ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ಮೊದಲ ದಿನದಂತ್ಯಕ್ಕೆ ಆಸಿಸ್ 274/5 , ಸಂಪೂರ್ಣ ಹೈಲೈಟ್ಸ್

India vs Australia: complete Highlights of Brisbane test Day 1

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಅಂತಿಮ ಪಂದ್ಯದ ಮೊದಲ ದಿನದಾಟ ಅಂತ್ಯವಾಗಿದೆ. ಮೊದಲ ದಿನದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಎರಡೂ ತಂಡಗಳು ಸಮಾನ ಗೌರವ ಸಂಪಾದಿಸಿದೆ. ಭಾರತ ಆಸ್ಟ್ರೇಲಿಯಾದ ಐದು ಪ್ರಮುಖ ವಿಕೆಟ್ ಕೀಳುವಲ್ಲಿ ಯಶಸ್ವಿಯಾಗಿದ್ದರೆ, ಆಸ್ಟ್ರೇಲಿಯಾ 267 ರನ್ ಗಳಿಸಿ ಎರಡನೇ ದಿನಕ್ಕೆ ಆಟವನ್ನು ಕಾಯ್ದುಕೊಂಡಿದೆ.

ಗಾಯದ ಸಮಸ್ಯೆಯಿಂದಾಗಿ ಟೀಮ್ ಇಂಡಿಯಾ ಸಂಪೂರ್ಣ ಅನನುಭವಿ ಬೌಲಿಂಗ್ ಬಳಗದೊಂದಿಗೆ ಕಣಕ್ಕಿಳಿಯಿತು. ಆದರೆ ಆಸ್ಟ್ರೇಲಿಯಾದ ಆರಂಭಿಕರನ್ನು ಶೀಘ್ರದಲ್ಲೇ ಫೆವಿಲಿಯನ್‌ಗೆ ಕಳುಹಿಸುವಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು ಯಶಸ್ವಿಯಾದರು. ಡೇವಿಡ್ ವಾರ್ನರ್ ಈ ಪಂದ್ಯದಲ್ಲೂ ಬೇಗನೆ ವಿಕೆಟ್ ಒಪ್ಪಿಸುವ ಮೂಲಕ ಆತಿಥೇಯರಿಗೆ ಮೊದಲ ಆಘಾತವನ್ನು ನೀಡಿದರು.

ನಿರ್ಣಾಯಕ ಟೆಸ್ಟ್‌ಗೆ ಅಶ್ವಿನ್, ಬೂಮ್ರಾ ಇಲ್ಲ: ಬೌಲಿಂಗ್ ವಿಭಾಗದ ಒಟ್ಟು ಅನುಭವ 4 ಟೆಸ್ಟ್ ನಿರ್ಣಾಯಕ ಟೆಸ್ಟ್‌ಗೆ ಅಶ್ವಿನ್, ಬೂಮ್ರಾ ಇಲ್ಲ: ಬೌಲಿಂಗ್ ವಿಭಾಗದ ಒಟ್ಟು ಅನುಭವ 4 ಟೆಸ್ಟ್

ಟಾಸ್ ಗೆದ್ದ ಆಸ್ಟ್ರೇಲಿಯಾ ತನ್ನ ಅದೃಷ್ಠದ ಅಂಗಳದಲ್ಲಿ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿತು. ಆದರೆ ತಂಡ 4 ರನ್ ಗಳಿಸಿದ್ದ ವೇಳೆ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಕೇವಲ 1 ರನ್ ಗಳಿಸಿ ಮೊಹಮ್ಮದ್ ಸಿರಾಜ್‌ಗೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿದರು. ಅದಾದ ಬಳಿಕ ಮಾರ್ಕಸ್ ಹ್ಯಾರಿಸ್ ಕೂಡ ತಂಡ 17 ರನ್ ಗಳಿಸಿದ್ದ ವೇಳೆ 5 ರನ್‌ಗಳ ಕೊಡುಗೆಯನ್ನಷ್ಟೇ ನೀಡಿ ವಿಕೆಟ್ ಒಪ್ಪಿಸಿ ಹೊರನಡೆದರು. ಹ್ಯಾರಿಸ್ ವಿಕೆಟ್ ಶಾರ್ದೂಲ್ ಠಾಕೂರ್ ಪಾಲಾಗಿತ್ತು.

ಚೇತರಿಕೆ ನೀಡಿದ ಸ್ಮಿತ್- ಲಾಬುಶೇನ್ ಜೋಡಿ

ಚೇತರಿಕೆ ನೀಡಿದ ಸ್ಮಿತ್- ಲಾಬುಶೇನ್ ಜೋಡಿ

ಅಗ್ಗಕ್ಕೆ ಎರಡು ವಿಕೆಟ್ ಕಳೆದುಕೊಂಡಿದ್ದ ವೇಳೆ ಜೊತೆಯಾದ ಸ್ಟೀವ್ ಸ್ಮಿತ್ ಹಾಗೂ ಲಾಬುಶೇನ್ ಜೋಡಿ ತಂಡಕ್ಕೆ ಅಗತ್ಯವಿದ್ದ ಚೇತರಿಕೆಯನ್ನು ಒದಗಸಿದರು. ಮೂರನೇ ವಿಕೆಟ್‌ಗೆ ಈ ಜೊಡಿ ಅರ್ಧ ಶತಕದ ಜೊತೆಯಾಟವನ್ನು ನೀಡಿದರು. ಉತ್ತಮ ಲಯದಲ್ಲಿದ್ದ ಸ್ಟೀವ್ ಸ್ಮಿತ್ ಮತ್ತೊಂದು ದೊಡ್ಡ ಇನ್ನಿಂಗ್ಸ್‌ ಆಡುವ ಸೂಚನೆ ನೀಡಿದರು. ಆದರೆ 36 ರನ್ ಗಳಿಸಿದ್ದ ವೇಳೆ ಸ್ಮಿತ್‌ಗೆ ವಾಶಿಂಗ್ಟನ್ ಸುಂದರ್ ಆಘಾತ ನೀಡಿದರು. ರೋಹಿತ್ ಶರ್ಮಾಗೆ ಕ್ಯಾಚ್ ನೀಡುವ ಟೆಸ್ಟ್‌ನಲ್ಲಿ ಸುಂದರ್‌ಗೆ ಚೊಚ್ಚಲ ವಿಕೆಟ್ ಆಗಿ ಫೆವಿಲಿಯನ್ ಸೇರಿಕೊಂಡರು.

ಶತಕ ಸಿಡಿಸಿದ ಲಾಬುಶೇನ್

ಶತಕ ಸಿಡಿಸಿದ ಲಾಬುಶೇನ್

ಆಸ್ಟ್ರೇಲಿಯಾ ತಂಡದ ಯುವ ಬ್ಯಾಟ್ಸ್‌ಮನ್ ಮಾರ್ನಸ್ ಲ್ಯಾಬುಶೇನ್‌ಗೆ ಬಳಿಕ ಜೊತೆಯಾಗಿದ್ದು ಅನುಭವಿ ಮ್ಯಾಥ್ಯೂ ವೇಡ್. ಆಸ್ಟ್ರೇಲಿಯಾಗೆ 113 ರನ್‌ಗಳ ಜೊತೆಯಾಟವನ್ನು ನೀಡುವ ಮೂಲಕ ದೊಡ್ಡ ಬಲ ತುಂಬಿದರು. ಭಾರತೀಯ ಫೀಲ್ಡರ್‌ಗಳು ಕೈಚೆಲ್ಲಿದ ಕ್ಯಾಚ್‌ಗಳನ್ನು ಉತ್ತಮವಾಗಿ ಬಳಸಿಕೊಂಡ ಲಾಬುಶೇನ್ ಟೆಸ್ಟ್‌ನಲ್ಲಿ ಐದನೇ ಶತಕವನ್ನು ಸಿಡಿಸಿ ಮಿಂಚಿದರು. ಈ ಮೂಲಕ ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯಾಗೆ ಶಕ್ತಿ ತುಂಬಿದರು.

ನಟರಾಜನ್‌ಗೆ ಬಲಿಯಾದ ಲಾಬುಶೇನ್-ವೇಡ್

ನಟರಾಜನ್‌ಗೆ ಬಲಿಯಾದ ಲಾಬುಶೇನ್-ವೇಡ್

ಲಾಬುಶೇನ್ ಹಾಗೂ ಮ್ಯಾಥ್ಯೂ ವೇಡ್ ವಿಕೆಟ್ ಪಡೆಯಲು ಟೀಮ್ ಇಂಡಿಯಾದ ಯುವ ಬೌಲಿಂಗ್ ಪಡೆ ನಾನಾ ರೀತಿಯ ಶ್ರಮ ವಹಿಸಿದರೂ ಯಶಸ್ವಿಯಾಗಲಿಲ್ಲ. ಆದರೆ ಇನ್ನಿಂಗ್ಸ್‌ನ 63ನೇ ಓವರ್‌ನಲ್ಲಿ ಚೊಚ್ಚಲ ಪಂದ್ಯವನ್ನಾಡುತ್ತಿರುವ ಟಿ ನಟರಾಜನ್ 45 ರನ್ ಗಳಿಸಿದ್ದ ಮ್ಯಾಥ್ಯೂ ವೇಡ್ ವಿಕೆಟ್‌ ಪಡೆಯುವ ಮೂಲಕ ಭಾರತಕ್ಕೆ ಮತ್ತೊಮ್ಮೆ ಯಶಸ್ಸು ತಂದುಕೊಟ್ಟರು. ಅದಾದ ಬಳಿಕ ಮುಂದಿನ ಓವರ್‌ನಲ್ಲಿ ಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ಲಾಬುಶೇನ್(108 ರನ್) ಕೂಡ ನಟರಾಜ್ ಎಸೆತ ಶಾರ್ಟ್ ಪಿಚ್ ಎಸೆತವನ್ನು ಪುಲ್ ಮಾಡುವ ಯತ್ನದಲ್ಲಿ ವಿಫಲವಾಗಿ ಕೀಪರ್ ಪಂತ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದ್ದಾರೆ.

ಯುವ ಬೌಲಿಂಗ್ ಪಡೆಯ ಉತ್ತಮ ದಾಳಿ

ಯುವ ಬೌಲಿಂಗ್ ಪಡೆಯ ಉತ್ತಮ ದಾಳಿ

ಸದ್ಯ ಯುವ ಆಟಗಾರ ಕ್ಯಾಮ್ರೂನ್ ಗ್ರೀನ್ 28 ರನ್‌ಗಳಿಸಿದ್ದು 38 ರನ್ ಗಳಿಸಿರುವ ನಾಯಕ ಟಿಮ್ ಪೈನ್ ಜೊತೆಗೆ ಬ್ಯಾಟಿಂಗ್ ನಡೆಸುತ್ತಿದ್ದು ಅರ್ಧ ಶತಕದ ಜೊತೆಯಾಟವನ್ನು ನೀಡಿದ್ದಾರೆ. ಈ ಇಬ್ಬರು ಆಟಗಾರರು ಎರಡನೇ ದಿನಕ್ಕೆ ಆಟವನ್ನು ಕಾಯ್ದುಕೊಂಡಿದ್ದಾರೆ. ಭಾರತದ ಪರವಾಗಿ ಟಿ ನಟರಾಜನ್ ಎರಡು ವಿಕೆಟ್ ಪಡೆದುಕೊಂಡಿದ್ದರೆ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್ ಹಾಗೂ ವಾಶಿಂಗ್ಟನ್ ಸುಂದರ್ ತಲಾ ಒಂದು ವಿಕೆಟ್ ಪಡೆದಿಕೊಂಡಿದ್ದಾರೆ.

Story first published: Friday, January 15, 2021, 16:00 [IST]
Other articles published on Jan 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X