ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ಶತಕಗಳಿಸಿ ಟ್ರೋಲ್‌ಗೆ ಒಳಗಾದ ಆಸಿಸ್ ನಾಯಕ ಫಿಂಚ್

India vs Australia: Fans Hilariously Trolled Aaron Finch On Twitter

ಆಸ್ಟ್ರೇಲಿಯಾ ಹಾಗೂ ಟೀಮ್ ಇಂಡಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ ಹಾಗೂ ಸ್ಟೀವ್ ಸ್ಮಿತ್ ಸಿಡಿಸಿದ ಶತಕದ ನೆರವಿನಿಂದ ಟೀಮ್ ಇಂಡಿಯಾ ರನ್‌ಗಳ ಗುರಿಯನ್ನು ನೀಡಿದೆ.

ಈ ಪಂದ್ಯದಲ್ಲಿ ಆಸಿಸ್ ನಾಯಕ ಆರೋನ್ ಫಿಂಚ್ ನೀಡಿದ ಭರ್ಜರಿ ಪ್ರದರ್ಶನ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ ಆದರೆ ಇದರ ಜೊತೆಗೆ ಟ್ರೋಲಿಗರಿಗೂ ಆಹಾರವಾಗಿದೆ. ಇದಕ್ಕೆ ಕಾರಣ ಐಪಿಎಲ್‌ನಲ್ಲಿ ಫಿಂಚ್ ಕಳಪೆ ಪ್ರದರ್ಶನ. ಆದರೆ ಆಸ್ಟ್ರೇಲಿಯಾ ತಂಡದ ಪರವಾಗಿ ಕಣಕ್ಕಿಳಿದ ಫಿಂಚ್ ಮೊದಲ ಏಕದಿನ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡಿದ್ದಾರೆ. ಮಾತ್ರವಲ್ಲ ತಂಡದ ಬೃಹತ್ ಮೊತ್ತಕ್ಕೆ ಕಾರಣವಾಗಿದ್ದಾರೆ.

ಭಾರತ vs ಆಸ್ಟ್ರೇಲಿಯಾ, ಮೊದಲನೇ ಏಕದಿನ ಪಂದ್ಯ, Live ಸ್ಕೋರ್‌ಭಾರತ vs ಆಸ್ಟ್ರೇಲಿಯಾ, ಮೊದಲನೇ ಏಕದಿನ ಪಂದ್ಯ, Live ಸ್ಕೋರ್‌

ಹೀಗಾಗಿ ಆರ್‌ಸಿಬಿ ಅಭಿಮಾನಿಗಳು ಫಿಂಚ್ ಅವರನ್ನು ಟ್ರೋಲ್‌ ಮಾಡುತ್ತಿದ್ದಾರೆ. ಇದರ ಜೊತೆಗೆ ಮಾಜಿ ಕ್ರಿಕೆಟಿಗ ಆಕಾಶ ಚೋಪ್ರ ಕೂಡ ಫಿಂಚ್ ಪ್ರದರ್ಶನದ ಬಗ್ಗೆ ತಮಾಷೆಯಾಗಿ ಟ್ವೀಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಫಿಂಚ್ ಅವರನ್ನು ಸಿಂಹಕ್ಕೆ ಹೋಲಿಸಿರುವ ಈ ಟ್ವೀಟ್‌ನಲ್ಲಿ ಆಸಿಸ್ ಪರವಾಗಿ ಘರ್ಜಿಸುತ್ತಿರುವಂತೆಯೂ ಆರ್‌ಸಿಬಿ ತಂಡದ ಪರವಾಗಿ ಮಲಗಿಕೊಂಡಿರುವಂತೆ ಬಿಂಬಿಸಲಾಗಿದೆ. ಇದು ಸಾಕಷ್ಟು ವೈರಲ್ ಆಗಿದೆ.

ಇನ್ನು ಖ್ಯಾತ ಕಾಮೆಂಟೇಟರ್ ಹರ್ಷ ಭೋಗ್ಲೆ ಕೂಡ ಫಿಂಚ್ ಪ್ರದರ್ಶನದ ಬಗ್ಗೆ ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. "ಆರೋನ್ ಫಿಂಚ್ ಎಂಬ ಹೆಸರಿನ ಇಬ್ಬರು ಆಟಗಾರರು ಇದ್ದಾರೆಯೇ ಎಂದು ಪ್ರಶ್ನಿಸುತ್ತಿದ್ದಾರೆ" ಎಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಇನ್ನು ಇದೇ ರೀತಿಯಲ್ಲಿ ಅಭಿಮಾನಿಗಳು ಕೂಡ ಆರೋನ್ ಫಿಂಚ್ ಪ್ರದರ್ಶನಕ್ಕೆ ಟ್ವೀಟ್‌ನಲ್ಲಿ ಟ್ರೋಲ್ ಮೂಲಕ ಕಾಲೆಳೆದಿದ್ದಾರೆ. ಫಿಂಚ್ ಆಸ್ಟ್ರೇಲಿಯಾ ಪರವಾಗಿ ಮೊದಲ ಪಂದ್ಯದಲ್ಲಿ 114 ರನ್ ಗಳಿಸಿದ್ದಾರೆ. ಆರ್‌ಸಿಬಿ ಪರವಾಗಿ ಕಳೆದ ಐಪಿಎಲ್ ಆವೃತ್ತಿಯಲ್ಲಿ 12 ಪಂದ್ಯಗಳನ್ನು ಆಡಿದ್ದ ಫಿಂಚ್ 268 ರನ್ ಗಳಿಸಿದ್ದರು.

Story first published: Friday, November 27, 2020, 13:55 [IST]
Other articles published on Nov 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X