇ ತಾಣದಲ್ಲೂ ಇಷ್ಟು ಸುದೀರ್ಘ ಪಂದ್ಯಗಳಿಂದ ಯಾವುದೇ ತಂಡ ಮಾಡದಿರುವ ವಿಶೇಷ ದಾಖಲೆಯಾಗಿದೆ.

ಅಬೇಧ್ಯ ಕೋಟೆ ಬೇಧಿಸುತ್ತಾ ರಹಾನೆ ಪಡೆ

ಅಬೇಧ್ಯ ಕೋಟೆ ಬೇಧಿಸುತ್ತಾ ರಹಾನೆ ಪಡೆ

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಗೆಲ್ಲಬೇಕಾದರೆ ಭಾರತ ಗಾಬಾ ಟೆಸ್ಟ್‌ನ ಮಣಿಸಲಾಗದ ದಾಖಲೆಯನ್ನು ಮುರಿಯಲೇಬೇಕಿದೆ. ಆದರೆ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ನಡೆಸಿದ ಕೆಚ್ಚೆದೆಯ ಹೋರಾಟ ಸಹಜವಾಗಿಯೇ ಟೀಮ್ ಇಂಡಿಯಾಗೆ ಹುರುಪನ್ನು ನೀಡಿದೆ. ಆದರೆ ಆಟಗಾರರ ಗಾಯದ ಸಮಸ್ಯೆ ತಂಡದ ಪಾಲಿಗೆ ದೊಡ್ಡ ಹಿನ್ನೆಡೆಯಾಗಿದೆ. ಪ್ರಮುಖ ಆಟಗಾರರಲ್ಲಿ ಬಹುತೇಕರು ಆಡುವ ಬಳಗದಲ್ಲಿ ಕಾಣಿಸಿಕೊಳ್ಳತ್ತಿಲ್ಲ. ಆದರೆ ರಹಾನೆ ಬಳಗದ ಸಾಮರ್ಥ್ಯದ ಬಗ್ಗೆ ಅನುಮಾನ ಪಡುವಂತಿಲ್ಲ.

Story first published: Wednesday, January 13, 2021, 19:08 [IST]
Other articles published on Jan 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X