ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ಕನ್ನಡ ಅವಗಣನೆಗೆ ದೊಡ್ಡ ಗಣೇಶ್ ಬೇಸರ

India vs Australia: Cricketer Dodda Ganesh upset for neglecting Kannada

ಬೆಂಗಳೂರು: ಭಾರತ vs ಆಸ್ಟ್ರೇಲಿಯಾ ಸರಣಿಗೆ ಸಂಬಂಧಿಸಿ ಟೂರ್ನಿಯ ಅಧಿಕೃತ ಪ್ರಸಾರಕ ಸೋನಿ ಪಿಕ್ಚರ್ಸ್ ಸ್ಪೋರ್ಟ್ಸ್ ನೆಟ್ವರ್ಕ್ (ಎಸ್‌ಪಿಎಸ್‌ಎನ್) ಕಾಮೆಂಟೇಟರ್‌ಗಳ ಪಟ್ಟಿ ಪ್ರಕಟಿಸಿತ್ತು. ಇದಕ್ಕೆ ಭಾರತದ ಆಟಗಾರ, ಕನ್ನಡಿಗ ದೊಡ್ಡ ಗಣೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

ಭಾರತ vs ಆಸೀಸ್: ಕಾಮೆಂಟೇಟರ್ಸ್ ಪಟ್ಟಿಯಲ್ಲಿ ಸಂಜಯ್ ಮಂಜ್ರೇಕರ್ಭಾರತ vs ಆಸೀಸ್: ಕಾಮೆಂಟೇಟರ್ಸ್ ಪಟ್ಟಿಯಲ್ಲಿ ಸಂಜಯ್ ಮಂಜ್ರೇಕರ್

ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸ ಸರಣಿಗಳಿಗಾಗಿ ಸೋನಿ ಪಿಕ್ಚರ್ಸ್ ಸ್ಪೋರ್ಟ್ಸ್ ನೆಟ್ವರ್ಕ್ ಪ್ರಕಟಿಸಿದ್ದ ಕಾಮೆಂಟೇಟರ್ಸ್ ಪಟ್ಟಿಯಲ್ಲಿ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಕಾಮೆಂಟರಿ ನೀಡುವ ಕಾಮೆಂಟೇಟರ್‌ಗಳ ಹೆಸರುಗಳಿದ್ದವು. ಆದರೆ ಈ ಪಟ್ಟಿಯಲ್ಲಿ ಕನ್ನಡ ಭಾಷೆಯೇ ಇರಲಿಲ್ಲ.

ಆಸ್ಟ್ರೇಲಿಯಾದಲ್ಲಿ ಭಾರತ: ಕೆಎಲ್ ರಾಹುಲ್ ತಂಡ ಸೋಲಿಸಿದ ಕೊಹ್ಲಿ ಪಡೆಆಸ್ಟ್ರೇಲಿಯಾದಲ್ಲಿ ಭಾರತ: ಕೆಎಲ್ ರಾಹುಲ್ ತಂಡ ಸೋಲಿಸಿದ ಕೊಹ್ಲಿ ಪಡೆ

ಪ್ರಮುಖ ಸರಣಿಯೊಂದರಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಿರುವ ಸೋನಿ ಸ್ಪೋರ್ಟ್ಸ್‌ ನಡೆಗೆ ಬೇಸರ ತೋರಿ ದೊಡ್ಡ ಗಣೇಶ್ ಟ್ವೀಟ್ ಮಾಡಿದ್ದಾರೆ. ದೊಡ್ಡ ಗಣೇಶ್ ಭಾರತ ಪರ 4 ಟೆಸ್ಟ್, 1 ಏಕದಿನ ಪಂದ್ಯಗಳಲ್ಲಿ ಆಡಿ ಕ್ರಮವಾಗಿ 5, 1 ವಿಕೆಟ್ ಪಡೆದಿದ್ದಾರೆ. ಗಣೇಶ್ ಮೂಲತಃ ಬೆಂಗಳೂರಿನವರು.

ಕನ್ನಡ ಮ್ತತು ಕನ್ನಡಿಗರ ನಿರ್ಲಕ್ಷಿಸಿರುವ ಸೋನಿ ನೆಟ್ವರ್ಕ್ಸ್‌ಗೆ ಟ್ವೀಟ್ ಮಾಡಿರುವ ಗಣೇಶ್, 'ಡಿಯರ್ ಸೋನಿ ಸ್ಪೋರ್ಟ್ಸ್ ಇಂಡಿಯಾ, ಭಾರತದ ಆಸ್ಟ್ರೇಲಿಯಾ ಪ್ರವಾಸಕ್ಕೆ ಯಾಕೆ ಕನ್ನಡ ಕಾಮೆಂಟರಿಯಿಲ್ಲ? ಐಪಿಎಲ್ ಮತ್ತು ಇತರ ಭಾರತದ ಪಂದ್ಯಗಳು ಕನ್ನಡದಲ್ಲಿ ಒಳ್ಳೆಯ ರೀತಿಯಲ್ಲಿ ಸ್ವೀಕೃತಗೊಂಡಿದೆ. ದಯವಿಟ್ಟು ನಿಮ್ಮ ನೆಟ್ವರ್ಕ್‌ನಲ್ಲಿ ಕನ್ನಡವನ್ನೂ ಪರಿಗಣಿಸಿ. ನಾವು ಸುಮಾರು 6 ಕೋಟಿ ಕನ್ನಡಿಗರಿದ್ದೇವೆ,' ಎಂದು ಬರೆದುಕೊಂಡಿದ್ದಾರೆ.

Story first published: Monday, November 23, 2020, 17:08 [IST]
Other articles published on Nov 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X