ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾನು ನಾಯಕತ್ವ ವಹಿಸಬೇಕನ್ನೋದು ಹಾಸ್ಯಾಸ್ಪದವಾಗಿದೆ: ಪ್ಯಾಟ್ ಕಮಿನ್ಸ್

India vs Australia: Captaincy calls ridiculous, says Pat Cummins

ಸಿಡ್ನಿ, ಜನವರಿ 1: ತಾನು ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಳ್ಳಬೇಕನ್ನೋ ಸಲಹೆ ನಿಜಕ್ಕೂ ಹಾಸ್ಯಾಸ್ಪದವಾಗಿದೆ ಎಂದು ಆಸೀಸ್ ವೇಗಿ ಪ್ಯಾಟ್ ಕಮಿನ್ಸ್ ಮಂಗಳವಾರ (ಜನವರಿ 1) ಹೇಳಿದ್ದಾರೆ. ಜೊತೆಗೆ ಟಿಮ್ ಪೈನೆ ಅವರೇ ನಾಯಕತ್ವ ಮುಂದುವರೆಸುವುದಕ್ಕೆ ಬೆಂಬಲಿಸಿದ್ದಾರೆ.

ಟಿಮ್ ಪೈನೆ ಮಕ್ಕಳನ್ನು ನೋಡಿಕೊಳ್ಳೋ ಸವಾಲು ಸ್ವೀಕರಿಸಿದ್ದಾರಾ ಪಂತ್?!ಟಿಮ್ ಪೈನೆ ಮಕ್ಕಳನ್ನು ನೋಡಿಕೊಳ್ಳೋ ಸವಾಲು ಸ್ವೀಕರಿಸಿದ್ದಾರಾ ಪಂತ್?!

ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ 3ನೇ ಟೆಸ್ಟ್ ನಲ್ಲಿ 25ರ ಹರೆಯದ ಕಮಿನ್ಸ್ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡರಲ್ಲೂ ಮಿಂಚಿದ್ದರು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕಮಿನ್ಸ್‌ ಗಳಿಸಿದ್ದ 63 ರನ್ನೇ ಅಧಿಕ ಅನ್ನಿಸಿತ್ತು. ಅಲ್ಲದೆ ಭಾರತದ ದ್ವಿತೀಯ ಇನ್ನಿಂಗ್ಸ್‌ ವೇಳೆ ಕಮಿನ್ಸ್ 6 ವಿಕೆಟ್ ಉರುಳಿಸಿದ್ದರು.

(ವಿಡಿಯೋದಲ್ಲಿ ಆಟಗಾರರ ಕೈ ಕುಲುಕುತ್ತಿರುವ ಆಸೀಸ್ ಸಹ ನಾಯಕ, ಹೃದ್ರೋಗ ಖಾಯಿಲೆಗೆ ತುತ್ತಾಗಿರು 7ರ ಹರೆಯದ ಪುಟಾಣಿ ಆರ್ಚೀ ಷಿಲ್ಲರ್)

ತಂಡವನ್ನು ನಾಯಕನಾಗಿ ಮುನ್ನಡೆಸಬೇಕು ಎಂಬ ಸಲಹೆಗೆ ಕ್ರಿಕೆಟ್ ಆಸ್ಟ್ರೇಲಿಯಾದ ಅಧಿಕೃತ ವೆಬ್‌ಸೈಟ್‌ 'ಕ್ರಿಕೆಟ್ ಡಾಟ್‌ ಕಾಮ್ ಡಾಟ್ ಎಯು' ಜೊತೆ ಮಾತನಾಡಿದ ಕಮಿನ್ಸ್, 'ಈ ಸಂದರ್ಭದಲ್ಲಿ ಇದು ನಿಜಕ್ಕೂ ಹಾಸ್ಯಾಸ್ಪದ ಎಂದು ನನಗನ್ನಿಸುತ್ತಿದೆ' ಎಂದರು.

ಟಿ20 ವಿಶ್ವಕಪ್: ಸೂಪರ್ 12ರ ಹಂತದಲ್ಲಿ ಲಂಕಾ, ಬಾಂಗ್ಲಾಕ್ಕೆ ಸ್ಥಾನವಿಲ್ಲಟಿ20 ವಿಶ್ವಕಪ್: ಸೂಪರ್ 12ರ ಹಂತದಲ್ಲಿ ಲಂಕಾ, ಬಾಂಗ್ಲಾಕ್ಕೆ ಸ್ಥಾನವಿಲ್ಲ

ಆಸ್ಟ್ರೇಲಿಯಾದ ಉತ್ತಮ ವೇಗಿಗಳಲ್ಲಿ ಗುರುತಿಸಿಕೊಂಡಿರುವ ಪ್ಯಾಟ್, ಭಾರತ vs ಆಸೀಸ್ ಮೊದಲ ಮೂರು ಟೆಸ್ಟ್ ಪಂದ್ಯಗಳಲ್ಲಿ 20.07 ಸರಾಸರಿಯಂತೆ 14 ವಿಕೆಟ್ ಗಳಿಸಿದ್ದರು. ಹೀಗಾಗಿ ಅವರು ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ವೃತ್ತಿಜೀವನಶ್ರೇಷ್ಠ 3ನೇ ರ್ಯಾಂಕ್‌ಗೆ ಜಿಗಿದಿದ್ದಾರೆ. ಮೊದಲ ಸ್ಥಾನದಲ್ಲಿ ಸೌತ್‌ ಆಫ್ರಿಕಾದ ಕಾಗಿಸೋ ರಬಾಡ ಇದ್ದಾರೆ.

Story first published: Tuesday, January 1, 2019, 21:04 [IST]
Other articles published on Jan 1, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X