ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

India vs Australia: ದ್ವಿತೀಯ ಏಕದಿನ ಪಂದ್ಯದಿಂದ ರಿಷಬ್ ಪಂತ್ ಹೊರಕ್ಕೆ!

Rishabh Pant ruled out of Rajkot ODI due to concussion | RISHAB PANT | ONEINDIA KANNADA
India vs Australia: Concussed Rishabh Pant ruled out of 2nd ODI

ರಾಜ್‌ಕೋಟ್‌, ಜನವರಿ 16: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಿಂದ ಯುವ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ರಿಷಬ್ ಪಂತ್ ಹೊರ ಬಿದ್ದಿದ್ದಾರೆ. ಮೊದಲ ಏಕದಿನ ಪಂದ್ಯದ ವೇಳೆ ಹೆಲ್ಮೆಟ್‌ಗೆ ಚೆಂಡು ಬಡಿದು ಪಂತ್‌ ಗಾಯಗೊಂಡಿದ್ದರು. ಪಂತ್‌ ಈಗ ಸಂಪೂರ್ಣ ಚೇತರಿಸಿಕೊಂಡಿಲ್ಲ. ಹೀಗಾಗಿ ದ್ವಿತೀಯ ಪಂದ್ಯದಲ್ಲಿ ಆಡುತ್ತಿಲ್ಲ.

ICC Awards: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿ ಪ್ರಶಸ್ತಿ ಗೆದ್ದ ಎಲ್ಲರ ಪಟ್ಟಿICC Awards: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿ ಪ್ರಶಸ್ತಿ ಗೆದ್ದ ಎಲ್ಲರ ಪಟ್ಟಿ

ಭಾರತ-ಆಸ್ಟ್ರೇಲಿಯಾ ಆರಂಭಿಕ ಪಂದ್ಯದಲ್ಲಿ ಭಾರತದ ಇನ್ನಿಂಗ್ಸ್‌ ವೇಳೆ ಬ್ಯಾಟಿಂಗ್‌ ಮಾಡುತ್ತಿದ್ದ ರಿಷಬ್ ಪಂತ್‌, ಹೆಲ್ಮೆಟ್‌ಗೆ ಚೆಂಡು ಬಡಿದು ಗಾಯಕ್ಕೀಡಾಗಿದ್ದರು. ಹೀಗಾಗಿ ಆಸ್ಟ್ರೇಲಿಯಾ ಇನ್ನಿಂಗ್ಸ್‌ನಲ್ಲಿ ಪಂತ್‌ ಫೀಲ್ಡಿಂಗ್‌ಗೆ ಇಳಿದಿರಲಿಲ್ಲ. ಪಂತ್‌ ಅನುಪಸ್ಥಿತಿಯಲ್ಲಿ ವಿಕೆಟ್‌ ಕೀಪಿಂಗ್‌ ಜವಾಬ್ದಾರಿಯನ್ನು ಕನ್ನಡಿಗ ಕೆಎಲ್ ರಾಹುಲ್ ವಹಿಸಿಕೊಂಡಿದ್ದರು.

ಪೃಥ್ವಿಶಾ ಫಿಟ್ನೆಸ್ ಪಾಸ್: ಭಾರತ 'ಎ' ತಂಡ ಸೇರಲು ಸಿದ್ಧವಾದ ಯುವ ಆಟಗಾರಪೃಥ್ವಿಶಾ ಫಿಟ್ನೆಸ್ ಪಾಸ್: ಭಾರತ 'ಎ' ತಂಡ ಸೇರಲು ಸಿದ್ಧವಾದ ಯುವ ಆಟಗಾರ

ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯಕ್ಕಾಗಿ ಟೀಮ್ ಇಂಡಿಯಾ ರಾಜ್‌ಕೋಟ್‌ಗೆ ತಲುಪಿದೆ. ಆದರೆ ಪಂತ್‌, ಗಾಯ ಸುಧಾರಣೆ ಮತ್ತು ಪರೀಕ್ಷೆಗೊಳಪಡುವುದಕ್ಕಾಗಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.

ಟೀಮ್ ಇಂಡಿಯಾದ ಯಾವ ನಾಯಕನಿಗೂ ಆಗದ ಅವಮಾನಕ್ಕೆ ತುತ್ತಾದ ಕೊಹ್ಲಿಟೀಮ್ ಇಂಡಿಯಾದ ಯಾವ ನಾಯಕನಿಗೂ ಆಗದ ಅವಮಾನಕ್ಕೆ ತುತ್ತಾದ ಕೊಹ್ಲಿ

'ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಿಂದ ರಿಷಬ್ ಪಂತ್ ಹೊರಬಿದ್ದಿದ್ದಾರೆ. ಅಂತಿಮ ಏಕದಿನದಲ್ಲಿ ಪಂತ್‌ ಆಡುತ್ತಾರೋ ಇಲ್ಲವೊ ಅನ್ನೋದು ಅವರು ರಿಹ್ಯಾಬಿಲಿಟೇಶನ್ ಪ್ರೋಟೋಕಾಲ್ ವೇಳೆ ಹೇಗೆ ಸ್ಪಂದಿಸಲಿದ್ದಾರೆ ಅನ್ನೋದರ ಮೇಲೆ ನಿರ್ಧಾರವಾಗಲಿದೆ,' ಎಂದು ಬಿಸಿಸಿಐ ತಿಳಿಸಿದೆ.

ಭಾರತ ವಿರುದ್ಧ ಹೊಸ ದಾಖಲೆ ಬರೆದ ಡೇವಿಡ್ ವಾರ್ನರ್, ಆ್ಯರನ್ ಫಿಂಚ್!ಭಾರತ ವಿರುದ್ಧ ಹೊಸ ದಾಖಲೆ ಬರೆದ ಡೇವಿಡ್ ವಾರ್ನರ್, ಆ್ಯರನ್ ಫಿಂಚ್!

ಆರಂಭಿಕ ಪಂದ್ಯದಲ್ಲಿ ಪಂತ್‌ 28 ರನ್ ಬಾರಿಸಿ ಪ್ಯಾಟ್‌ ಕಮಿನ್ಸ್‌ಗೆ ವಿಕೆಟ್ ನೀಡಿದ್ದರು. ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ 10 ವಿಕೆಟ್‌ಗಳ ಹೀನಾಯ ಸೋಲನುಭವಿಸಿತ್ತು. ಸದ್ಯ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಸೀಸ್ 1-0ಯ ಮುನ್ನಡೆಯಲ್ಲಿದ್ದು, ಸರಣಿ ಉಳಿವಿಗಾಗಿ ಭಾರತ ದ್ವಿತೀಯ ಪಂದ್ಯದಲ್ಲಿ ಗೆಲ್ಲಲೇಬೇಕಿದೆ. 2ನೇ ಪಂದ್ಯ 1.30 pmಗೆ ಆರಂಭಗೊಳ್ಳಲಿದೆ.

Story first published: Thursday, January 16, 2020, 10:36 [IST]
Other articles published on Jan 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X